ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ| ‘ಅಮಿತಾಬ್ ಬಚ್ಚನ್ಗಿಂತ ಪ್ರಧಾನಿ ಮೋದಿ ದೊಡ್ಡ ನಟ’| ‘ಮೋದಿ ಬದಲು ಅಮಿತಾಬ್ ಗೆಲ್ಲಿಸಿದರೆ ದೇಶಕ್ಕೆ ಒಳಿತು’| ಮೋದಿ ವಿಶ್ವದ ಅತಿದೊಡ್ಡ ನಟ ಎಂದು ವ್ಯಂಗ್ಯಾವಾಡಿದ ಪ್ರಿಯಾಂಕಾ| ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ವ್ಯಂಗ್ಯ|
ಮಿರ್ಜಾಪುರ್(ಮೇ.17): ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ತಮ್ಮ ವಾಗ್ದಾಳಿ ಮುಂದುವರೆಸಿರುವ ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮೋದಿ ಜಗತ್ತಿನ ಅತಿದೊಡ್ಡ ನಟ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಬಾಲಿವುಟ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗಿಂತ ದೊಡ್ಡ ನಟರಾಗಿದ್ದು, ಕೇವಲ ಸುಳ್ಳುಗಳನ್ನೇ ಹೇಳುತ್ತಾ ಐದು ವರ್ಷ ಕಳೆದಿದ್ದಾರೆ ಎಂದು ಪ್ರಿಯಾಂಕಾ ಹರಿಹಾಯ್ದಿದ್ದಾರೆ.
Scroll to load tweet…
ಉತ್ತರಪ್ರದೇಶದ ಮಿರ್ಜಾಪುರ್‌ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಪ್ರಧಾನಿ ಹುದ್ದೆಗೆ ಮೋದಿ ಅವರಿಗಿಂತ ಅಮಿತಾಬ್ ಬಚ್ಚನ್ ಉತ್ತಮ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
"
ಪ್ರಧಾನಿ ಮೋದಿ ಬದಲು ಅಮಿತಾಬ್ ಬಚ್ಚನ್ ಅವರನ್ನು ಗೆಲ್ಲಿಸಿದರೆ ದೇಶಕ್ಕೆ ಒಳಿತಾಗಲಿದೆ ಎಂದು ಪ್ರಿಯಾಂಕಾ ಗಾಂಧಿ ವ್ಯಂಗ್ಯವಾಡಿದ್ದಾರೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.
