ಹೈದರಾಬಾದ್(ಮಾ.26): ಪುಲ್ವಾಮಾ ದಾಳಿಯಾದಾಗ ಪ್ರಧಾನಿ ಮೋದಿ ಬೀಫ್ ಬಿರಿಯಾನಿ ತಿಮದು ಮಲಗಿದ್ದರಾ ಎಂಬ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಇನ್ನು ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಒವೈಸಿ, ಆಯ್ತು ಬೀಫ್ ಬಿರಿಯಾನಿ ಬೇಡ ಅಂದ್ರೆ ಡೋಕ್ಲಾ ತಿಂದು ಮಲಗಿದ್ರಾ ಎಂದು ಕೇಳಲೇ ಎಂದು ವ್ಯಂಗ್ಯವಾಡಿದ್ದಾರೆ.

'ಪ್ರಧಾನಿ ಮೋದಿ ದನದ ಮಾಂಸ ತಿನ್ನುತ್ತಾರೋ ಇಲ್ಲವೋ ಗೊತ್ತಿಲ್ಲ. ಇಲ್ಲ ಅಂತಾದರೆ ಪುಲ್ವಾಮಾ ದಾಳಿಯಾದಾಗ ಡೋಕ್ಲಾ ಅಥವಾ ಇಡ್ಲಿ ತಿಂದು ಮಲಗಿದ್ದರಾ ಎಂದು ಕೇಳುತ್ತೇನೆ' ಎಂದು ಒವೈಸಿ ಹೇಳಿದ್ದಾರೆ.

ಪ್ರಧಾನಿ ಏನು ತಿನ್ನುತ್ತಾರೆ ಎಂಬುದು ಮುಖ್ಯವಲ್ಲ, ಪುಲ್ವಾಮಾ ದಾಳಿಯಿಂದ ನಮ್ಮ ಯೋಧರು ಹುತಾತ್ಮರದಾಗ ಅವರು ಏನು ಮಾಡುತ್ತಿದ್ದರು ಎಂಬುದಷ್ಟೇ ತಮಗೆ ಮುಖ್ಯ ಎಂದು ಒವೈಸಿ ಹೇಳಿದ್ದಾರೆ.

ಚುನಾವಣೆ ಸುದ್ದಿಗಳು