ಮಂಡ್ಯ[ಮಾ.29] ಮಹತ್ವದ ಬೆಳವಣಿಗೆಯಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ಗೆ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ.

ಜಿಲ್ಲಾಡಳಿತ ಮೇಲೆ ಅಪನಂಬಿಕೆ ಬರುವಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಕಾರಣಕ್ಕೆ ನೋಟಿಸ್ ನೀಡಲಾಗಿದೆ. ಐಪಿಸಿ ಸೆಕ್ಷನ್ 189ರಡಿ ನೋಟಿಸ್ ಜಾರಿ ಮಾಡಿದ ಡಿಸಿ ಮಂಜುಶ್ರೀ ಒಂದು ದಿನದೊಳಗೆ ಸಮಜಾಯಿಷಿ ಕೊಡದಿದ್ದರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುಮಲತಾಗೆ ಕೈಕೊಟ್ಟ ಅದೃಷ್ಟ, ಬಯಸಿದ್ದ ಚಿಹ್ನೆ ಬೇರೆಯವರ ಪಾಲು..!

‘ನ್ಯಾಮಿನೇಷನ್ ಪೇಪರ್ ನಲ್ಲಿ ಎರರ್ ಇದೆ, ಆ ತಪ್ಪನ್ನು ಮುಚ್ಚಿಡೋಕೆ ಆಫೀಯಲ್ ಮೆಷಿನರಿ ವರ್ಕ್ ಮಾಡ್ತಿದೆ. ಸಿಎಂ ರವರು ಡಿಸಿ ರವರು ಮನೆಗೆ ಕರೆಸಿಕೊಂಡು ಮಾತನಾಡಿದ್ದಾರೆಂಬ ಮಾಹಿತಿ ನನಗೆ ಸಿಕ್ಕಿದೆ. ಇಟ್ ಇಸ್ ಟೋಟಲ್ ಬ್ರೇಕಿಂಗ್ ಆಫ್ ಲಾ, ಇದು ಎಲ್ಲು ನಡೆಯಲ್ಲ’ ಎಂಬ ಸುಮಲತಾ ಹೇಳಿಕೆ ಆಧಾರದಲ್ಲಿ ನೋಟಿಸ್ ನೀಡಲಾಗಿದೆ.

ಆ ಹೇಳಿಕೆಗಳಿಂದ ನನ್ನ ವ್ಯಕ್ತಿತ್ವಕ್ಕೆ ಸಾಮಾಜಿಕವಾಗಿ ಧಕ್ಕೆ ಬಂದಿದೆ. ಆಫೀಷಿಯಲ್ ಮೆಷಿನರಿಯನ್ನು ಸಿಎಂ ಳಸಿಕೊಳ್ಳುತ್ತಿದ್ದಾರೆಂದ ಹೇಳಿಕೆಯಿಂದ ಜಿಲ್ಲಾಮಟ್ಟದ ಅಧಿಕಾರಿಗಳು ಒತ್ತಡಕ್ಕೊಳಗಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಉಲ್ಲೇಖ ಮಾಡಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.