ಬೆಂಗಳೂರು[ಮಾ. 25]  ದರ್ಶನ್ ಮತ್ತು ಯಶ್ ಕಳ್ ಎತ್ತಾದ್ರೆ, ಕುಮಾರಸ್ವಾಮಿ ನೀವ್ ಬೀದಿ ಬಸವನಾ? ಹೀಗೆಂದು   ಫೇಸ್ ಬುಕ್ ನಲ್ಲಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಹತಾಶರಾಗಿದ್ದಾರೆ. ಹೀಗಾಗಿ ಅವರು ಬಾಯಿಗೆ ಬಂದಂತೆ ಮಾತಾಡ್ತಾ ಇದ್ದಾರೆ. ಜೆಡಿಎಸ್ ಇಂದು ದುಡ್ಡು ನೀಡಿ ಜನರನ್ನು ಸೇರಿಸ್ತಾ ಇದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಗೆ ಜನ ಬೆಂಬಲ ಇಲ್ಲ. ಅಧಿಕಾರ ದುರುಪಯೋಗ ಮಾಡಿಕೊಳ್ತಿದ್ದಾರೆ. ಮಹಘಟಬಂಧನವೂ ಇಲ್ಲ ಏನೂ ಇಲ್ಲ. ಕುಮಾರಸ್ವಾಮಿಗೆ ತನ್ನ ಮಗನ ಗೆಲ್ಲಿಸಿಕೊಂಡ್ರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದಾರೆ. ಮಂಡ್ಯದಲ್ಲಿ ವಿಶೇಷ ವೀಕ್ಷಕರನ್ನು ನೇಮಿಸಬೇಕು. ಸುಮಲತಾ ಅಂಬರೀಶ್ ಸೂಕ್ತ ರಕ್ಷಣೆ ನೀಡಬೇಕು ಎಂದಿದ್ದಾರೆ. 

‘ದರ್ಶನ್, ಯಶ್ ಜೋಡೆತ್ತುಗಳಲ್ಲ, ಬೆಳೆದ ಪೈರು ತಿನ್ನುವ ಕಳ್ಳ ಎತ್ತುಗಳು!’

ಕಳ್ಳರಿಗೆ ಎಲ್ಲಾರೂ ಕಳ್ಳರ ತರ ಕಾಣ್ತಾರೆ. 2004 ರಲ್ಲಿ ರಾಹುಲ್ ಗಾಂಧಿ ಆಸ್ತಿ 54 ಲಕ್ಷ ರೂ. ಇತ್ತು. ಈಗ ಅದು 600 ಪಟ್ಟು ಹೆಚ್ಚಾಗಿದೆ. ಹೀಗಾಗಿ ರಾಹುಲ್ ಗಾಂಧಿಯನ್ನು ಚೋರ್ ಗುರು ಎಂದು ಕರೆಯಬೇಕಾಗತ್ತೆ. ಡಿಕೆ ಶಿವಕುಮಾರ್ ಅಕ್ರಮ ಆಸ್ತಿಯನ್ನು ವಶಕ್ಕೆ ಪಡೆಯುವ ಕೆಲಸ ಇಡಿ ಮಾಡಿದೆ . ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳಲು ಡಿಕೆಶಿ ರಾಜೀನಾಮೆಯನ್ನು ಕಾಂಗ್ರೆಸ್ ಪಡೆಯಬೇಕಿತ್ತು ಎಂದು ಸಿ.ಟಿ.ರವಿ ಹೇಳಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.