ಲಕ್ನೋ[ಮಾ.30]: ಗಡಿ ಭದ್ರತಾ ಪಡೆ[BSF]ಯಲ್ಲಿ ಯೋಧರಿಗೆ ಸರಿಯಾದ ಸೌವಲತ್ತುಗಳಿಲ್ಲ, ಕಳಪೆ ಆಹಾರ ನೀಡುತ್ತಿದ್ದಾರೆ ಎಂಬ ಸೆಲ್ಫೀ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದ ಸೈನಿಕ ತೇಜ್ ಬಹದ್ದೂರ್ ಯಾದವ್ ಪ್ರಧಾನಿ ಮೋದಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ರೇವಡಿ ನಿವಾಸಿ ತೇಜ್ ಪ್ರತಾಪ್ ಸುದ್ದಿಗೋಷ್ಟಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಅಲ್ಲದೇ ಮೋದಿ ವಿರುದ್ಧ ಸ್ಪರ್ಧಿಸಿ ಸೇನೆಯಲ್ಲಾಗುತ್ತಿರುವ ಭ್ರಷ್ಟಾಚಾರವನ್ನು ತಡೆಯುತ್ತೇನೆ ಎಂದಿದ್ದಾರೆ.

'ನಾನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ' ಫೇಸ್'ಬುಕ್'ನಲ್ಲಿ ಹಿರಿಯ ಅಧಿಕಾರಿಗಳ ಕರಾಳ ಸತ್ಯ ಬಿಚ್ಚಿಟ್ಟ ಯೋಧ

BSFನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ವಿಚಾರವನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದಾಗ ತೇಜ್ ಬಹದ್ದೂರ್ ಯಾದವ್ ರನ್ನು ಅಮಾನತ್ತು ಮಾಡಲಾಗಿತ್ತು. ಹೀಗಿರುವಾಗ ಪ್ರಧಾನಿ ಮೋದಿ ತವರು ಕ್ಷೇತ್ರ ವಾರಾಣಸಿಯಲ್ಲಿ ಚುನಾವಣಾ ಕಣಕ್ಕಿಳಿದು ಭ್ರಷ್ಟಾಚಾರದ ವಿರುದ್ಧ ಸೆಣಸಾಡುತ್ತೇನೆ ಎಂಬುವುದು ತೇಜ್ ಬಹದ್ದೂರ್ ಯಾದವ್ ನಿಲುವಾಗಿದೆ.

ಸೇನೆಯಲ್ಲಿ ಭ್ರಷ್ಟಾಚಾರ: ಇನ್ನೊಂದು ವಿಡಿಯೋ ಸ್ಫೋಟಿಸಿದ ತೇಜ್ ಬಹಾದ್ದೂರ್

ತಮ್ಮ ಸ್ಪರ್ಧೆಯ ಕುರಿತಾಗಿ ಈ ಯೋಧ ತಮ್ಮ ಟ್ವಿಟರ್ ಖಾತೆಯಲ್ಲೂ ಬರೆದುಕೊಂಡಿದ್ದು, 'ಜೈ ಹಿಂದ್, ಪಕ್ಷೇತರನಾಗಿ ಬನಾರಸ್ ನಿಂದ ಮೋದಿ ವಿರುದ್ಧ ಸ್ಪರ್ಧಿಸಬಹುದಲ್ವಾ? ಯಾವುದೇ ಪಕ್ಷದ ಗುಲಾಮನಾಗಲು ಬಯಸುವುದಿಲ್ಲ' ಎಂದಿದ್ದಾರೆ.

ತಮ್ಮ ಸ್ಪರ್ಧೆಯ ತಯಾರಿ ಕುರಿತಾಗಿ ಪ್ರತಿಕ್ರಿಯಿಸಿರುವ ತೇಜ್ ಬಹದ್ದೂರ್ ಯಾದವ್ 'ನಾನು ಕಳೆದ ಹಲವಾರು ತಿಂಗಳುಗಳಿಂದ ಚುನಾವಣೆಗೆ ತಯಾರಿ ನಡೆಸುತ್ತಿದ್ದೇನೆ. ವಾರಾಣಸಿಯ ಸಾವಿರಾರು ಮಂದಿ ನನ್ನ ಸಂಪರ್ಕದಲ್ಲಿದ್ದಾರೆ. ಬನಾರಸ್ ನ ಮತದಾರರ ಪಟ್ಟಿತಯಲ್ಲಿ ನನ್ನ ಹೆಸರನ್ನೂ ಸೇರ್ಪಡೆಗೊಳಿಸಿದ್ದೇನೆ ಹಾಗೂ ತಿ ಶೀಘ್ರದಲ್ಲೇ ನನ್ನ ತಂಡದೊಂದಿಗೆ ಬನಾರಸ್ ಗೆ ತೆರಳುತ್ತೇನೆ' ಎಂದಿದ್ದಾರೆ.

ಯಾರು ಈ ತೇಜ್ ಬಹದ್ದೂರ್ ಯಾದವ್?

BSF 29ನೇ ಬೆಟಾಲಿಯನ್'ನ ಯೋಧ ತೇಜ್ ಬಹದ್ದೂರ್ ಯಾದವ್ ಸೈನಿಕರಿಗೆ ಅಧಿಕಾರಿಗಳು ಪೂರೈಸುತ್ತಿರುವ ಆಹಾರದ ಕುರಿತಾಗಿ ವಿಡಿಯೋಗಳನ್ನು ತಮ್ಮ ಫೇಸ್ಬುಕ್'ನಲ್ಲಿ ಹಾಕಿಕೊಂಡಿದ್ದರು. ಇದರೊಂದಿಗೆ ಸರ್ಕಾರ ದವಸ ಧಾನ್ಯಗಳನ್ನು ನೀಡುತ್ತಿದ್ದರೂ ಇದು ನಮಗೆ ತಲುಪುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟಾಚಾರ ವಿಚಾರವನ್ನು ಹೊರ ಹಾಕಿದ್ದರು. ಅಲ್ಲದೆ ಈ ವಿಡಿಯೋ ಹಾಕಿದ ಬಳಿಕ ನಾನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ಆದರೆ ಈ ವಿಚಾರ ಮಾಧ್ಯಮ ಹಾಗೂ ಸರ್ಕಾರದ ಗಮನಕ್ಕೆ ಬರುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಈ ವಿಡಿಯೋ ಭಾರೀ ಸಂಚಲನ ಸೃಷ್ಟಿ ಮಾಡಿತ್ತು. 

ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಸೇವೆಯಿಂದ ವಜಾ

ಇದಾದ ಕೆಲ ದಿನಗಳಲ್ಲೇ ಮತ್ತೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದ ತೇಜ್ ಬಹದ್ದೂರ್ ಯಾದವ್ ಸೇನೆಯಲ್ಲಾಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಹೇಳಿಕೊಂಡಿದ್ದರು. ಬಳಿಕ ಅವರನ್ನು ಸೇನೆಯಿಂದ ಅಮಾನತ್ತುಗೊಳಿಸಲಾಗಿತ್ತು.