ಪಟನಾ[ಮಾ.31]: ಬಿಹಾರದ ಬೇಗುಸರಾಯ್‌ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಅಖಾಡಕ್ಕಿಳಿದಿರುವ ಜವಾಹರಲಾಲ್‌ ನೆಹರೂ ವಿವಿಯ ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಅವರು ತಮ್ಮ ಚುನಾವಣಾ ಪ್ರಚಾರದ ಹಣ ಕ್ರೋಢೀಕರಣಕ್ಕಾಗಿ ಕ್ರೌಡ್‌ಫಂಡಿಂಗ್‌ ಮೊರೆ ಹೋಗಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಒಂದು ರೂಪಾಯಿ ನೀಡಿ ಕನ್ಹಯ್ಯಾ ಕುಮಾರ್!

ಕ್ರೌಂಡ್‌ಫಂಡಿಂಗ್‌ ಆರಂಭಿಸಿದ 3 ದಿನಗಳಲ್ಲಿ ಕನ್ಹಯ್ಯ ಕುಮಾರ್‌ಗೆ 33 ಲಕ್ಷ ರು. ಹರಿದುಬಂದಿದೆ. ಈ ಮೂಲಕ ಕನ್ಹಯ್ಯಾ ಕುಮಾರ್‌ ಅವರ ಕ್ರೌಡ್‌ಫಂಡಿಂಗ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂಬುದು ವ್ಯಕ್ತವಾಗಿದೆ. ‘ನನಗೆ ನಿಮ್ಮ ಸಹಕಾರ ಬೇಕು. ಪ್ರಜಾಪ್ರಭುತ್ವದಲ್ಲಿ ನೀವು ನಂಬಿಕೆಯಿಡುತ್ತೀರಿ ಎಂದದ್ದೇ ಆದರೆ, ನಾನು ನಿಮ್ಮ ನೆರವು ಕೋರುತ್ತೇನೆ,’ ಎಂದು ಕನ್ಹಯ್ಯಾ ಕೋರಿಕೊಂಡಿದ್ದರು. ಈ ಅಭಿಯಾನದಿಂದ 70 ಲಕ್ಷ ರು. ಸಂಗ್ರಹಿಸುವ ಗುರಿ ಇದೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ