Asianet Suvarna News Asianet Suvarna News

ಏಳು ಬಾರಿ ಗೆದ್ದವನಿಗೆ 8ನೇ ಬಾರಿ ಗೆಲ್ಲುವುದೂ ಗೊತ್ತು: ಯಾರ ಬೆಂಬಲ ಬೇಕಿಲ್ಲ

7 ಬಾರಿ ಗೆದ್ದವನಿಗೆ ಈ ಬಾರಿ ಗೆಲ್ಲುವುದೂ ಗೊತ್ತು| ಯಡಿಯೂರಪ್ಪಗೆ ಮುನಿಯಪ್ಪ ತಿರುಗೇಟು| ಕೋಲಾರ ಕೈ ಶಾಸಕರ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಅಭ್ಯರ್ಥಿ!

Kolar KH Muniyappa Hits Back At Dissidents
Author
Bangalore, First Published Apr 9, 2019, 11:56 AM IST

ರಮನಗರ[ಏ.09]: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯವೂ ಭರದಿಂದ ಸಾಗಿದೆ. ಹೀಗಿರುವಾಗ ರಾಜಕೀಯ ಮುಖಂಡರ ವಾಗ್ದಾಳಿಯೂ ಮುಂದುವರೆದಿದೆ. ಇದೀಗ ತನ್ನ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪಗೆ ಕೈ ನಾಯಕ ಕೆ.ಎಚ್.ಮುನಿಯಪ್ಪ ತಿರುಗೇಟು ನೀಡಿದ್ದಾರೆ.

ಕೋಲಾರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಕೆ. ಎಚ್ ಮುನಿಯಪ್ಪರನ್ನು ಕಣಕ್ಕಿಳಿಸಿದರೆ ಬಿಜೆಪಿಯು ಮುನಿಸ್ವಾಮಿಯವರನ್ನು ಎದುರಾಳಿಯಾಗಿ ತನ್ನ ದಾಳ ಎಸೆದಿದೆ. ಈ ಇಬ್ಬರು ರಾಜಕೀಯ ನಾಯಕರು ಮತದಾರರನ್ನು ಓಲೈಸುವ ಯತ್ನದಲ್ಲಿದ್ದಾರೆ. ಹೀಗಿರುವಾಗ  ತಮ್ಮ ಪಕ್ಷದ ಅಭ್ಯರ್ಥಿ ಮುನಿಸ್ವಾಮಿ ಪರ ಪ್ರಚಾರ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೋಲಾರದಲ್ಲಿ ಮುನಿಯಪ್ಪ ಸೋಲ್ತಾರೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಆಕ್ರೋಶಿತ ಮುನಿಯಪ್ಪ '7 ಬಾರಿ ಗೆದ್ದವನಿಗೆ ಈ ಬಾರಿ ಗೆಲ್ಲೋದು ಹೇಗೆ ಅಂತಾ ಗೊತ್ತಿದೆ' ಎನ್ನುವ ಮೂಲಕ ಬಿಎಸ್ ವೈಗೆ ತಿರುಗೇಟು ನೀಡಿದ್ದಾರೆ.

ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಕೋಲಾರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ. ಎಚ್. ಮುನಿಯಪ್ಪ 'ನನ್ನ ವಿರುದ್ಧ ಹಲವು ವರ್ಷಗಳಿಂದ ರಾಜಕೀಯ ಪಿತೂರಿಗಳು ನಡೆಯುತ್ತಿವೆ.  ಯಡಿಯೂರಪ್ಪನವರು ಹಿರಿಯ ರಾಜಕಾರಣಿ, ಮಾಜಿ ಸಿಎಂ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಹಾಗಾಗಿ ಗೆಲ್ತಾರೆ ಅಂತಿದ್ದಾರೆ ಅಷ್ಟೇ. ಆದರೆ ಗೆಲುವು ಹೇಗೆ ಅಂತಾ  ನನಗೆ ಗೊತ್ತಿದೆ. 7 ಬಾರಿ ಗೆದ್ದವನಿಗೆ ಈ ಬಾರಿ ಗೆಲ್ಲೋದು ಹೇಗೆ ಅಂತಾ ಗೊತ್ತಿದೆ. ನನ್ನ ನಂಬಿರುವ ಜನ ಇದ್ದಾರೆ, ನಾಯಕರಿಗಿಂತ ಹೆಚ್ಚಾಗಿ ಕಾರ್ಯಕರ್ತರು, ಮತದಾರರು ನನ್ನ ಜೊತೆ ಇದ್ದಾರೆ.  ಅದೇ ನನಗೆ ಶ್ರೀ ರಕ್ಷೆ, ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಗೆಲುವು ಖಚಿತ' ಎನ್ನುವ ಮೂಲಕ ಗೆಲುವಿನ ವಿಶ್ಚವಾಸ ವ್ಯಕ್ತಪಡಿಸಿದ್ದಾರೆ.

ಸತತ 8ನೇ ಗೆಲುವಿಗಾಗಿ ಮುನಿಯಪ್ಪ ನಾಮಪತ್ರ: ಕೋಲಾರ ಕೈ ಅಭ್ಯರ್ಥಿಗಿಂತ ಪತ್ನಿಯೇ ಶ್ರೀಮಂತೆ!

ಇನ್ನು ಕೋಲಾರದ ಕೆಲ ಕಾಂಗ್ರೆಸ್ ಶಾಸಕರ ವಿರುದ್ಧ ಹರಿಹಾಯ್ದ ಮುನಿಯಪ್ಪ 'ಪ್ರತಿ ಚುನಾವಣೆಯಲ್ಲಿ ನಾನೇ ಗೆಲ್ಲಿಸಿದ ಮೂರ್ನಾಲ್ಕು ಜನ ಶಾಸಕರು ನನ್ನನ್ನು ವಿರೋಧಿಸುತ್ತಾರೆ. ಆದರೆ ಅವರಿಗೆ ಹೈಕಮಾಂಡ್ ಟಿಕೆಟ್ ಕೊಡುತ್ತೆ, ನಾನು ಗೆಲ್ತಾನೆ ಇದ್ದೀನಿ. ನನಗೆ ಕೋಲಾರದಲ್ಲಿ ಯಾರ ಬೆಂಬಲವೂ ಬೇಕಿಲ್ಲ. ಯಾರು ಬೆಂಬಲ ಮಾಡದಿದ್ದರೂ ನನಗೆ ಜನ ಇದ್ದಾರೆ.  ಮುಳಬಾಗಿಲಿನ ಮಾಜಿ ಶಾಸಕರು ಒಬ್ಬರು ನನಗೆ ವಿರೋಧ ಮಾಡ್ತಿದ್ದಾರೆ. ನಾನು ಕೋಲಾರದಲ್ಲಿ ಮಾಡಿರುವ ಅಭಿವೃದ್ಧಿ ಬಗ್ಗೆ ಜನರಿಗೆ ಗೊತ್ತಿದೆ. ಮೋದಿಯವರು ಈವರೆಗೂ ಯಾರಿಗೂ ಕೆಲಸ ಕೊಟ್ಟಿಲ್ಲ. ಆದರೆ ನಾನು 50 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ' ಎಂದು ಕಿಡಿ ಕಾರಿದ್ದಾರೆ. 

ಕೋಲಾರದ 'ಚಿನ್ನ' ಮುನಿಯಪ್ಪಗೆ ಸ್ವಪಕ್ಷದ ವಿರೋಧ: ಗೆಲ್ತಾರಾ 'ಕಮಲ'ದ ಮುನಿಸ್ವಾಮಿ?

ಇದೇ ಸಂದರ್ಭದಲ್ಲಿ ತಾವು ಒಕ್ಕಲಿಗರಿಗೆ ಬೈದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕೊತ್ತನೂರು ಮಂಜುನಾಥ್ ಆಡಿಯೋ ಬಿಡುಗಡೆ ಮಾಡುತ್ತಾರೆ ಎಂಬುಚ=ವುದಕ್ಕೆ ಪ್ರತಿಕ್ರಿಯಿಸಿದ ಅವರು 'ಅವನು 10 ಆಡಿಯೋ ಬಿಡುಗಡೆ ಮಾಡಲಿ, ಅದಕ್ಕೆ ಅವಕಾಶವಿದೆ. ನನಗೆ ಕ್ಷೇತ್ರದಲ್ಲಿ ಒಕ್ಕಲಿಗರೇ ಬೆನ್ನೆಲುಬಾಗಿದ್ದಾರೆ.  ಒಕ್ಕಲಿಗರೇ ಮೊದಲಿಗರು, ನಂತರ ಬೇರೆಯವರು. ಚುನಾವಣೆ ಸಂದರ್ಭದಲ್ಲಿ ಇದೆಲ್ಲವೂ ಸಾಮಾನ್ಯ'ಎನ್ನುವ ಮೂಲಕ ಸವಾಲೆಸೆದಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

Follow Us:
Download App:
  • android
  • ios