ಹಾಸನ[ಏ. 11]  ಬಿಜೆಪಿ ಒಂದು ಕೋಮುವಾದಿ ಪಕ್ಷ,ಯಾವುದೇ ಕಾರಣಕ್ಕೆ ಅವರು ಅಧಿಕಾರಕ್ಕೆ ಬರಬಾರದು. ಅವರು ಅಧಿಕಾರಕ್ಕೆ ಬಂದರೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತೆ ಹಾಗಾಗಿ ನಾವು ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅರಕಲಗೂಡಿನಲ್ಲಿ ಹೇಳಿದರು.

ಕಳೆದ ಚುನಾವಣೆಯಲ್ಲಿ ನಾವು ಜೆಡಿಎಸ್ ಪರಸ್ಪರ ಹೋರಾಟ ಮಾಡಿದ್ದೇವು. ಆದ್ರೆ ನಮಗೆ ಈ ಚುನಾವಣೆಯಲ್ಲಿ ದೇಶ ಮುಖ್ಯ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಪ್ರಜಾಸತಾತ್ಮಕ ಸಂಸ್ಥೆ ಗಳು ಉಳಿಯಲ್ಲ. ಸಂವಿಧಾನ ಉಳಿಯಲ್ಲ, ಹಾಗಾಗಿ ಎಷ್ಟೆ ಭಿನ್ನಾಭಿಪ್ರಾಯ ಇದ್ರೂ ಅದನ್ನೆಲ್ಲ ಬದಿಗಿಟ್ಟು ನಾವು ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

ಪ್ರಜ್ವಲ್ ಬರೀ ಜೆಡಿಎಸ್ ಅಭ್ಯರ್ಥಿ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಅಭ್ಯರ್ಥಿ. ಇಲ್ಲಿ ಬಿಜೆಪಿ ಅಭ್ಯರ್ಥಿ ಆಗಿರೋದು ಹಿಂದೇನು ಬಿಜೆಪಿಯಲ್ಲೇ ಇದ್ದ ಗಿರಾಕಿ. ಏನೋ ಬದಲಾಗಿದ್ದಾನೆ ಅಂದುಕೊಂಡಿದ್ದಾನೆ ಎಂದು ಎ.ಮಂಜು ವಿರುದ್ಧ ಏಕವಚನದಲ್ಲಿ ದಾಳಿ ಮಾಡಿದರು.

ಶುರುವಾಯ್ತು ರಾಷ್ಟ್ರೀಯ ಹಬ್ಬ: ಇವಿಎಂ ಒಡೆದ ಆಂಧ್ರ ಅಭ್ಯರ್ಥಿ!

ನಾನು ಚುನಾವಣೆಗೆ ಬಂದು ಪ್ರಚಾರ ಮಾಡದಿದ್ದರೆ ಅವರು ಗೆಲ್ಲುತ್ತಿರಲಿಲ್ಲ.  ಏಯ್ ಮಂಜು ನೀನ್ ಸುಳ್ಳು ಹೇಳ್ತೀಯಾ ಅಂತಾ ಗೊತ್ತು, ಆದರೆ ಈರೀತಿ ಸುಳ್ಳು ಹೇಳ್ತೀಯಾ ಅಂದು ಕೊಂಡಿರಲಿಲ್ಲ. ನಾನು ಶ್ರೀನಿವಾಸ್ ಪ್ರಸಾದ್ ಹಾಗೂ ಯಡಿಯೂರಪ್ಪ ಮನೆಗೆ ಮಂಜು ಹೋದಾಗ ಕೇಳಿದ್ರೆ ಇಲ್ಲಾ ಸಾರ್ ನಾನು ನಿಮ್ಮನ್ನ ಬಿಟ್ಟು ಹೋಗಲ್ಲಾ ಅಂದಿದ್ದವ  ನನಗೇ ಚೂರಿ ಹಾಕಿ ಹೋದಾ ಇವನನ್ನ ನಂಬುತ್ತೀರಾ ಎಂದು ಪ್ರಶ್ನೆ ಮಾಡಿದರು.

ನಾನು ಪಿರಿಯಾಪಟ್ಟಣದ ವೆಂಕಟೇಶ ರನ್ನ ಮಂತ್ರಿ ಮಾಡಬೇಕಿತ್ತು. ಆದ್ರೆ ನಾನು ಇವನನ್ನ ಮಂತ್ರಿ ಮಾಡಿದೆ. ನನ್ನ ಮೇಲೆ ನಿಮಗೆ ನಿಜವಾಗಿಯೂ ಪ್ರೀತಿ ಇದ್ರೆ ಈ ಮಂಜೂನ ಸೋಲಿಸಿ. ಬಿಜೆಪಿ ಒಂದೇ ಒಂದು ಕಡೆ ಹಿಂದುಳಿದವರಿಗೆ ಕುರುಬರಿಗೆ ಅಲ್ಪ ಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ದೂರಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.