ಲಕ್ನೋ[ಮೇ.23]: ಲೋಕಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ಗಮನಿಸಿದರೆ ಬಿಜೆಪಿ ನೇತೃತ್ವದ NDA ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಹೀಗಿರುವಾಗಲೇ ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಚೌಧರಿ ಒಂದು ವೇಳೆ ಬಿಜೆಪಿ ಗೆದ್ದರೆ ತಾನು ಮುಂದಿನ 5 ವರ್ಷ ತಲೆ ಬೊಳಿಸಿಕೊಳ್ಳುತ್ತೇನೆಂದು ಘೋಷಿಸಿದ್ದಾರೆ.

ಹೌದು ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿರುವ ಸಚಿನ್ ಚೌಧರಿ ತಾನು ಕಣಕ್ಕಿಳಿದಿರುವ ಅಮ್ರೋಹಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ತಲೆ ಬೋಳಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಮುಂದಿನ 5 ವರ್ಷಗಳವರೆಗೆ ತಲೆ ಕೂದಲು ಬೆಳೆಯಲು ಬಿಡುವುದಿಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಕಿಡಿ ಕಾರಿರುವ ಸಚಿನ್ ಚೌಧರಿ ಚುನಾವಣೋತ್ತರ ಸಮೀಕ್ಷೆಗಳಲ್ಲಿ ವಿಜೆಪಿಗೆ ಗೆಲುವಾಗುತ್ತದೆ ಎಂದು ವರದಿ ಮಾಡಿರುವವರೆಲ್ಲರೂ ಮೋದಿಗೆ ಮಾರಾಟವಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಸುಳ್ಳು. ಬಿಜೆಪಿ 200 ಗಡಿ ಮುಟ್ಟುವುದಿಲ್ಲ. ಭಯಗೊಂಡಿರುವ ನಬಿಜೆಪಿ ಚುನಾವಣೋತ್ತರ ಸಮೀಕ್ಷೆಯನ್ನು ತನ್ನ ಪರವಾಗಿ ತೋರಿಸಿದೆ ಎಂದಿದ್ದಾರೆ.

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates

ಮುನ್ನಡೆ ಟ್ರೆಂಡ್ಸ್: ಒಂದೇ ಗಂಟೆಯಲ್ಲಿ ಬಹುಮತ ಗೆರೆ ದಾಟಿದ NDA!

BJP ಕೇಂದ್ರ ಕಚೇರಿಗೆ ಇಂದು ಸಂಜೆ 20000 ಕಾರ್ಯಕರ್ತರು!