ದಾವಣಗರೆ[ಮಾ. 29] ಮಹತ್ವದ ಬೆಳವಣಿಗೆಯಲ್ಲಿ ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಬದಲಾಗಿದ್ದಾರೆ. ಅಪ್ಪ ಶಾಮನೂರು ಬದಲಿಗೆ ಮಗ ಮಲ್ಲಿಕಾರ್ಜುನ ಕಾಂಗ್ರೆಸ್ ಉಮೇದುವಾರರಾಗಿದ್ದಾರೆ.

ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಕಣಕ್ಕೆ ಇಳಿಯುವುದು ಪಕ್ಕಾ ಆಗಿದೆ. ಟಿಕೆಟ್ ನೀಡಿದ್ದರೂ ಶಾಮನೂರು ಶಿವಶಂಕರಪ್ಪ ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದರು.

ಮಂಡ್ಯ ರಣಕಣದಲ್ಲಿ ಮತ್ತೊಂದು ಸ್ಫೋಟ: ಸುಮಲತಾ ಅಂಬರೀಶ್‌ಗೆ ನೊಟೀಸ್

ಶ್ಯಾಮನೂರು ಪುತ್ರ ಮಲ್ಲಿಕಾರ್ಜುನ ಅವರೊಂದಿಗೆ ನಿರಂತರ ಚರ್ಚೆ ನಡೆಸಿದ ಕಾಂಗ್ರೆಸ್ ನಾಯಕರು ಅವರನ್ನೇ ಅಂತಿಮ ಮಾಡಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ್ ಕರೆಸಿಕೊಂಡು ಚರ್ಚೆ ನಡೆಸಿದ ಕೆ.ಸಿ ವೇಣುಗೋಪಾಲ್. ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೂಚನೆ ನೀಡಿದ್ದರಿಂದ ಇದೀಗ ಮಲ್ಲಿಕಾರ್ಜುನ ಮತ್ತು ಬಿಜೆಪಿಯ ಜಿ.ಎಂ ಸಿದ್ದೇಶ್ವರ ಅವರ ನಡುವೆ ನೇರ  ಹಣಾಹಣಿ ಏರ್ಪಡಲಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.