ಬೆಂಗಳೂರು(ಮೇ.23): ದಕ್ಷಿಣ ಭಾರತದ ನಟ ಪ್ರಕಾಶ್ ರಾಜ್ ಡೈಲಾಗ್ ಲೋಕಸಭಾ ಚುನಾವಣೆಯಲ್ಲಿ ವರ್ಕೌಟ್ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಸಮರ ಸಮರ ಸಾರಿದ್ದ ಪ್ರಕಾಶ್ ರಾಜ್‌ಗೆ ಮತದಾರರು ಕೈಹಿಡಿಯಲಿಲ್ಲ. ಬೆಂಗಳೂರು ಕೇಂದ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪ್ರಕಾಶ್ ರಾಜ್ ಸೋಲಿನತ್ತ ಮುಖ ಮಾಡುತ್ತಿದ್ದಂತೆ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಸೋಲಿಲ್ಲದ ಸರದಾರ ಖರ್ಗೆಗೆ ಸೋಲುಣಿಸಿದ ಉಮೇಶ್ ಜಾಧವ್

ಚುನಾವಣೆ ಫಲಿತಾಂಶ ನನಗೆ ಕಪಾಳ ಮೋಕ್ಷ ಮಾಡಿದಂತಿದೆ. ಜೊತೆಗೆ ಟ್ರೋಲ್, ನಿಂದನೆ ಹಾಗೂ ಅವಮಾನ. ಆದರೆ ನಾನು ನನ್ನ ನಿಲುವುಗಳಿಗೆ ಬದ್ಧನಾಗಿದ್ದೇನೆ. ಜಾತ್ಯಾತೀತ ಭಾರತಕ್ಕಾಗಿ ಹೋರಾಟ ಮುಂದುವರಿಸುತ್ತೇನೆ. ನನ್ನ ಕಠಿಣ ಹೋರಾಟ ಹಾದಿ ಶುರುವಾಗಿದೆ. ನನ್ನನ್ನು ಬೆಂಬಲಿಸಿದ, ನನಗೆ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ. ಜೈ ಹಿಂದ್ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. 

 

 

ಇದನ್ನೂ ಓದಿ: ಏಕಾಂಗಿಯಾಗಿ 300ರ ಗಡಿ ದಾಟಿದ ಬಿಜೆಪಿ: ನಮೋ ನಮೋ ಅಂತಿದೆ ಭಾರತ!

ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದ ಪ್ರಕಾಶ್ ರಾಜ್‌ಗೆ ನಿರಾಸೆಯಾಗಿದೆ. ಬೆಂಗಳೂರು ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಭಾರಿ ಮುನ್ನಡೆ ಪಡೆದುಕೊಂಡಿದ್ದಾರೆ. ಪಿಸಿ ಮೋಹನ್‌ಗೆ ಕಠಿಣ ಸ್ಪರ್ಧೆ ಒಡ್ಡಿರುವ ಕಾಂಗ್ರೆಸ್ ಹಾಗೂ ಜೆಡಿಸ್ ಮೈತ್ರಿ ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಕೂಡ ಹಿನ್ನಡೆ ಅನುಭವಿಸಿದ್ದಾರೆ.