ಮಂಡ್ಯ: ಭಾರೀ ಕುತೂಹಲ ಮೂಡಿಸಿರುವ ಮಂಡ್ಯಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಮದ್ದೂರು ತಾಲೂಕಿನ ದೊಡ್ಡಅರಸಿನಕೆರೆಯಲ್ಲಿ ಗುರುವಾರ ಮತಚಲಾಯಿಸುವರು.

ಆದರೆ, ಪ್ರತಿಸ್ಪರ್ಧಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಮಾತ್ರ ತಮ್ಮ ಮತವನ್ನು ತಮಗೇ ಹಾಕಿಕೊಳ್ಳುವ ಭಾಗ್ಯ ಇಲ್ಲ.

ನಿಖಿಲ್‌ಗೆ ಮಂಡ್ಯದಲ್ಲಿ ಮತವಿಲ್ಲ. ಅವರು ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿರುವ ಕಾರಣ ಬಿಡದಿ ಪುರಸಭೆ ವ್ಯಾಪ್ತಿಯ ಕೇತಿಗಾನಹಳ್ಳಿ ವಾರ್ಡ್‌ನಲ್ಲಿ ನಿಖಿಲ್‌ ತಮ್ಮ ಮತ ಚಲಾಯಿಸಲಿದ್ದಾರೆ