ಪಟನಾ[ಮಾ.23]: ಬಿಹಾರದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಲೋಕಸಭೆ ಪ್ರವೇಶಿಸುವ ಆಸೆ ಹೊತ್ತಿದ್ದ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್‌ಗೆ ಶಾಕ್‌ ಹೊಡೆದಿದೆ.

ಶುಕ್ರವಾರ ಪ್ರಕಟಗೊಂಡ ಆರ್‌ಜೆಡಿ- ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದಿಂದ ಎಡಪಕ್ಷಗಳನ್ನು ಹೊರಗಿಡಲಾಗಿದೆ. 40 ಲೋಕಸಭಾ ಸ್ಥಾನಗಳ ಪೈಕಿ ತಮಗೆ ಕನಿಷ್ಠ 4 ಸ್ಥಾನ ನೀಡಬೇಕೆಂದು ಎಡಪಕ್ಷಗಳು ಆರ್‌ಜೆಡಿ- ಕಾಂಗ್ರೆಸ್‌ ಮುಂದೆ ಬೇಡಿಕೆ ಇಟ್ಟಿದ್ದವು.

ವಾರಾಣಸಿಯಲ್ಲಿ ಮೋದಿಗೆ ಹಳೆ ಗೆಳಯನೇ ಅಡ್ಡಿ?: ತೊಡೆ ತಟ್ಟಿದ ತೊಗಾಡಿಯಾ!

ಈ ಸೀಟು ಹಂಚಿಕೆ ಒಪ್ಪಂದದಿಂದ ಕನ್ಹಯ್ಯಾ ಕುಮಾರ್‌ಗೆ ಹಿನ್ನಯಾಗಿದೆ. ಕನ್ಹಯ್ಯಾ ಸ್ಪರ್ಧೆಗೆ ಸಹಮತವಿಲ್ಲದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಟಿಕೆಟ್ ಸಿಗದಂತೆ ಮಾಡಿದ್ದಾರೆನ್ನಲಾಗಿದೆ. ಬಿಹಾರ ಮಹಾಮೈತ್ರಿ ಸೀಟು ಹಂಚಿಕೆ ಸೂತ್ರದಡಿ ತನಗೆ 3-4 ಕ್ಷೇತ್ರಗಳಿಗಿಂತ ಕಡಿಮೆ ನೀಡುವುದನ್ನು ಒಪ್ಪುವುದಿಲ್ಲ ಎಂದು ಸಿಪಿಐ ಹೇಳಿತ್ತು. ಆದರೆ, ಈ ಮೈತ್ರಿಕೂಟದಲ್ಲಿ ಸಿಪಿಐಅನ್ನು ಕಡೆಗಣಿಸಲಾಗಿದೆ. ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳನ್ನು ಇದರಲ್ಲಿ ಪರಿಗಣಿಸಿಯೇ ಇಲ್ಲ. ಕೇವಲ ಸಿಪಿಐಎಂಎಲ್ ಪಕ್ಷಕ್ಕೆ ಆರ್‌ಜೆಡಿಯ 20 ಸೀಟುಗಳ ಕೋಟಾದಲ್ಲಿಯೇ ಒಂದೇ ಒಂದು ಸೀಟನ್ನು ನೀಡಲಾಗಿದೆ.

ಬಾಲಿವುಡ್ ಸೂಪರ್‌ಸ್ಟಾರನ್ನೇ ಮಣಿಸಿದ್ದ ಅಡ್ವಾಣಿ

ಯಾರು ಈ ಕನ್ಹಯ್ಯಾ ಕುಮಾರ್?

ದೆಹಲಿಯ ಜವಹಾರ್​ಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 2016ರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ನಾಯಕರಾಗಿದ್ದ ಕನ್ಹಯ್ಯ ಕುಮಾರ್​ ಮತ್ತು ಉಮರ್​ ಖಲೀದ್​ ದೇಶದ್ರೋಹದ ಹೇಳಿಕೆ ನೀಡಿದ್ದರು. ಇದಾದ ಈ ನಾಯಕ ದೇಶದಾದ್ಯಂತ ಚರ್ಚೆಯಾಗಿದ್ದರು.

ಒಟ್ಟಾರೆಯಾಗಿ ಮೈತ್ರಿಕೂಟದಿಂದ ಎಡಪಕ್ಷಗಳನ್ನೇ ಹೊರಗಿಡಲಾಗಿದ್ದು, ಎಡಪಕ್ಷಗಳಿಂದ ಸ್ಪರ್ಧಿಸಲು ಬಯಸಿದ್ದ ಕನ್ಹಯ್ಯಾಗೆ ಭಾರೀ ಆಘಾತ ಎದುರಾಗಿದೆ.