Asianet Suvarna News Asianet Suvarna News

ಲೋಕ ಸಮರಕ್ಕೆ ಧುಮುಕಿದ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಆಸ್ತಿ ಇಷ್ಟಿದೆ!

ಲೋಕಸಭಾ ಕಣದಲ್ಲಿಸಿರುವ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ[ಸಿಪಿಐ] ದ ಅಭ್ಯರ್ಥಿ ಕನ್ಹಯ್ಯ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

Kanhaiya Kumar Declares Rs 8.5 Lakh As His Annual Income
Author
Bengaluru, First Published Apr 11, 2019, 6:32 PM IST

ಪಾಟ್ನಾ[ಏ. 11]  ನಾಮಪತ್ರ ಸಲ್ಲಿಸುರುವ ಕನ್ಹಯ್ಯ ಕುಮಾರ್ ತನ್ನನ್ನು ತಾನು ನಿರುದ್ಯೋಗಿ ಎಂದು ಕರೆದುಕೊಂಡಿದ್ದು 8.5 ಲಕ್ಷ ರೂ. ವಾರ್ಷಿಕ ಆದಾಯ ಘೋಷಿಸಿಕೊಂಡಿದ್ದಾರೆ. ಬಿಹಾರದ ಬೆಗುಸರೈನಿಂದ ಕನ್ಹಯ್ಯ ಕುಮಾರ್ ಸ್ಪರ್ಧೆ ಮಾಡುತ್ತಿದ್ದಾರೆ.

ಕುಮಾರ್ ಮೇಲೆ 5 ಪ್ರಕರಣಗಳಿವೆ. ಜವಾಹರಲಾಲ್ ನೆಹರು ವಿವಿಯಲ್ಲಿ ಘೋಷಣೆ ಕೂಗಿದ ಪ್ರಕರಣದ ವಿಚಾರವೂ ಇದೆ. 32 ವರ್ಷದ ಕುಮಾರ್ ತಮ್ಮ ಹುಟ್ಟೂರಿನಿಂದ ತ್ರಿಕೋನ ಸ್ಪರ್ಧೆಯ ಪಾಲುದಾರರಾಗುತ್ತಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಆರ್ ಜೆಡಿಯಿಂದ ತನ್ವೀರ್ ಹಸನ್ ಸ್ಪರ್ಧೆ ಮಾಡಲಿದ್ದಾರೆ.

ಬಿಹಾರದ ಬೆಗುಸರೈನಲ್ಲಿ 2 ಲಕ್ಷ ರೂ. ಮೌಲ್ಯದ ಮನೆ ಇದೆ. ಕುಮಾರ್ ತಂದೆ ಒಬ್ಬ ರೈತರಾಗಿದ್ದರೆ, ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ ಎಂದು ಅಫಿಡವಿಟ್ ನಲ್ಲಿ ಕುಮಾರ್ ಘೋಷಣೆ ಮಾಡಿಕೊಂಡಿದ್ದಾರೆ.

ಚುನಾವಣಾ ಖರ್ಚಿಗಾಗಿ ಕನ್ಹಯ್ಯ ಕ್ರೌಡ್‌ಫಂಡಿಂಗ್‌: 3 ದಿನದಲ್ಲಿ ಸಂಗ್ರಹವಾಗಿದ್ದಿಷ್ಟು!

ತಾನೊಬ್ಬ ನಿರುದ್ಯೋಗಿಯಾಗಿದ್ದು ಫ್ರೀ ಲ್ಯಾನ್ಸ್ ಬರವಣಿಗೆ ಮತ್ತು ಕೆಲ ಕಾಲೇಜುಗಳಲ್ಲಿ ಉಪನ್ಯಾಸ ಮಾಡುತ್ತಿದ್ದೇನೆ. ನನ್ನ ಆದಾಯದ ಬಹುಪಾಲು ನಾನು ಬರೆದ ’ಬಿಹಾರ್ ಟು ತಿಹಾರ್’ ಪುಸ್ತಕದಿಂದ ಬಂದಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios