ನವದೆಹಲಿ(ಮೇ.23): ಲೋಕಸಭಾ ಚುನಾವಣೆ ಫಲಿತಾಂಶ ಅಂತಿಮ ಘಟ್ಟ ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಸುನಾಮಿಗೆ ಕಾಂಗ್ರೆಸ್ ಸೇರಿದಂತೆ UPA ಧೂಳೀಪಟವಾಗಿದೆ. ಇದೀಗ ಸತತ 2ನೇ ಬಾರಿಗೆ ಪ್ರಧಾನಿ ಪಟ್ಟ ಎರಲು ಮೋದಿ ಸಜ್ಜಾಗಿದ್ದಾರೆ. ಚುನಾವಣಾ ಫಲಿತಾಂಶ ಕಾಂಗ್ರೆಸ್ ಮಾತ್ರವಲ್ಲ  CPI ಪಕ್ಷದ ನಿದ್ದೆಗೆಡಿಸಿದೆ. ಬಿಜೆಪಿ ಭರ್ಜರಿ ಗೆಲುವಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವವೇ ಕಾರಣ ಎಂದು CPI ಪಕ್ಷದ ಕಾರ್ಯದರ್ಶಿ ಅತುಲ್ ಕುಮಾರ್ ಅಂಜಾನ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಸೋಲಿನತ್ತ ಮುಖಮಾಡುತ್ತಿದ್ದಂತೆ ಪ್ರಕಾಶ್ ರಾಜ್ ಹೋರಾಟದ ಟ್ವೀಟ್

ವಿರೋಧ ಪಕ್ಷದ ಒಗ್ಗಟ್ಟಿಗೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ನೀತಿ, ನಿರ್ಧಾರಗಳು ಮುಳುವಾಗಿದೆ. ಕಾಂಗ್ರೆಸ್‌ನಿಂದ ವಿರೋಧ ಪಕ್ಷ ಒಡೆದುಹೋಗಿದೆ. ಸಮರ್ಧವಾಗಿ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗಿಲ್ಲ. ಪರಿಪಕ್ವಾವಾಗದ ರಾಹುಲ್ ನಾಯಕತ್ವ ಈ ಫಲಿತಾಂಶಕ್ಕೆ ಕಾರಣ ಎಂದು ಅತುಲ್ ಹೇಳಿದ್ದಾರೆ.

ಇದನ್ನೂ ಓದಿ: ನುಡಿದಂತೆ ನಡೆಯಲು ನಿಂಬೆಕಾಯಿ ರೇವಣ್ಣ ರಾಜೀನಾಮೆ ನೀಡಲಿ’

ಸದ್ಯ ಮುನ್ನಡೆವಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, 2014ರ ಫಲಿತಾಂಶಕ್ಕಿಂತ ಅತ್ಯುತ್ತಮ ನಿರ್ವಹಣೆ ತೋರಲಿದೆ. ಬಿಜೆಪಿ ಮುನ್ನಡೆಗೆ ಮೋದಿ ಸರ್ಕಾರದ ಸಾಧನೆಗಳಿಗಿಂತ ರಾಹುಲ್ ಗಾಂಧಿ ವೈಫಲ್ಯಗಳೇ ಕಾರಣವಾಗಿದೆ ಎಂದು ಅತುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.