ರಾಯಚೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಅಭ್ಯರ್ಥಿ ಆಯ್ಕೆಯಾಗುವುದಕ್ಕೂ ಮುನ್ನವೇ ರಾಯಚೂರಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. 

ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ. ಈ ಬಗ್ಗೆ  ಸಂಸದ ಬಿ.ವಿ. ನಾಯಕ್ ಮಾಹಿತಿ ನೀಡಿದ್ದಾರೆ. 

ಮಾನ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರಣಯ್ಯ ಗುಡದಿನ್ನಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದೊಡ್ಡ ಬಸಪ್ಪ ಗೌಡ, ಶಿರವಾರದ ಬ್ರಿಜೇಶ್ ಪಟೇಲ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. 

MLC ಎನ್.ಎಸ್. ಬೋಸರಾಜು ಹಾಗೂ ಸಂಸದ ಬಿ.ವಿ. ನಾಯಕ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.

ರಾಜ್ಯ ಸಮರ: ವಿರೋಧಿ ಅಲೆಯಿಂದ ಪಾರಾದೀತೇ ಬಿಜೆಪಿ?

ಇನ್ನು ಬಿಜೆಪಿ ಮುಖಂಡರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತಿಳಿಸಿದ ಬಳಿಕ ಮಾತನಾಡಿದ ನಾಯಕ,  ಮೋದಿ ಸರ್ವಾಧಿಕಾರಿ ಹಾಗೂ ಭಯ ಉಂಟುಮಾಡುವ ರೀತಿಯಲ್ಲಿ ಇದ್ದಾರೆ.  ಪ್ರಜಾಪ್ರಭುತ್ವ ನಿಟ್ಟಿನಲ್ಲಿ ಇದು ಸರಿಯಲ್ಲ. ಇದೇ ಕಾರಣದಿಂದ ಬಿಜೆಪಿ ನಾಯಕರು ಕಾಂಗ್ರೆಸ್ ನತ್ತ ಬರುತ್ತಿದ್ದಾರೆ ಎಂದರು. 

ಜಾಧವ್ ಸೆಳೆದ ಬಿಜೆಪಿಗೆ ಬಿಗ್ ಶಾಕ್ : ಮೂವರು ಮುಖಂಡರು ಪಕ್ಷಕ್ಕೆ ಗುಡ್ ಬೈ?

ಕಲಬುರಗಿಯಲ್ಲಿ ಮೂವರು ಬಿಜೆಪಿ ಮುಖಂಡರು ಪಕ್ಷ ತೊರೆಯಲು ಸಜ್ಜಾಗಿರುವ ಬೆನ್ನಲ್ಲೇ ಇದೀಗ ರಾಯಚೂರಿನಲ್ಲಿಯೂ ಕೂಡ ಬಿಜೆಪಿ ಮುಖಂಡ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.