ನವದೆಹಲಿ[ಮಾ. 12] ರಾಜಕಾರಣದ ತಂತ್ರಗಳು ಏನೇ ಇರಬಹುದು. ಜನರನ್ನು ತಲುಪಲು ಪಕ್ಷಗಳು ವಿವಿಧ ರೀತಿಯ ಸರ್ಕಸ್ ಮಾಡಬಹುದು. ಆದರೆ ಕಳೆದ ಅವಧಿಯಲ್ಲಿ ಪೊಲಿಟಿಕಲ್ ಗೇಮ್ ಬದಲಾಯಿಸುವ ಟಾಪ್ 10 ಯೋಜನೆಗಳು ಏನು? ಇಲ್ಲಿದೆ ಉತ್ತರ.

1. ಸರ್ಜಿಕಲ್ ದಾಳಿ:  1971ರ ನಂತರ ಭಾರತ ಪಾಕಿಸ್ತಾನದ ಒಳಗ್ಗೆ ನುಗ್ಗಿ ಉಗ್ರರನ್ನು ಸದೆ ಬಡಿದು ಬಂದಿದೆ. ಇದು ಸಹಜವಾಗಿಯೇ ದೇಶದ ಜನರಲ್ಲಿ ರಾಷ್ಟ್ರಾಭಿಮಾನ ಮೂಡಿಸಿದೆ.

ಸರ್ಜಿಕಲ್ ದಾಳಿಗೆ ಸಾಕ್ಷಿ ಬೇಕೆ? ಇಲ್ಲಿದೆ ನೋಡಿ

2. ಉರಿ ದಾಳಿ: ಕೊಂಚ ಹಿಂದಕ್ಕೆ ಹೋದರೆ ನಮ್ಮ ಯೋಧರ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದ ಉಗ್ರರ ಹುಟ್ಟು ಅಡಗಿಸಿದ್ದ ಉರಿ ದಾಳಿ ಸಪ್ಟೆಂಬರ್ 29, 2016ರ ಕಹಿ ಘಟನೆಗೆ ಸಾಂತ್ವನ ಹೇಳಿದ್ದು ಸುಳ್ಳಲ್ಲ.

3. ಶೇ. 10 ಮೀಸಲು: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೂ ನೀಡಿರುವ ಶೇ. 10 ಮೀಸಲು ಒಂದು ದಿಟ್ಟ ಹೆಜ್ಜೆ.

4. ಆದಾಯ ತೆರಿಗೆ ಮಿತಿ: 2019ರ ಬಜೆಟ್ ನಲ್ಲಿ ಘೋಷಣೆ ಮಾಡಿದ ಆದಾಯ ತೆರಿಗೆ ರಿಬೇಟ್ ಬದಲಾವಣೆ ಮಧ್ಯಮ ವರ್ಗವದವರಿಗೆ ಲಾಭ ತಂದುಕೊಡಲಿದೆ. 6.5 ಲಕ್ಷ ರೂ. ವರೆಗೆ ವಾರ್ಷಿಕ ಆದಾಯ ಇರುವವರಿಗೆ ನೆರವು ನೀಡಲಿರುವುದು ಸುಳ್ಳಲ್ಲ.

ಎಲ್ಲರಿಗೂ ತುಂಬಾ ಇಂಪಾರ್ಟೆಂಟ್: ಇದು ಟ್ಯಾಕ್ಸ್ ವಿನಾಯ್ತಿಯ ಬಜೆಟ್!

5. ಕಿಸಾನ್ ಸಮ್ಮಾನ್ ನಿಧಿ ಯೋಜನೆ: 5 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಸಹಾಯಧನ ನೀಡುವ ಯೋಜನೆ ನೇರವಾಗಿ ರೈತರ ಖಾತೆಗೆ ನೇರವಾಗಿ ದೊರೆಯಲಿದೆ. 

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!

6. ಆಯುಷ್ಮಾನ್ ಭಾರತ್: 2018ರಲ್ಲಿ ಜಾರಿಗೆ ಬಂದ ಯೋಜನೆ ಆರೋಗ್ಯ ವಿಮೆ ನೀಡಲಿದ್ದು 5 ಲಕ್ಷ ರೂ. ವರೆಗೂ ನೆರವು ನೀಡಲಿದೆ. 100 ಮಿಲಿಯನ್ ಕುಟುಂಬಗಳಿಗೆ ಇದು ಸಹಾಯವಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆ ಸಂಪೂರ್ಣ ವಿವರ

7. ಪ್ರಧಾನ ಮಂತ್ರಿ ಉಜ್ವಲ ಯೋಜನೆ: 2016ರಲ್ಲಿ ಜಾರಿಯಾದ ಯೋಜನೆ 5 ಕೋಟಿ ಬಡ ಮಹಿಳೆಯರಿಗೆ ಗ್ಯಾಸ್ ಸಂಪರ್ಕ ನೀಡುವ ಗುರಿಯೊಂದಿಗೆ ಜಾರಿಗೆ ಬಂತು. 1600 ರೂ. ಸಬ್ಸಿಡಿ ದರದಲ್ಲಿ ದೇಶದ ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ನೀಡುತ್ತ ಬರಲಾಗಿದೆ.

8. ಸ್ವಚ್ಛ ಭಾರತ ಅಭಿಯಾನ: ಸ್ವಚ್ಛ ಭಾರತ ಅಭಿಯಾನ ದೇಶದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ತನ್ನಿಂದ ತಾನೇ ಮೂಡಿಬಂತು. 

9. ತಲಾಕ್ ನಿಷೇಧ: ತ್ರಿಪಲ್ ತಲಾಖ್ ಬಗ್ಗೆ ಜಾರಿಯಾದ ಮಹತ್ವದ ತೀರ್ಮಾನ ನಿಜಕ್ಕೂ ಬದಲಾವಣೆಯ ಹೆಜ್ಜೆ ಇಟ್ಟಿತು, ತ್ರಿಪಲ್ ತಲಾಖ್ ನ್ನು ಅಪರಾಧ ಎಂದು ಪರಿಗಣನೆಗೆ ಬಂದಿದ್ದು ಮುಸ್ಲಿಂ ಮಹಿಳೆಯರಲ್ಲಿ ಹೊಸ ವಿಶ್ವಾಸ ತುಂಬಿತು.

10. ಎಸ್ ಸಿ, ಎಸ್ಟಿ ನಿಯಮ: ಎಸ್ ಸಿ, ಎಸ್ಟಿಗಳ ಹಕ್ಕು ಕಾಪಾಡಲು 2018ರಲ್ಲಿ ಸಂಸತ್ ನಲ್ಲಿ ಪಾಸ್ ಆದ ಮಸೂದೆ ಸಹ ಒಂದು ಮೈಲುಗಲ್ಲು.