ಬಳ್ಳಾರಿ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಪಕ್ಷಾಂತರ ಪರ್ವವೂ ಮುಂದುವರಿದಿದೆ. ಹಿಂದೊಮ್ಮೆ ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿ ಪ್ರಮುಖ ನಾಯಕರೆಲ್ಲರೂ ಕಾಂಗ್ರೆಸ್‌ಗೆ ಸೇರಿದ್ದರು. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪ ವಿಜಯಿಯಾದರು. ಇದೀಗ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಯತ್ನಿಸುತ್ತಿದ್ದು, ಕಾಂಗ್ರೆಸ್‌ ಶಾಸಕ ಹಾಗೂ ಪ್ರಭಾವಿ ಮುಖಂಡರು ಪಕ್ಷಕ್ಕೆ ಮರಳುತ್ತಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ವೆಂಕಟೇಶ್ ಪ್ರಸಾದ್‌ಗದೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಇದ್ದು, ಅವರು ಆಗಲೇ ಬಿಜೆಪಿ ಸೇರಿದ್ದಾರೆ. ಈ ಬೆನ್ನಲ್ಲೇ ಪ್ರಸಾದ್ ಸಹೋದರ, ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಶಾಸಕ ನಾಗೇಂದ್ರ ಸಹ ಬಿಜೆಪಿಗೆ ಸೇರುತ್ತಾರೆ ಎನ್ನಲಾಗಿದೆ. 

ಪ್ರಸಾದ್‌ಗೆ ಟಿಕೆಟ್ ನೀಡಲು ಬಿಜೆಪಿ ರಾಜ್ಯ ಮುಖಂಡರು ಒಲವು ತೋರಿದ್ದಾರೆ. ಇದಕ್ಕೆ ಶ್ರೀರಾಮುಲು ಸಹ ಸಹಮತ ಸೂಚಿಸಿದ್ದಾರೆ. 
ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು ಪ್ರಸಾದ್. ಆದರೆ, ಕೊನೆ ಕ್ಷಣದಲ್ಲಿ ಪಕ್ಷ ಉಗ್ರಪ್ಪಗೆ ಟಿಕೆಟ್ ನೀಡಿತ್ತು. ಇದರಿಂದ ಬೇಸರಗೊಂಡಿದ್ದ ಶಾಸಕ ನಾಗೇಂದ್ರ ಇದೀಗ‌ ಅಣ್ಣ ಬಿಜೆಪಿ ಸೇರುವ ಮೂಲಕ ಉಗ್ರಪ್ಪಗೆ ಟಫ್ ಫೈಟ್ ನೀಡಲು ಸಿದ್ಧರಾಗಿದ್ದಾರೆ. 

ಶ್ರೀರಾಮುಲು, ಸೋಮಶೇಖರ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ವೆಂಕಟೇಶ್ ಪ್ರಸಾದ್ ಹಾಗೂ ಸಹೋದರ ನಾಗೇಂದ್ರ.

ಏಪ್ರಿಲ್ 11ರಿಂದ ಮೇ 19ರ ತನಕ ದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಹಾಗೂ 23 ರಂದು ನಡೆಯಲಿದೆ. ಮೇ 23ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.