ಮೈಸೂರು[ಮಾ.25]: ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಅಭ್ಯರ್ಥಿಯಾಗಿದ್ದ ತಮ್ಮ ಪತ್ನಿ ಗೀತಾ ಪರ ಪ್ರಚಾರ ನಡೆಸಿದ್ದ ಚಿತ್ರನಟ ಶಿವರಾಜ್‌ ಕುಮಾರ್‌ ಈ ಬಾರಿ ತಾನು ಯಾರ ಪರವಾಗಿಯೂ ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

’ನನ್ನ ಬೆಂಬಲಯಿಲ್ಲ’; ಮಂಡ್ಯ ಸ್ಪರ್ಧೆ ಬಗ್ಗೆ ಗಮನ ಸೆಳೆದಿದೆ ಪುನೀತ್ ಪತ್ರ

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಚ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ರಾಜಕೀಯ ಗೊತ್ತಿಲ್ಲ. ಆದ್ದರಿಂದ ರಾಜಕೀಯಕ್ಕೆ ನಾನು ಬರುವುದಿಲ್ಲ. ಗೊತ್ತಿಲ್ಲದ ಕೆಲಸ ಮಾಡಿದರೆ ದಡ್ಡ ಅಂತಾರೆ. ‘ಬಡವ ನಾ ಮಡಗಿದಂಗಿರು’ ಅಂತ ಹೀಗೆ ಇರುತ್ತೇನೆ. ನನ್ನ ಹೆಂಡತಿ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದ ಕಾರಣಕ್ಕೆ ಆಗ ಪ್ರಚಾರಕ್ಕೆ ಹೋಗಿದ್ದೆ. ಈಗ ಎಲ್ಲಿಗೂ ಪ್ರಚಾರಕ್ಕೆ ಹೋಗುವುದಿಲ್ಲ. ಯಾರು ಕರೆದರೂ ಹೋಗಲಾರೆ. ಶಿವಮೊಗ್ಗದಲ್ಲಿ ಸ್ಪರ್ಧಿಸುತ್ತಿರುವುದು ತಮ್ಮನೇ ಆದ್ದರಿಂದ ನನ್ನ ಹೆಂಡತಿ ಪ್ರಚಾರಕ್ಕೆ ಹೋಗಬಹುದು. ಆದರೆ ನಾನು ಹೋಗುವುದಿಲ್ಲ.

ರಾಜಕೀಯಕ್ಕೆ ನಾನು ಬರುವುದಿಲ್ಲ. ಗೊತ್ತಿಲ್ಲದ ಕೆಲಸ ಮಾಡಿದರೆ ದಡ್ಡ ಅಂತಾರೆ. ‘ಬಡವ ನಾ ಮಡಗಿದಂಗಿರು’ ಅಂತ ಹೀಗೆ ಇರುತ್ತೇನೆ. ನನ್ನ ಹೆಂಡತಿ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದ ಕಾರಣಕ್ಕೆ ಆಗ ಪ್ರಚಾರಕ್ಕೆ ಹೋಗಿದ್ದೆ. ಈಗ ಎಲ್ಲಿಗೂ ಪ್ರಚಾರಕ್ಕೆ ಹೋಗುವುದಿಲ್ಲ. ಯಾರು ಕರೆದರೂ ಹೋಗಲಾರೆ. ಶಿವಮೊಗ್ಗದಲ್ಲಿ ಸ್ಪರ್ಧಿಸುತ್ತಿರುವುದು ತಮ್ಮನೇ ಆದ್ದರಿಂದ ನನ್ನ ಹೆಂಡತಿ ಪ್ರಚಾರಕ್ಕೆ ಹೋಗಬಹುದು.

- ಶಿವರಾಜ್‌ ಕುಮಾರ್‌, ನಟ

ಮಧು ಬಂಗಾರಪ್ಪ ಕೂಡ ಕರೆಯುವುದಿಲ್ಲ ಎಂದರು. ಎಲ್ಲರಿಗೂ ಒಳ್ಳೆಯದಾಗಲಿ, ಒಳ್ಳೆಯವರು ಬಂದು ಒಳ್ಳೆಯ ಕೆಲಸ ಮಾಡಲಿ ಎಂದು ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ತಿಳಿಸಿದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ