ಬೆಂಗಳೂರು  : ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ - ಜೆಡಿಎಸ್ ಮೈತ್ರಿಯಾಗಿ ಎದುರಿಸಿದ್ದು, ಆದರೆ ಈ ಮೈತ್ರಿಗೆ ಕೆಲವೆಡೆ ಸಮಸ್ಯೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಮುಖಂಡರು ಬಿಜೆಪಿ ಮತ ಹಾಕಿದ್ದಾರೆ ಎಂದು ಜಿ.ಟಿ ದೇವೇಗೌಡರು ಹೇಳಿಕೆ ನೀಡಿದ ಬೆನ್ನಲ್ಲೇ, ಅವರು ಮೈತ್ರಿಯಲ್ಲೇ ಉತ್ತಮವಾಗಿ ಚುನಾವಣೆಯನ್ನು ಮುನ್ನಡೆಸಬಹುದಿತ್ತು. ಆದರೆ ಅವರ ಕ್ಷೇತ್ರದಲ್ಲಿ ಮೈತ್ರಿಗೆ ಹಿನ್ನಡೆಯಾಗಿದೆ ಎಂದು ದಿನೇಶ್  ಗುಂಡೂರಾವ್ ಈ ಹೇಳಿದರು.  

"

‘ಬಿಜೆಪಿ ತೊರೆಯುವ ಮಾತು ಸಾಬೀತಾದಲ್ಲಿ ರಾಜಕೀಯ ನಿವೃತ್ತಿ’

ಕೆಲವೆಡೆ ಮೈತ್ರಿಗೆ ಸಮಸ್ಯೆ ಆಗಿರುವುದು ನಿಜ.  ಕೋಲಾರ, ಮಂಡ್ಯ, ಮೈಸೂರಲ್ಲಿ ಮೈತ್ರಿಗೆ ಸಮಸ್ಯೆ ಆಗಿದೆ.  ಆದರೆ ಉಳಿದ ಕ್ಷೇತ್ರಗಳಲ್ಲಿ ಮೈತ್ರಿಗೆ ಯಾವುದೇ ರೀತಿ ಸಮಸ್ಯೆಯಾಗಿಲ್ಲ.  ಇನ್ನು ಕೆಲವೇ ದಿನಗಳಲ್ಲಿ  ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು,  ಬಿಜೆಪಿಗಿಂತ ರಾಜ್ಯದಲ್ಲಿ ಮೈತ್ರಿ ಪಕ್ಷಗಳೇ ಹೆಚ್ಚು ಸ್ಥಾನ ಗೆಲ್ಲಲಿವೆ ಎಂದರು.

ಮಂಡ್ಯ ವಿಚಾರದಲ್ಲಿ ಸಿಎಂ ತಪ್ಪು : ಜಮೀರ್ ಅಹಮದ್ ಅಸಮಾಧಾನ

ಅಲ್ಲದೇ ಜಿ.ಟಿ ದೇವೇಗೌಡ ನೀಡಿದ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು ಈ ಹೇಳಿಕೆ ಗೊಂದಲದಿಂದ ಕೂಡಿದೆ. ಮೈತ್ರಿ ಪಾಲುದಾರರಾಗಿ ಜಿ.ಟಿ ದೇವೇಗೌಡರು ಈ ರೀತಿಯ ಹೇಳಿಕೆಗಳನ್ನ ಕೊಡಬಾರದಿತ್ತು.  ಗೊಂದಲ ಹಾಗೂ ದ್ವಂಧ್ವದ ಹೇಳಿಕೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.