ವಾರಾಣಸಿ[ಏ.23]: ಚುನಾವಣಾ ಮಹಾಕುಂಭ ಅಂದರೆ ಲೋಕಸಭಾ ಚುನಾವಣೆ 2019ರ ಚುನಾವಣೆ ಆರಂಭವಾಗಿದೆ ಹಾಗೂ ಮತದಾರರು ಉತ್ಸುಕರಾಗಿ ವೋಟ್ ಮಾಡುತ್ತಿದ್ದಾರೆ. ಒಟ್ಟು 7 ಹಂತಗಳಲ್ಲಿ ನಡೆಯುವ ಈ ಚುನಾವಣೆಯ 2 ಹಂತಗಳು ಈಗಾಗಲೇ ನಡೆದಿವೆ. ಈ ಸಂಗ್ರಾಮದಲ್ಲಿ ಹಲವಾರು ವಿಐಪಿ ಕ್ಷೇತ್ರಗಳಿವೆ ಅಂದರೆ ಪ್ರಖ್ಯಾತ ನಾಯಕರು ಕಣಕ್ಕಿಳಿಯುತ್ತಿದ್ದಾರೆ. ಹೀಗಿರುವಾಗ ಇಂತಹ ವಿಐಪಿ ಕ್ಷೇತ್ರಗಳಲ್ಲಿ ಪ್ರಮುಖ ಅಭ್ಯರ್ಥಿಯ ಎದುರಾಳಿಯಾಗಿ ಯಾರೆಲ್ಲಾ ಸ್ಪರ್ಧಿಸುತ್ತಾರೆಂಬ ವಿಚಾರ ಕುತೂಹಲ ಮೂಡಿಸುವಂತಹುದ್ದು. 

ಮೋದಿ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಲು ಶ್ರೀಗಳ ನಿರ್ಧಾರ

ಈ ಬಾರಿಯ ಚುನಾವಣೆಯಲ್ಲಿ ವರಾಣಸಿ ಅತ್ಯಂತ ಪ್ರಮುಖ ಕ್ಷೇತ್ರ ಎನ್ನಲಾಗುತ್ತಿದೆ. ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಹೀಗಿರುವಾಗ ಮೋದಿ ಎದುರಾಳಿಯಾಗಿ SP, BSP ಹಾಗೂ RLD ಮೈತ್ರಿ ಪಕ್ಷದಿಂದ ಯಾರು ಕಣಕ್ಕಿಳಿಯಬಹುದೆಂಬ ಕುತೂಹಲ ಎಲ್ಲರಲ್ಲೂ ಮೂಡಿಸಿತ್ತು. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಏಪ್ರಿಲ್ 22ರಂದು ಸಮಾಜವಾದಿ ಪಕ್ಷದ ನಾಯಕ ಅಖಿಲೆಶ್ ಯಾದವ್ ಅಭ್ಯರ್ಥಿಗಳ ಹೆಸರು ಘೋಷಿಸಿದ್ದಾರೆ ಹಾಗೂ ವಾರಾಣಸಿಯಿಂದ ಶಾಲಿನಿ ಯಾದವ್ ರಿಗೆ ಟಿಕೆಟ್ ನೀಡಿದ್ದಾರೆ.

ವಾರಾಣಸಿ ಸ್ಪರ್ಧೆ ಕುರಿತು ಕೊನೆಗೂ ಮೌನ ಮುರಿದ ಪ್ರಿಯಾಂಕಾ ಗಾಂಧಿ!

ಶಾಲಿನಿ ಯಾದವ್ ಕಾಂಗ್ರೆಸ್ ಮಾಜಿ ಸಂಸದ ಹಾಗೂ ರಾಜ್ಯಸಭೆಯ ಮಾಜಿ ಉಪಸಭಾಪತಿ ಶ್ಯಾಮಲಾಲ್ ಯಾದವ್ ಅವರ ಸೊಸೆಯಾಗಿದ್ದಾರೆ. ಏಪ್ರಿಲ್ 22ರಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ಶಾಲಿನಿ ತಾನು ಅಖಿಲೇಶ್ ಯಾದವ್ ರವರ ನೀತಿಗಳಿಂದ ಪ್ರಭಾವಿತಳಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದರು.

ವಾರಾಣಸಿಯಲ್ಲಿ ಏ.26ಕ್ಕೆ ಮೋದಿ ನಾಮಪತ್ರ?: ಪ್ರಧಾನಿ ವಿರುದ್ಧ ಸ್ಪರ್ಧಿಸುವವರ ಪಟ್ಟಿ ಹೀಗಿದೆ

ಶಾಲಿನಿ ಬನಾರಸ್ ಹಿಂದೂ ಯೂನಿವರ್ಸಿಟಿಯಿಂದ ಇಂಗ್ಲೀಷ್ ಪದವೀಧರೆ ಹಾಗೂ ದೆಹಲಿಯಲ್ಲಿ ಫ್ಯಾಷನ್ ಡಿಸೈನಿಂಗ್ ನಲ್ಲೂ ಪದವಿ ಪಡೆದಿದ್ದಾರೆ. ಈ ಮೊದಲು ಅಂದರೆ 2017ರಲ್ಲಿ ವಾರಾಣಸಿಯಿಂದ ಮೇಯರ್ ಸ್ಥಾನಕ್ಕೂ ಇವರು ಸ್ಪರ್ಧಿಸಿದ್ದಾಋಎ ಎಂಬುವುದು ಗಮನಾರ್ಹ. ಮಾಧ್ಯಮಗಳ ವರದಿಯನ್ವಯ ಅವರು 1.14ಲಕ್ಷ ಮತಗಳನ್ನು ಪಡೆದಿದ್ದರು. ಆದರೆ ಸೋಲನ್ನಪ್ಪಿದ್ದರು.