ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಆಲಂಗಿಸಿದ ರಾಹುಲ್| ನಿಮಗೊಂದು ಬಿಗಿ ಅಪ್ಪುಗೆ ಪ್ರಧಾನಿ ಎಂದ ಕಾಂಗ್ರೆಸ್ ಅಧ್ಯಕ್ಷ| ರಾಜೀವ್ ಗಾಂಧಿ ಕುರಿತ ಮೋದಿ ಹೇಳಿಕೆಗೆ ರಾಹುಲ್ ತಿರುಗೇಟು| ರಾಜೀವ್ ಗಾಂಧಿ ನಂ.1 ಭ್ರಷ್ಟಾಚಾರಿ ಎಂದು ಪ್ರಧಾನಿ ಮೋದಿ| ನಿಮ್ಮ ಕುರಿತು ನಿಮ್ಮ ಆತ್ಮಕ್ಕಿರುವ ಅಭಿಪ್ರಾಯ ಎಂದ ರಾಹುಲ್| ಟ್ವಿಟ್ಟರ್‌ನಲ್ಲಿ ಮೋದಿಗೆ ಬಿಗಿ ಅಪ್ಪುಗೆಯ ಸಂದೇಶ ಕಳುಹಿಸಿದ ರಾಹುಲ್|

ನವದೆಹಲಿ(ಮೇ.05): ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಕುರಿತು ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳಿಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಮೋದಿ ಅವರೇ ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ. ನಿಮ್ಮ ಬಗ್ಗೆ ನಿಮ್ಮ ಆತ್ಮಕ್ಕಿರುವ ಅಭಿಪ್ರಾಯವನ್ನು ನೀವು ಇಷ್ಟು ಸುಲಭವಾಗಿ ನನ್ನ ತಂದೆಗೆ ವರ್ಗಾಯಿಸಲಾರಿರಿ, ನಿಮಗೊಂದು ಬಿಗಿ ಅಪ್ಪುಗೆ..’ ಎಂದು ಕಾಲೆಳೆದಿದ್ದಾರೆ.

Scroll to load tweet…

ಇನ್ನು ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಿಯಾಂಕಾ ಗಾಂಧಿ ಮತ್ತು ಪಿ. ಚಿದಂಬರಂ, ದೇಶದ ಪ್ರಧಾನಿ ಇಂತಹ ಮಾತುಗಳನ್ನಾಡುವುದು ಖೇದಕರ ಎಂದು ಆಕ್ರೋಶ ಹೊರಹಾಕಿದ್ದಾರೆ.

Scroll to load tweet…

ರಫೆಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಹೇಳುತ್ತಿರುವ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ್ದ ಪ್ರಧಾನಿ ಮೋದಿ, ನಿಮ್ಮ ತಂದೆ ನಂ.1 ಭ್ರಷ್ಟಾಚಾರಿ ಎಂಬ ಹಣೆಪಟ್ಟಿ ಹೊತ್ತು ಜೀವನವನ್ನು ಅಂತ್ಯಗೊಳಿಸಿದರು ಎಂದು ಗುಡುಗಿದ್ದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ