ಮುನ್ನಡೆ ಟ್ರೆಂಡ್ಸ್: ಒಂದೇ ಗಂಟೆಯಲ್ಲಿ ಬಹುಮತ ಗೆರೆ ದಾಟಿದ NDA!

9.30 ರ ಹೊತ್ತಿಗೆ ಕರ್ನಾಟಕದಲ್ಲಿ BJP 22 ಕಡೆ ಮುನ್ನಡೆ ಸಾಧಿಸಿದ್ದರೆ  ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 3 ಕಡೆ ಮುನ್ನಡೆ ಸಾಧಿಸಿವೆ.

Election Results 2019 Results BJP Led NDA Leading in Early Trends

ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭವಾಗಿ ಸುಮಾರು ಒಂದೂವರೆ ಗಂಟೆ ಕಳೆದಿವೆ.  ದೇಶಾದ್ಯಂತ ಯಾವ ಯಾವ ಪಕ್ಷ ಎಲ್ಲೆಲ್ಲಿ ಮುನ್ನಡೆ/ ಹಿನ್ನಡೆ ಸಾಧಿಸಿವೆ ಎಂಬುವುದು ಆರಂಭಿಕ ಟ್ರೆಂಡ್ ನಿಂದ ತಿಳಿದು ಬರುತ್ತಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ BJP ನೇತೃತ್ವದ NDA ಸುಮಾರು 300ಕ್ಕಿಂತಲೂ ಹೆಚ್ಚು ಕಡೆ ಮುನ್ನಡೆ ಸಾಧಿಸಿದೆ.  9.30ರವರೆಗಿನ ಮಾಹಿತಿ ಪ್ರಕಾರ 307 ಕಡೆ NDA ಮುನ್ನಡೆ ಸಾಧಿಸಿದ್ದರೆ, UPA 125 ಕಡೆ ಮುನ್ನಡೆ ಸಾಧಿಸಿದೆ. ಉಳಿದ ಪಕ್ಷಗಳು 112 ಕಡೆ ಮುನ್ನಡೆ ಸಾಧಿಸಿವೆ. ಕರ್ನಾಟಕದಲ್ಲಿ BJP 22 ಕಡೆ ಮುನ್ನಡೆ ಸಾಧಿಸಿದ್ದರೆ  ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 3 ಕಡೆ ಮುನ್ನಡೆ ಸಾಧಿಸಿವೆ.

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates

Latest Videos
Follow Us:
Download App:
  • android
  • ios