ಮಂಡ್ಯ, (ಮಾ.29): ಜೆಡಿಎಸ್​ಗೆ ಸೆಡ್ಡುಹೊಡೆದು ಚಿಹ್ನೆ ಆಯ್ಕೆಯಲ್ಲಿ ಪ್ರಬುದ್ಧತೆ ಮೆರೆದಿದ್ದ ಸುಮಲತಾ ಅಂಬರೀಶ್ ಅವರಿಗೆ ತಾವು ಆಯ್ಕೆ ಮಾಡಿದ್ದ ಮೂರು ಚಿಹ್ನೆಗಳು ಕೈತಪ್ಪಿವೆ.

ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್​ಗೆ ಚುನಾವಣಾ ಆಯೋಗ ‘ಕೈಗಾಡಿ’ (ವ್ಯಕ್ತಿಯೋರ್ವ ಬಂಡಿ ತಳ್ಳುತ್ತಿರುವುದು) ಗುರುತಿನ ಚಿಹ್ನೆ ನೀಡಿದೆ.

ಚಿಹ್ನೆ ಆಯ್ಕೆಯಲ್ಲೂ ಜೆಡಿಎಸ್‌ಗೆ ಟಕ್ಕರ್ ಕೊಟ್ಟ ಸುಮಲತಾ ಅಂಬರೀಶ್..!

ಕಬ್ಬಿನಗದ್ದೆ ಮುಂದೆ ರೈತ, ಕಹಳೆ ಊದುತ್ತಿರುವ ರೈತ, ತೆಂಗಿನ ತೋಟ ಚಿಹ್ನೆಗಳ ಪೈಕಿ ಒಂದನ್ನ ಆಯ್ಕೆ ಮಾಡಿಕೊಳ್ಳಬೇಕೆಂದು ಬಯಸಿದ್ದರು. 

ಆದ್ರೆ ಲಕ್ಕಿ ಡ್ರಾನಲ್ಲಿಈ ಮೂರೂ ಚಿಹ್ನೆಗಳೂ ಬೇರೆಯವರ ಪಾಲಾಗಿದ್ದು, ಕೊನೆಗೆ ಸುಮಲತಾ ಅವರಿಗೆ ಕೈಗಾಡಿ ಚಿಹ್ನೆ ಸಿಕ್ಕಿದೆ.

ಸುಮಲತಾ ಹೆಸರಿನ ಮೂವರು ಮಹಿಳೆಯರು ಸೇರಿದಂತೆ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದೇ ಏಪ್ರಿಲ್ 18ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿದೆ.