Asianet Suvarna News Asianet Suvarna News

ಕನ್ನಡದಲ್ಲಿ ಮಾತು, ಯುಗಾದಿ ಶುಭಾಶಯ!

ಮೈಸೂರು ಮತ್ತು ಚಿತ್ರದುರ್ಗದಲ್ಲಿ ಬಿಜೆಪಿ ಬೃಹತ್ ಸಮಾವೇಶ| ವಾಡಿಕೆಯಂತೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ| ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ವಿರುದ್ಧ ನೇರ ವಾಗ್ದಾಳಿ

Modi Started His Speech In kannada at Mysore and chitradurga Rallies
Author
Bangalore, First Published Apr 10, 2019, 8:15 AM IST

ಚಿತ್ರದುರ್ಗ/ಮೈಸೂರು[ಏ.10]: ಕರ್ನಾಟಕಕ್ಕೆ ಭೇಟಿ ಕೊಟ್ಟಾಗಲೆಲ್ಲ ಮೋದಿ ತಮ್ಮ ಭಾಷಣವನ್ನು ಕರ್ನಾಟಕದಲ್ಲೇ ಆರಂಭಿಸುವುದು ವಾಡಿಕೆ. ಮಂಗಳವಾರ ಮೈಸೂರು ಮತ್ತು ಚಿತ್ರದುರ್ಗ ಸಮಾವೇಶಗಳಲ್ಲೂ ಮೋದಿ ಕನ್ನಡದಲ್ಲೇ ಮಾತು ಆರಂಭಿಸಿ ಕಾರ್ಯಕರ್ತರ ಹರ್ಷೋದ್ಗಾರಕ್ಕೆ ಪಾತ್ರರಾದರು.

ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಕ್ಷೇತ್ರದ ಬಂಧು ಭಗಿನಿಯರೇ ನಿಮ್ಮೆಲ್ಲರಿಗೂ ನಿಮ್ಮ ಚೌಕಿದಾರ್‌ನ ನಮಸ್ಕಾರಗಳು ಎಂದೇ ಭಾಷಣ ಆರಂಭಿಸಿದರು. ಜತೆಗೆ, ಎರಡು ದಿನಗಳ ಹಿಂದೆ ಸಂತೋಷದಿಂದ ಯುಗಾದಿ ಹಬ್ಬ ಆಚರಿಸಿದ್ದೇವೆ. ಕರ್ನಾಟಕದ ಎಲ್ಲಾ ಬಂಧು ಭಗಿನಿಯರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ಉಚ್ಚರಿಸಿದಾಗ ನೆರೆದಿದ್ದ ಸಮೂಹ ಮೋದಿ ಮೋದಿ ಎಂದು ಕೇಕೆ ಹಾಕಿತು.

ಮೈಸೂರಿನಲ್ಲಿ ಮೋದಿ ಮೇನಿಯಾ: ಸುಮಲತಾ ಗೆಲ್ಲಿಸಲು ಪ್ರಧಾನಿ ಕರೆ!

ಚಿತ್ರದುರ್ಗ, ಮೈಸೂರು ಎರಡೂ ಕಡೆಯೂ ಭಾಷಣದ ಕೊನೆಯ ಮಾತುಗಳನ್ನಂತೂ ಮೋದಿ ಅವರು ಪೂರ್ಣ ಪ್ರಮಾಣದಲ್ಲಿ ಕನ್ನಡಕ್ಕೆ ಮೀಸಲಿಟ್ಟರು. ಮೈ ಭೀ ಚೌಕಿದಾರ್‌ ಘೋಷವಾಕ್ಯವನ್ನು ಎಲ್ಲ ವರ್ಗದವರಿಗೂ ವಿಸ್ತರಿಸಿದರು. ಹಳ್ಳಿ ಹಳ್ಳಿಯಲ್ಲೂ ಚೌಕಿದಾರ್‌, ನಗರ ನಗರವೂ ಚೌಕಿದಾರ್‌, ಮಕ್ಕಳೆಲ್ಲರೂ ಚೌಕಿದಾರ್‌, ತಾಯಿ, ಅಕ್ಕ ತಂಗಿ ಚೌಕಿದಾರ್‌ , ಮನೆಮನೆಯಲ್ಲಿ ಚೌಕಿದಾರ್‌, ಡಾಕ್ಟರ್‌, ಎಂಜಿನಿಯರ್‌, ರೈತ, ಕಾರ್ಮಿಕ ಕೂಡ ಚೌಕಿದಾರ್‌ ಎಂದರು.

ಮೈಸೂರಿಗೆ ಬಂದ ಮೋದಿಗೆ ಸಿಕ್ಕ ಅಮೂಲ್ಯ ಉಡುಗೊರೆ

Follow Us:
Download App:
  • android
  • ios