ಮಂಡ್ಯ, (ಮಾ.20): ಮಂಡ್ಯ ಲೋಕಸಭಾ ಚುನಾವಣಾ ಕಣ ರಣರಂಗವಾಗಿದ್ದು, ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ವಿರುದ್ಧ ಸುಮಲತಾ ಅಂಬರೀಶ್​​ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಣಕ್ಕಿಳಿದಿದ್ದಾರೆ. 

ಸುಮಲತಾ ಅವರು ತಮ್ಮ ಬೆಂಬಲಿಗರೊಂದಿಗೆ  ಇಂದು (ಬುಧವಾರ] ಡಿಸಿ ಕಚೇರಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಜನಬಲ, ತಾರಾಬಲದೊಂದಿಗೆ ಸುಮಲತಾ ನಾಮಪತ್ರ ಸಲ್ಲಿಕೆ

ನಾಮಪತ್ರ ಜೊತೆಗೆ ತಮ್ಮ ಆಸ್ತಿ ವಿವರವನ್ನು ಅವರು ಸಲ್ಲಿಸಿದ್ದು,  ಸುಮಲತಾ ಒಟ್ಟು ಆಸ್ತಿ ಮೌಲ್ಯ - 23,41,53,000 ರೂ. [23 ಕೊಟಿ 41 ಲಕ್ಷದ 53 ಸಾವಿರ ರೂ.] ಇದೆ ಎಂದು ಘೋಷಿಸಿದ್ದಾರೆ.

ಈ ಪೈಕಿ 5 ಕೆ.ಜಿ ಚಿನ್ನ, 31 ಕೆಜಿ ಬೆಳ್ಳಿ ಹೊಂದಿರುವ ಸುಮಲತಾ ಅಂಬರೀಶ್, ಚರಾಸ್ತಿ 5,68,62,000 ರೂ.(5 ಕೋಟಿ 68 ಲಕ್ಷದ 62 ಸಾವಿರ ರೂ.) ಮತ್ತು 17,72,91,000 ರೂ.(17 ಕೋಟಿ 72 ಲಕ್ಷದ 91)  ಸ್ಥಿರಾಸ್ತಿ ಇದೆ ಎಂದು ನಾಮಪತ್ರದಲ್ಲಿ ಆಸ್ತಿ ವಿವರ ಉಲ್ಲೇಖಿಸಿದ್ದಾರೆ.