ಕಲಬುರಗಿ : ಬಿಜೆಪಿ ಜಿಲ್ಲಾ ಘಟಕದಲ್ಲಿ ಇದೀಗ ಭಿನ್ನಮತವೊಂದು ಸ್ಫೋಟವಾಗಿದೆ.  

ಲೋಕಸಭಾ ಚುನಾವಣೆ ಬೆನ್ನಲ್ಲೇ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು ಮೂವರು ಮುಖಂಡರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ.  ಕಾಂಗ್ರೆಸ್ ಮುಖಂಡ ಉಮೇಶ್ ಜಾಧವ್ ಅವರನ್ನು ಕರೆತಂದು ಟಿಕೆಟ್ ನೀಡುವ ಬಗ್ಗೆ ಚರ್ಚೆಯೊಂದು ನಡೆದಿದ್ದು, ಇದು ಬೃಹತ್ ಪ್ರಮಾಣದ ಅಸಮಾಧಾನಕ್ಕೆ ಕಾರಣವಾಗಿದೆ. 

22 ಸ್ಥಾನ ಗೆಲ್ಲುತ್ತೇವೆ ಎನ್ನುವ ರಾಜ್ಯ ಬಿಜೆಪಿಗೆ ಕೆಲ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳೇ ಸಿಗ್ತಿಲ್ಲ..!

ಬಿಜೆಪಿಯ ಹಿರಿಯ ನಾಯಕ ಮಾಜಿ MLC ಕೆ.ಬಿ. ಶಾಣಪ್ಪ, ಮಾಜಿ ಸಚಿವ ಬಾಬುರಾವ್ ಚೌಹಾಣ್  ಮತ್ತು ಗುರುಮಠಕಲ್ ಬಿಜೆಪಿ ಮುಖಂಡ ಶ್ಯಾಮರಾವ್ ಪ್ಯಾಟಿ ಬಿಜೆಪಿಗೆ  ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ. 

ಶ್ಯಾಮರಾವ್ ಪ್ಯಾಟಿ ಅವರು ಈ ಹಿಂದೆ ಗುರುಮಠಕಲ್ ಕ್ಷೇತ್ರದಿಂದ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿದ್ದರು.  ಇದೀಗ ಈ ಮೂವರೂ ಕೂಡ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. 

ಇತ್ತ ಕೆಲ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದರೆ. ಹಲವು ಮುಖಂಡರು ಬಿಜೆಪಿ ತೊರೆಯುತ್ತಿದ್ದಾರೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ರಾಜ್ಯಕೀಯದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತಿದೆ. ಅಲ್ಲದೇ ಕುತೂಹಲ ಸೃಷ್ಟಿಸುತ್ತಿದೆ.