ಹಾಸನ, [ಮಾ.22]: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ದೇವೇಗೌಡ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಕೋಟಿ ಒಡೆಯ.

ಹೌದು... ಹಾಸನ ಲೋಕಸಭಾ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ  ಆಸ್ತಿ ಒಟ್ಟು ಆಸ್ತಿ  7 ಕೋಟಿ 39 ಲಕ್ಷದ 21 ಸಾವಿರದ 662 ರೂಪಾಯಿ ಇದೆ.

ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಶೋಭಾ ಆಸ್ತಿ ವಿವರ, ಸಾಲವೂ ಇದೆ

ಈ ಪೈಕಿ 3,72,53,210 ರೂಪಾಯಿ ಸಾಲಗಾರ. 1,100 ಗ್ರಾಂ ಚಿನ್ನ, 23 ಕೆಜಿ ಬೆಳ್ಳಿ ಸೇರಿದಂತೆ 37,31,350 ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಜತೆಗೆ ಪ್ರಜ್ವಲ್ 4,45, 000 ಬೆಲೆಯ ಜಾನುವಾರು ಹೊಂದಿದ್ದಾರೆ. ಎರಡು ಎತ್ತು, 18 ಹಸು ಸಾಕಿದ್ದಾರೆ.

ಮೈಸೂರಿನಲ್ಲಿ 1 ಕೋಟಿ 90 ಲಕ್ಷ ಮೌಲ್ಯದ ಕಮರ್ಷಿಯಲ್ ಕಾಂಪ್ಲೆಕ್ಸ್ ಇದೆ. ಇನ್ನು ಹಾಸನ, ದುದ್ದ, ಕಸಬಾ, ಹೊಳೆನರಸೀಪುರದಲ್ಲಿ 4 ಕೋಟಿ 89 ಲಕ್ಷದ 15 ಸಾವಿರದ 29 ರೂಪಾಯಿ ಮೌಲ್ಯದ ಜಮೀನು ಹೊಂದಿದ್ದಾರೆ.

ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಒಟ್ಟು ಆಸ್ತಿ ವಿವರ..!

ಕೈತುಂಬ ಸಾಲ ಮಾಡಿಕೊಂಡಿರೋ ಪ್ರಜ್ವಲ್ ..!
7 ಕೋಟಿ ಒಡೆಯನಾಗಿರುವ ಪ್ರಜ್ವಲ್ ಕೈ ತುಂಬ ಸಾಲ ಮಾಡಿಕೊಂಡಿದ್ದಾರೆ.​ ತಾಯಿ ಭವಾನಿ ಬಳಿ 43,75,000, ತಂದೆ ರೇವಣ್ಣ ಬಳಿ 1,26,36,000, ತಾತ ದೇವೇಗೌಡರಿಂದ 5 ಲಕ್ಷ ರೂ, ಅತ್ತೆ ಅನುಸೂಯ ಮಂಜುನಾಥ್ ಬಳಿ 22 ಲಕ್ಷ ರೂ. ಹಾಗೂ ಅತ್ತೆ ಶೈಲಾರಿಂದ 10,50,000 ರೂ.ಸಾಲ ಪಡೆದಿದ್ದಾರೆ. 

ಅಷ್ಟೇ ಅಲ್ಲದೇ ಪ್ರಜ್ವಲ್​, ಅಜ್ಜಿ ಚನ್ನಮ್ಮಗೆ 23 ಲಕ್ಷ, ಸೋದರ ಸೂರಜ್ 37,29,000 ರೂ. ಹಾಗೂ ಸನ್ ಡ್ರೈ ಕಂಪನಿಗೆ 25 ಲಕ್ಷ ಸಾಲ ಕೊಟ್ಟಿದ್ದಾರೆ. ಸದ್ಯ ಪ್ರಜ್ವಲ್ ಬಳಿ 26,99,848 ಹಣವಿದೆ.