ಕೋಲಾರ[ಮಾ.26]: ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ 7 ಬಾರಿ ಗೆದ್ದಿರುವ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಸೋಮವಾರ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ನಾಮ ಪತ್ರ ಸಲ್ಲಿಕೆಗೆ ಮುನ್ನ ಮುನಿಯಪ್ಪ ಅವರು, ನಗರದ ಗಾಂಧಿವನದಲ್ಲಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಪಸಭಾಪತಿ ಜೆ.ಕೆ.ಕೃಷ್ಣಾರೆಡ್ಡಿ, ಶಾಸಕ ನಂಜೇಗೌಡ, ಶಾಸಕಿ ರೂಪಾ ಶಶಿಧರ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಜೆ.ಕೆ.ವೆಂಟಶಿವಾರೆಡ್ಡಿ, ಮಾಜಿ ಸಚಿವ ನಿಸ್ಸಾರ್‌ ಆಹಮದ್‌ ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕ ಮಂಜುನಾಥ ಗೌಡ, ಕಾಂಗ್ರೆಸ್‌ ಮುಖಂಡರಾದ ವಿ.ಮುನಿಯಪ್ಪ, ಎಸ್‌.ಎನ್‌.ನಾರಾಯಣಸ್ವಾಮಿ, ಎಚ್‌.ನಾಗೇಶ್‌ ಮುಂತಾದವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು, ಅಲ್ಲದೆ ಬಹುತೇಕ ಜೆಡಿಎಸ್‌ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ಮುನಿಯಪ್ಪಗಿಂತ ಪತ್ನಿ ಶ್ರೀಮಂತೆ

ಕೋಲಾರ: ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಅವರಿಗಿಂತ ಅವರ ಪತ್ನಿ ನಾಗರತ್ನಮ್ಮ ಶ್ರೀಮಂತೆಯಾಗಿದ್ದಾರೆ. ಕೆ.ಎಚ್‌.ಮುನಿಯಪ್ಪ .96.35 ಲಕ್ಷ ಮೌಲ್ಯದ ಚರಾಸ್ತಿ ಹಾಗೂ .8.50 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು .9.46 ಕೋಟಿ ಆಸ್ತಿ ಹೊಂದಿದ್ದಾರೆ. ಮುನಿಯಪ್ಪ ಅವರ ಪತ್ನಿ ನಾಗರತ್ನಮ್ಮ .3.45 ಕೋಟಿ ಚರಾಸ್ತಿ ಹಾಗೂ .14.11 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು .17.56 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಪತಿಗಿಂತ .8.1 ಕೋಟಿ ಮೌಲ್ಯದ ಹೆಚ್ಚಿನ ಆಸ್ತಿ ನಾಗರತ್ನಮ್ಮ ಅವರ ಬಳಿಯಿದೆ

ಕೋಲಾರದ 'ಚಿನ್ನ' ಮುನಿಯಪ್ಪಗೆ ಸ್ವಪಕ್ಷದ ವಿರೋಧ: ಗೆಲ್ತಾರಾ 'ಕಮಲ'ದ ಮುನಿಸ್ವಾಮಿ?

ಕೊಡಗಿನ ಆಸ್ತಿಯ ಬಗ್ಗೆ ಉಲ್ಲೇಖ

ಕೆ.ಎಚ್‌. ಮುನಿಯಪ್ಪ ಅವರು ಕೊಡಗಿನಲ್ಲಿ ಅಕ್ರಮ ಆಸ್ತಿ ಹೊಂದಿರುವುದಾಗಿ ಕೋಲಾರದ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ಆರೋಪಿಸಿದ್ದರು. ಇದೀಗ ಆ ಆಸ್ತಿಯ ವಿವರನ್ನು ಮುನಿಯಪ್ಪ ಉಲ್ಲೇಖಿಸಿದ್ದಾರೆ. ಪತ್ನಿ ನಾಗರತ್ನಮ್ಮ ಹೆಸರಲ್ಲಿದ್ದ ಆ ಆಸ್ತಿಯನ್ನು ಸೊಸೆ ಶೃತಿ ಶ್ರೀ ಅವರಿಗೆ ದಾನ ಮಾಡಿರುವುದಾಗಿ ತಿಳಿಸಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ