ರಾಜ್ಯ ಸಮರ: ವಿರೋಧಿ ಅಲೆಯಿಂದ ಪಾರಾದೀತೇ ಬಿಜೆಪಿ?
12 ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಇಲ್ಲ? | 29ರಲ್ಲಿ ಕೇವಲ 10 ಅಭ್ಯರ್ಥಿಗಳ ಫೈನಲ್ ಮಾಡಿರುವ ಕಾಂಗ್ರೆಸ್ 19 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ಕಾಂಗ್ರೆಸ್ ಪರದಾಟ | ರಾಜ್ಯದಲ್ಲಿ ಸಮಬಲ ಹೋರಾಟದ ನಿರೀಕ್ಷೆ
ಮಹಾಭಾರತ ಸಂಗ್ರಾ: ಮಧ್ಯಪ್ರದೇಶ
ಭೋಪಾಲ್[ಮಾ.16]: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸಮರಕ್ಕೆ ಕಾರಣವಾಗಲಿರುವ ಮಧ್ಯಪ್ರದೇಶದಲ್ಲಿನ ಲೋಕಸಭೆ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಕುತೂಹಲಕಾರಿ ಯಾಗುವ ಸಾಧ್ಯತೆ ಇದೆ.
ಕಳೆದ ಬಾರಿ ನರೇಂದ್ರ ಮೋದಿ ಅಲೆ ಹಾಗೂ ಅಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಉತ್ತಮ ಆಡಳಿತದ ಪರಿಣಾಮ ರಾಜ್ಯದ 29 ಲೋಕಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಬಿಜೆಪಿ ಜಯಿಸಿತ್ತು. ಕೇವಲ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನಗೊಂಡು ಕಾಂಗ್ರೆಸ್ ಸರ್ಕಾರ ಬಂದಿರುವ ಕಾರಣ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದ್ದು, ಸಮಬಲದ ಪೈಪೋಟಿ ನಿರೀಕ್ಷಿಸಲಾಗಿದೆ. ಮೇಲಾಗಿ, ರೈತರ ಸಾಲ ಮನ್ನಾದಂಥ ಕಾಂಗ್ರೆಸ್ ಸರ್ಕಾರದ ಯೋಜನೆ ಗಳು ರಾಹುಲ್ ಗಾಂಧಿ ನೇತೃತ್ವದ ಪಕ್ಷಕ್ಕೆ ವರದಾನವಾಗುವ ನಿರೀಕ್ಷೆಯಿದೆ.
2014ರಲ್ಲಿ: 2014ರಲ್ಲಿ 27 ಕ್ಷೇತ್ರದಲ್ಲಿ ಬಿಜೆಪಿ ಜಯಿಸಿತ್ತು. ಗೆದ್ದವರಲ್ಲಿ ಈಗ ಕೇಂದ್ರ ಸಚಿವರಾಗಿರುವ ನರೇಂದ್ರ ಸಿಂಗ್ ತೋಮರ್, ಸುಷ್ಮಾ ಸ್ವರಾಜ್ ಹಾಗೂ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಪ್ರಮುಖರು.
ುಮಿತ್ರಾ ಮಹಾಜನ್ ಅವರು ಪ್ರಮುಖರು. ಇನ್ನು ಕಾಂಗ್ರೆಸ್ ಕೇವಲ ಸ್ಥಾನಗಳಲ್ಲಿ ಜಯಿಸಿತ್ತು. ಛಿಂದ್ವಾಡಾದಲ್ಲಿ ಹಾಲಿ ಮುಖ್ಯಮಂತ್ರಿ ಕಮಲ್‌ನಾಥ್ ಜಯಿಸಿದ್ದರೆ, ಗುಣಾ ಕ್ಷೇತ್ರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಜಯಗಳಿಸಿದ್ದರು. ನರೇಂದ್ರ ಮೋದಿ ಅಲೆಯೇ ಕಾಂಗ್ರೆಸ್‌ನ ಹೀನಾಯ ಪ್ರದರ್ಶನಕ್ಕೆ ಕಾರಣವಾಗಿತ್ತು.
ಬಿಜೆಪಿಯಲ್ಲಿ 12 ಸಂಸದರಿಗೆ ಕೊಕ್?: 2019ರಲ್ಲಿ ಸಮಬಲದ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಅಲ್ಲದೆ, ೨೦೧೪ರಲ್ಲಿ ಇದ್ದಷ್ಟು ಮೋದಿ ಅಲೆ ಗೋಚರಿಸುತ್ತಿಲ್ಲ. ಸ್ಥಳೀಯ ಸಂಸದರ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇದೆ. ಹೀಗಾಗಿ ತನ್ನ ಹಾಲಿ 12 ಸಂಸದರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆ ಹಾಕಲು ಬಿಜೆಪಿ ಹೈಕಮಾಂಡ್ ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿ
‘ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆ ಯಲ್ಲಿ ಹಾಲಿ ಶಾಸಕರಿಗೆ ಕೈಕೊಟ್ಟು ಕೈಸುಟ್ಟುಕೊಂಡಿದ್ದೇವೆ. ಕೂದಲೆಳೆಯಲ್ಲಿ ಸರ್ಕಾರ ರಚನೆಯಿಂದ ವಂಚಿತರಾಗಿದ್ದೇವೆ. ಹೀಗಾಗಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಪತನದಂತಹ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ. ಸಮೀಕ್ಷೆಯ ಅನುಸಾರ ಗೆಲ್ಲುವ ಸಾಧ್ಯತೆ ಮಾನದಂಡದ ಆಧಾರದಲ್ಲಿ ಟಿಕೆಟ್ ವಿತರಿಸಲಿದ್ದೇವೆ. ಮೋದಿ ಅವರನ್ನು ೨ನೇ ಬಾರಿ ಪ್ರತಿಷ್ಠಾಪಿಸಲಿದ್ದೇವೆ’ ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ.
ಈ ಬಾರಿಯ ವಿಶೇಷವೆಂದರೆ ವಿದಿಶಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಸುಷ್ಮಾ ಸ್ವರಾಜ್ ಅವರು ಕಣಕ್ಕಿಳಿಯುತ್ತಿಲ್ಲ. ‘ನಾನು 2019ರಲ್ಲಿ ಸ್ಪರ್ಧೆಗೆ ಇಳಿಯವುದಿಲ್ಲ’ ಎಂದು ಅವರು ಕಳೆದ ವರ್ಷವೇ ಘೋಷಿಸಿದ್ದರು.
ಕಾಂಗ್ರೆಸ್‌ನಲ್ಲಿ ಸಾಹಸ: ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಕೂಡ ಪರಿಸ್ಥಿತಿ ಅಷ್ಟು ಸುಲಭವಾಗಿಲ್ಲ. ರಾಜ್ಯದಲ್ಲಿ ಅಧಿಕಾರಾರೂಢ ಪಕ್ಷವಾದರೂ ಕಾಂಗ್ರೆಸ್ ಪಕ್ಷವು ೧೦ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಯಶಸ್ವಿಯಾಗಿದೆ. ಉಳಿದ ೧೯ ಕ್ಷೇತ್ರಗಳಿಗೆ ಸರಾಸರಿ ತಲಾ 5 ಆಕಾಂಕ್ಷಿಗಳು ಇದ್ದು, ತೀವ್ರ ಪೈಪೋಟಿ ಎದುರಾಗಿದೆ. ಹೀಗಾಗಿ ಬಂಡಾಯ ಶಮನ ಮಾಡಿ ಒಬ್ಬರಿಗೇ ಟಿಕೆಟ್ ಅಂತಿಮ ಮಾಡುವುದು ಹೇಗೆ ಎಂಬ ತಲೆನೋವಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ
ಜ್ಯೋತಿರಾದಿತ್ಯ ಸಿಂಧಿಯಾ (ಗುಣಾ), ಮೀನಾಕ್ಷಿ ನಟರಾಜನ್ (ಮಂಡಸೌರ್), ಪ್ರಿಯದರ್ಶಿನಿ ರಾಜೇ ಸಿಂಧಿಯಾ (ಗ್ವಾಲಿಯರ್) ಸೇರಿ 10 ಪ್ರಮುಖರ ಟಿಕೆಟ್ ಅಂತಿಮವಾಗಿದೆ. ಈ ನಡುವೆ, ತಂದೆ ಹಾಗೂ ಹಾಲಿ ಮುಖ್ಯಮಂತ್ರಿ ಕಮಲ್‌ನಾಥ್ ಪ್ರತಿನಿಧಿಸುತ್ತಿದ್ದ ಛಿಂದ್ವಾಡಾ ಕ್ಷೇತ್ರದಲ್ಲಿ ಈ ಸಲ ಅವರ ಪುತ್ರ ನಕುಲ್ ಕಮಲ್‌ನಾಥ್‌ಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದೇ ವೇಳೆ, ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಇವರು ಪಡೆಯುವ ಮತಗಳು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಇದೆ.
ಸಂಭಾವ್ಯ ಅಭ್ಯರ್ಥಿಗಳು
*ಜ್ಯೋತಿರಾದಿತ್ಯ ಸಿಂಧಿಯಾ (ಕಾಂಗ್ರೆಸ್) *ಪ್ರಿಯದರ್ಶಿನಿ ರಾಜೇ ಸಿಂಧಿಯಾ (ಕಾಂಗ್ರೆಸ್) *ಕಾಂತಿಲಾಲ್ ಭುರಿಯಾ (ಕಾಂಗ್ರೆಸ್) *ಅಜಯ್ ಸಿಂಗ್ (ಕಾಂಗ್ರೆಸ್) *ಮೀನಾಕ್ಷಿ ನಟರಾಜನ್ (ಕಾಂಗ್ರೆಸ್) *ನಕುಲ್ ಕಮಲ್‌ನಾಥ್ (ಕಾಂಗ್ರೆಸ್) *ನರೇಂದ್ರ ಸಿಂಗ್ ತೋಮರ್ (ಬಿಜೆಪಿ) *ಸುಮಿತ್ರಾ ಮಹಾಜನ್ (ಬಿಜೆಪಿ)
ಚುನಾವಣಾ ವಿಷಯಗಳು
ನರೇಂದ್ರ ಮೋದಿ ಸರ್ಕಾರದ 5 ವರ್ಷದ ಆಳ್ವಿಕೆ; ಶಿವರಾಜ್ ಸಿಂಗ್ ಚೌಹಾಣ್‌ರ ಈ ಹಿಂದಿನ ಆಳ್ವಿಕೆ; ಶಿವರಾಜ್ ಅವರು ಕೂದಲೆಳೆಯಲ್ಲಿ ಅವರು ಅಧಿಕಾರದಿಂದ ವಂಚಿತರಾಗಿದ್ದು, ಇದರ ಅನುಕಂಪ ಗಿಟ್ಟಿಸಲು ಬಿಜೆಪಿ ಯತ್ನ; ಕಮಲ್‌ನಾಥ್ ಅವರ ರೈತರ ಸಾಲ ಮನ್ನಾ ಅನುಷ್ಠಾನ ಹಾಗೂ ಇತ್ಯಾದಿ ವಿಷಯಗಳು
ಪ್ರಮುಖ ಕ್ಷೇತ್ರಗಳು
*ಛಿಂದ್ವಾಡಾ *ಗ್ವಾಲಿಯರ್ *ಗುಣಾ- ಶಿವಪುರಿ *ಮಂಡಸೌರ್ *ಸಾತ್ನಾ *ರತ್ಲಾಂ *ಇಂದೋರ್ *ವಿದಿಶಾ