ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಂ.1 ಭ್ರಷ್ಟಾಚಾರಿ| ಪ್ರಧಾನಿ ಮೋದಿ ಆರೋಪಕ್ಕೆ NSUI ತಿರುಗೇಟು| ದೇಶಕ್ಕಾಗಿ ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದ NSUI|ಟ್ವಿಟ್ಟರ್ ನಲ್ಲಿ ರಾಜೀವ್ ಬಟ್ಟೆಯ ಫೋಟೋ ಶೇರ್ ಮಾಡಿದ ಕಾಂಗ್ರೆಸ್ ವಿದ್ಯಾರ್ಥಿ ಘಟಕ| 

ಬೆಂಗಳೂರು(ಮೇ.05): ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ನಂ.1 ಭ್ರಷ್ಟಾಚಾರಿ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ವಿದ್ಯಾರ್ಥಿ ಘಟಕ NSUI ತಿರುಗೇಟು ನೀಡಿದೆ.

ಶ್ರೀಲಂಕಾಗೆ ಶಾಂತಿ ಪಾಲನೆ ಪಡೆ ಕಳುಹಿಸಿದ ಪರಿಣಾಮ, LTTE ಉಗ್ರರಿಂದ ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಹತರಾಗಿದ್ದರು. ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ರಾಜೀವ್ ಗಾಂಧಿ ಕುರಿತು ಹಗುರ ಮಾತು ಸಲ್ಲ ಎಂದು NSUI ಕಿಡಿಕಾರಿದೆ.

Scroll to load tweet…

ಈ ಕುರಿತು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ NSUI,ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಹುತಾತ್ಮರಾಗಿದ್ದ ರಾಜೀವ್ ಗಾಂಧಿ ಅವರ ರಕ್ತಸಿಕ್ತ ಬಟ್ಟೆ ಮತ್ತು ಶೂ ಇರುವ ಫೋಟೋ ಶೇರ್ ಮಾಡಿದೆ. 

ದೇಹದ ಪ್ರತಿ ಹನಿ ರಕ್ತವನ್ನೂ ಮಾತೃಭೂಮಿಗೆ ಅರ್ಪಿಸಲಾಗಿದೆ. ಈ ಮೂಲಕ ದೇಶದ ಋಣ ತೀರಿಸಲಾಗಿದೆ ಎಂದು NSUI ಹಿಂದಿ ಭಾಷೆಯ ಗೀತೆಯ ಸಾಲೊಂದನ್ನು ಬರೆದುಕೊಂಡಿದೆ.

ಲೋಕಸಭೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ