ಲೋಕಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನೊಂದು ಕಡೆ Exit Pollಗಳು ಕೂಡಾ NDA ಮತ್ತೊಮ್ಮೆ ಅಧಿಕಾರಕ್ಕೆ ಬರುವ ಬಗ್ಗೆ ಭವಿಷ್ಯ ನುಡಿದಿವೆ.

ಈ ಹಿನ್ನೆಲೆಯಲ್ಲಿ ಸುಮಾರು 20000 ಬಿಜೆಪಿ ಕಾರ್ಯಕರ್ತರು ಇಂದು ಸಂಜೆ ಪಕ್ಷದ ಕೇಂದ್ರ ಕಛೇರಿಯಲ್ಲಿ ಜಮಾಯಿಸಲಿದ್ದಾರೆ.

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates

ಮತ್ತೊಂದು ಕಡೆ ಗೆದ್ದ ಅಭ್ಯರ್ಥಿಗಳಿಗೆ ಮೇ 25ರಂದು ದೆಹಲಿಗೆ ಬರಲು ಪಕ್ಷವು ಸೂಚನೆ ನೀಡಿದೆ.

Exit Poll ಗಳ ಪ್ರಕಾರ BJP ನೇತೃತ್ವದ NDA ಸರಳ ಬಹುಮತ ಪಡೆಯಲಿವೆ ಎಂದು ಹೇಳಿವೆ. ಆದರೆ ವಿಪಕ್ಷಗಳು ಈ ಸಮೀಕ್ಷೆಗಳನ್ನು ಅಲ್ಲಗಳೆದಿವೆ.