Asianet Suvarna News Asianet Suvarna News

ಮೋದಿ ಅಭಿನಂದಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿರುವ ಬಿಜೆಪಿ ಇದೀಗ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಚುನವಣಾ ರಿಲಸ್ಟ್ ಬರುತ್ತಿದ್ದಂತೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಾರತದ ಪ್ರಧಾನಿ ಮೋದಿಗೆ ಶುಭಕೋರಿದ್ದಾರೆ. ಇಮ್ರಾನ್ ಟ್ವೀಟ್ ವಿವರ ಇಲ್ಲಿದೆ.

Pakistan pm imran khan wishes narendra modi  after loksabha election result 2019
Author
Bengaluru, First Published May 23, 2019, 5:39 PM IST

ನವದೆಹಲಿ(ಮೇ.23): ಲೋಕಸಭಾ ಚುನಾವಣೆ ಫಲಿತಾಂಶ ಹೋರಬೀಳುತ್ತಿದ್ದಂತೆ ಬಿಜೆಪಿ ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ, ಇತ್ತ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇದೀಗ ಭಾರತದ ಬದ್ಧವೈರಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ದೆಹಲಿಯ 7 ಕ್ಷೇತ್ರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- AAP,ಕಾಂಗ್ರೆಸ್‌ಗೆ ಮುಖಭಂಗ!

ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮೋದಿ ಹಾಗೂ ಬಿಜೆಪಿ ಒಕ್ಕೂಟಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ ಜೊತೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಹಾಗೂ ಅಭಿವೃದ್ದಿಗಾಗಿ ಶ್ರಮಿಸಲು ಎದುರುನೋಡುತ್ತಿದ್ದೇನೆ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

 

 

ಫೆಬ್ರವರಿ 14, 2019ರಂದು ಜಮ್ಮ ಮತ್ತು ಕಾಶ್ಮೀರದ ಪುಲ್ಮಾಮಾದಲ್ಲಿ ನಡೆದ ಭಯೋತ್ವಾದಕ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ಸಂಬಂಧ ಹಳಸಿತ್ತು. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಬಯಸಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಇದೀಗ ಮೋದಿ ಹಾಗೂ ಬಿಜೆಪಿ ಗೆಲುವು ಖಚಿತವಾಗುತ್ತಿದ್ದಂತೆ, ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಯಶಸ್ಸಿಗೆ ಮೋದಿಗೆ ಅಭಿನಂದಿಸಿದ ಸುಷ್ಮಾ ಸ್ವರಾಜ್

ಬಿಜೆಪಿ ಒಕ್ಕೂಟದ NDA 351 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಒಕ್ಕೂಟದ UPA 91 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಇತರರು 100 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. 

Follow Us:
Download App:
  • android
  • ios