ಮೋದಿ ಬಹಿರಂಗ ಚರ್ಚೆಗೆ ಕರೆದ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಉತ್ತರ | ಕಾಂಗ್ರೆಸ್‌ ಧುರೀಣರ ಪ್ರಶ್ನೆಗೆ ನಾನೊಬ್ಬನೇ ಉತ್ತರಿಸುತ್ತೇನೆ ಎಂದ ಸಿಂಹ |  

ಬೆಂಗಳೂರು (ಏ. 02): ಮೋದಿ ಬಹಿರಂಗ ಚರ್ಚೆಗೆ ಕರೆದ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ಉತ್ತರಿಸಿದ್ದಾರೆ. ಕಾಂಗ್ರೆಸ್ ನ ಎಲ್ಲಾ ಧುರೀಣರು ಒಂದುಕಡೆ ಚರ್ಚೆಗೆ ಬರಲಿ. ನಾನೊಬ್ಬನೇ ಎಲ್ಲರನ್ನೂ ಸೊಲಿಸ್ತೀನಿ. ಅವರೆಲ್ಲರ ಮುಂದೆ ದಾಖಲೆ ಸಮೇತ ನಾನೊಬ್ಬನೇ ನಿಲ್ಲುತ್ತೇನೆ. ನನ್ನ ಹಿಂದೆ ಕೇವಲ ಕಾರ್ಯಕರ್ತರು ಮಾತ್ರ ಇರ್ತಾರೆ. ನಿಶ್ಚಿತವಾಗಿ ನಾನು ಬಹಿರಂಗ ಚರ್ಚೆಯಲ್ಲಿ ಗೆಲ್ಲುತ್ತೇನೆ ಎಂದು ತಿರುಗೇಟು ಕೊಟ್ಟಿದ್ದಾರೆ. 

Add Asianetnews Kannada as a Preferred SourcegooglePreferred

ಹಿನಕಲ್ ಪ್ಲೈ ಓವರ್‌ ಗೆ ಯಾರು ಕಾರಣ ಅನ್ನೋದನ್ನ ಮುಡಾ ದಾಖಲೆಗಳು ಹೇಳುತ್ತವೆ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಕೊಟ್ಟಿರೋ 7.5 ಸಾವಿರ ಕೋಟಿಯಲ್ಲಿ ಇವರದ್ದು ನಯಾ ಪೈಸೆ ಇಲ್ಲ. ಐದು ಬಾರಿ ಚಾಮುಂಡೇಶ್ಚರಿ ಕ್ಷೇತ್ರ ಪ್ರತಿನಿಧಿಸಿದ ಸಿದ್ದರಾಮಯ್ಯಗೆ ಕುಡಿಯೋ ನೀರು ಕೊಡಲು ಆಗಲಿಲ್ಲ. ಇವತ್ತು ನಾವು ಈ ಭಾಗದಲ್ಲಿ ಮಾಡಿರೋ ಅಭಿವೃದ್ಧಿ ಕಾರ್ಯಗಳನ್ನು ಜನರೇ ನೋಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. 

"