Asianet Suvarna News Asianet Suvarna News

ಮತದಾನ ಮಾಡದಿದ್ದರೆ ನಂದಿಬೆಟ್ಟಕ್ಕೆ ಪ್ರವೇಶವಿಲ್ಲ!

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಏ.18ರ ಗುರುವಾರ ಬರುವ ಪ್ರವಾಸಿಗರು ಕಡ್ಡಾಯವಾಗಿ ಮತದಾನ ಮಾಡಿದ್ದರೆ ಮಾತ್ರ ಪ್ರವೇಶದ ಅವಕಾಶ, ಇಲ್ಲದಿದ್ದರೇ ವಾಪಸ್‌ ಕಳುಹಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್  ಶ್ರವಣ್‌ ಆದೇಶ ಹೊರಡಿಸಿದ್ದಾರೆ.

If not voting tourist not allowed to Nandi hill says Chikballapura DC Anirudh Shravan
Author
Bengaluru, First Published Apr 18, 2019, 8:07 AM IST

ಚಿಕ್ಕಬಳ್ಳಾಪುರ (ಏ. 18):  ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಏ.18 ರ ಗುರುವಾರ ಬರುವ ಪ್ರವಾಸಿಗರು ಕಡ್ಡಾಯವಾಗಿ ಮತದಾನ ಮಾಡಿದ್ದರೆ ಮಾತ್ರ ಪ್ರವೇಶದ ಅವಕಾಶ, ಇಲ್ಲದಿದ್ದರೇ ವಾಪಸ್‌ ಕಳುಹಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಆದೇಶ ಹೊರಡಿಸಿದ್ದಾರೆ.

Live Updates: ರಾಜ್ಯದಲ್ಲಿ ಮತದಾನ ಶುರು; ತಪ್ಪದೇ ಓಟ್ ಮಾಡಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.18 ರಂದು ಮತದಾನ ಮಾಡಲು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಆದರೆ, ಮತದಾನಕ್ಕಾಗಿ ನೀಡಿರುವ ರಜೆಯನ್ನು ನಂದಿಬೆಟ್ಟದಲ್ಲಿ ಕಳೆಯಲು ಬಯಸುವ ಪ್ರವಾಸಿಗರು ಮತದಾನ ಮಾಡಿಯೇ ಬರಬೇಕು. ಮತದಾನ ಮಾಡದೇ ಬರುವ ಪ್ರವಾಸಿಗರಿಗೆ ಸಂಜೆ 6 ಗಂಟೆಯ ವರೆಗೆ ಪ್ರವೇಶ ನಿಷೇಧಿಸಲಾಗಿದೆ. ಮತದಾನ ಮಾಡಿರುವ ಬಗ್ಗೆ ಚುನಾವಣಾ ಶಾಹಿಯ ಗುರುತು ಇರುವ ವ್ಯಕ್ತಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಒಂದು ವೇಳೆ ಪ್ರವಾಸಿಗರು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಐಪಿಸಿಯ ಸೆಕ್ಷನ್‌ 188ರಲ್ಲಿ ನಿಯಮನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನಿಖಿಲ್‌ ವೋಟು ನಿಖಿಲ್‌ಗೇ ಇಲ್ಲ!

ನಂದಿಗಿರಿಧಾಮ ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿದೆ. ಹಾಗಾಗಿ ಚುನಾವಣೆ ಜೊತೆಗೆ ಸಾಲು ಸಾಲು ರಜೆಗಳು ಬಂದಿರುವ ಕಾರಣ ಬೆಂಗಳೂರಿನ ನಾನಾ ಉದ್ಯೋಗಿಗಳು ನಂದಿಗಿರಿಧಾಮದತ್ತ ಆಗಮಿಸುವವರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದಾಗಿ ಮತದಾನ ಮಾಡಿದವರಿಗೆ ಮಾತ್ರ ಪ್ರವೇಶ ಎಂಬ ನಿಯಮ ಜಾರಿ ಮಾಡಿರುವುದರಿಂದ ಮತದಾನ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios