ಬೆಂಗಳೂರು (ಮಾ. 21): ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಸುಮಲತಾ ಪರ ಸ್ಯಾಂಡಲ್ ವುಡ್ ಸ್ಟಾರ್ ನಟರು ನಿಂತಿದ್ದಾರೆ.

’ಕನ್ನಡ ಕೋಗಿಲೆ’ ಗೆ ಅನುಪಮಾ ಬದಲು ಆರ್‌ಜೆ ಸಿರಿ ಆ್ಯಂಕರ್

ಯಶ್, ದರ್ಶನ್ ಬೆಂಬಲದಿಂದ ಸುಮಲತಾಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಸ್ಯಾಂಡಲ್ ವುಡ್ ನಟರು ಒಬ್ಬೊಬ್ಬರೇ ಸಾಥ್ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಟ ಪುನೀತ್ ರಾಜ್ ಕುಮಾರ್ ಬರೆದಿರುವ ಪತ್ರ ಗಮನ ಸೆಳೆದಿದೆ. 

ಸುಮಲತಾಗೆ ಪುನೀತ್ ಬೆಂಬಲ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಪುನೀತ್ ಬೇರೆಯದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನನಗೂ ರಾಜಕಾರಣಕ್ಕೂ ಸಂಬಂಧ ಇಲ್ಲ. ಮತಚಲಾಯಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ನಿಮ್ಮ ಮತವನ್ನು ಪ್ರಬುದ್ಧವಾಗಿ ಚಾಲಾ ಯಿಸಿ ಎಂದು ಕೇಳಿಕೊಳ್ಳುತ್ತೇನೆ ಹೊರತು ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಎಂದು ಸೂಚಿಸಿರುವುದಿಲ್ಲ ಎಂದಿದ್ದಾರೆ.