ಬಾಲಿವುಡ್ ಸೂಪರ್‌ಸ್ಟಾರನ್ನೇ ಮಣಿಸಿದ್ದ ಅಡ್ವಾಣಿ

1991ರ ಲೋಕಸಭೆ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರ ಜಿದ್ದಾಜಿದ್ದಿ ಪೈಪೋಟಿ ಕಂಡಿತ್ತು. ಬಿಜೆಪಿ ಅಭ್ಯರ್ಥಿಯಾಗಿದ್ದ ಅಡ್ವಾಣಿ ಎದುರು ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. 1589 ಮತಗಳಿಂದ ಖನ್ನಾರನ್ನು ಅಡ್ವಾಣಿ ಮಣಿಸಿದ್ದರು

1 ಕ್ಷೇತ್ರಕ್ಕೆ 1033 ಅಭ್ಯರ್ಥಿಗಳು ಸ್ಪರ್ಧಿಸಿದ್ದರು!

ಒಂದು ಕ್ಷೇತ್ರದಲ್ಲಿ ಹೆಚ್ಚೆಂದರೆ ಎಷ್ಟು ಅಭ್ಯರ್ಥಿಗಳು ಸ್ಪರ್ಧಿಸಬಹುದು? 1996ರಲ್ಲಿ ತಮಿಳುನಾಡಿನ ಮೊದೌರಿಚಿ ಎಂಬ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 1033 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮತಪತ್ರವನ್ನು ಪುಸ್ತಕದ ರೀತಿ ಮುದ್ರಿಸಲಾಗಿತ್ತು!

3.71 ಲಕ್ಷ ಮತಗಳ ಅಂತರದ ಜಯ!

2014ರ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರನ್ನು 3.17 ಲಕ್ಷ ಮತಗಳ ಅಂತರದಿಂದ ಮಣಿಸಿದ್ದರು.