ವಯನಾಡು(ಮೇ.23): 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಬಿಜೆಪಿ ನೇತೃತ್ವದ NDA ಭರ್ಜರಿ ಗೆಲುವಿನತ್ತ ಹೆಜ್ಜೆ ಹಾಕಿದೆ. ದೇಶದಲ್ಲಿ ರಾಹುಲ್ ಗಾಂಧಿ ನಾಯಕತ್ವಕ್ಕೆ ಹಿನ್ನಡೆಯಾದರೂ ಕೇರಳದ ವಯನಾಡಿನಲ್ಲಿಸರಿ 4 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಹೌದು, ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬರೋಬ್ಬರಿ 7,06,367 ಮತ ಗಳಿಸಿ ಗೆಲುವಿನ ನಗೆ ಬೀರಿದ್ದಾರೆ.

ಇದನ್ನೂ ಓದಿ: ಮೋದಿ ಅಭಿನಂದಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವಕ್ಕೆ ಯಶಸ್ಸು ಸಿಕ್ಕಿಲ್ಲ. ಬಿಜೆಪಿ ಒಕ್ಕೂಟದ NDA 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದರೆ, ಕಾಂಗ್ರೆಸ್  ಒಕ್ಕೂಟದ UPA 91 ಸ್ಥಾನಕ್ಕೆ ಕುಸಿದಿದೆ. ಅಮೇಥಿ ಹಾಗೂ ವಯನಾಡು 2 ಕ್ಷೇತ್ರದಿಂದ ಸ್ಪರ್ಧಿಸಿದ ರಾಹುಲ್ ಗಾಂಧಿಗೆ ವಯನಾಡು ಮತದಾರರು ಸಿಹಿ ನೀಡಿದ್ದಾರೆ. ರಾಹುಲ್  64.7 % ಮತ ಬಾಚಿಕೊಂಡಿದ್ದಾರೆ. ಈ ಮೂಲಕ ರಾಹುಲ್ ಗಾಂದಿ 4,31,770 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ಅಸೆಂಬ್ಲಿಗೆ ಓಕೆ, ಸಂಸತ್ತಿಗೆ ಯಾಕೆ? ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಛತ್ತೀಸ್‌ಗಢ!

ರಾಹುಲ್ ಬಳಿಕ 2ನೇ ಸ್ಥಾನದಲ್ಲಿರುವ ಸಿಪಿಎಂ ಅಭ್ಯರ್ತಿ ಪಿಪಿ ಸುನೀರ್ 2,74,597 ಮತ ಗಳಿಸಿದ್ದಾರೆ.  ರಾಹುಲ್ ಗಾಂಧಿ ಸ್ಪರ್ಧೆಯಿಂದ ಕೇರಳದಲ್ಲಿ ಕಾಂಗ್ರೆಸ್ ಒಕ್ಕೂಟದ UDF 20 ಕ್ಷೇತ್ರಗಳಲ್ಲಿ 19ರಲ್ಲಿ ಗೆಲುವು ಸಾಧಿಸಿದೆ. ವಯನಾಡಿನಲ್ಲಿ ಅಮೇಥಿಯಲ್ಲಿ ರಾಹುಲ್ ಗಾಂಧಿ  ಸೋಲು ಅನುಭವಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಗೆುವು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಮೇಥಿ ಕ್ಷೇತ್ರದಲ್ಲಿ ಸೋಲು ಕಂಡಿದೆ.