Asianet Suvarna News Asianet Suvarna News

ವಿದ್ಯೆ ಜಾಸ್ತಿಯಾದಂತೆ ವೃದ್ಧಾಶ್ರಮಗಳೂ ಹೆಚ್ಚುತ್ತಿವೆ: ಬಿಸಿ ನಾಗೇಶ್ ವಿಷಾದ

‘ವಿದ್ಯೆ ಜಾಸ್ತಿಯಾದಂತೆ ವೃದ್ಧಾಶ್ರಮಗಳೂ ಹೆಚ್ಚುತ್ತಿವೆ’  ಎಂದು ದೇವಿಗೆರೆಯ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿಷಾದ ವ್ಯಕ್ತಪಡಿಸಿದ್ದಾರೆ.

 

when education increased old age homes also increases says minister BC Nagesh gow
Author
First Published Dec 12, 2022, 3:59 PM IST

ಹೊಸದುರ್ಗ (ಡಿ.12): ವಿದ್ಯೆ ಜಾಸ್ತಿಯಾದಂತೆ ವೃದ್ಧಾಶ್ರಮಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ವಿದ್ಯಾಭ್ಯಾಸವನ್ನು ಹೆಚ್ಚು ನೀಡಿದಂತೆ ವಿಭಕ್ತ ಕುಟುಂಬಗಳು ಜಾಸ್ತಿಯಾಗುತ್ತಿವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು. ತಾಲೂಕಿನ ದೇವಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಗ್ರಾಮದ ಚಿತ್ರಣವನ್ನು ಬದಲಾಯಿಸುವುದು ಗ್ರಾಮದ ಶಾಲೆಗಳು. ಬ್ರಿಟೀಶರು ಶಿಕ್ಷಣ ಕೊಟ್ಟು ಭಾರತೀಯರನ್ನು ಉದ್ಧಾರ ಮಾಡಬೇಕು ಎನ್ನುವ ಭಾವನೆಯಿಂದ ಬಂದವರಲ್ಲ. ನಮ್ಮ ಪೂರ್ವಿಕರ ತ್ಯಾಗದ ಫಲ ವಾಗಿ ಇಂದು ಗ್ರಾಮೀಣ ಶಾಲೆಗಳು ಈ ನಾಡಿಗೆ ಅನೇಕ ಮಹನೀಯರನ್ನು ಕೊಡುಗೆಯಾಗಿ ನೀಡಿವೆ ಎಂದರು.

ಶಿಕ್ಷಣ ಯಾವ ಸಮಾಜವನ್ನು ಸೃಷ್ಠಿ ಮಾಡಬೇಕಿತ್ತೋ ಅದಕ್ಕೆ ವಿರುದ್ಧವಾಗಿ ವಿಭಿನ್ನವಾಗಿ ಕೆಲಸ ಮಾಡುತ್ತಿದೆ ಕೊರೋನಾ ಕಾಲದಲ್ಲಿ ಯಡಿಯೂರಪ್ಪನವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಕಳೆದ ಅವಧಿಯಲ್ಲಿ ಕೇವಲ 4316 ಕೊಠಡಿಗಳನ್ನು ಕಟ್ಟಿದ್ದರು. ಇಂದು 8 ಸಾವಿರ ಕೋಠಡಿಗಳನ್ನು ಕಟ್ಟಿದ್ದೇವೆ, 15 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿದ್ದೇವೆ ಎಂದರು.

ಶಾಸಕ ಗೂಳಿಹಟ್ಟಿಶೇಖರ್‌ ಅಧ್ಯಕ್ಷತೆ ವಹಿಸಿ, ಮಾತನಾಡಿ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶಗಳು ಬರುತ್ತಿವೆ. ತಾಲೂಕಿಗೆ ಡಿಎಂಎಫ್‌ನಲ್ಲಿ 220 ಕೋಟಿ ಹಣ ಶಿಕ್ಷಣ ಇಲಾಖೆಗೆ ಬಂದಿದೆ. ಮಾಡದಕೆರೆ, ಮತ್ತೋಡು ಶ್ರೀರಾಂಪುರ ಹೋಬಳಿಯ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಭಾರತ ಜಗತ್ತಿಗೇ ಮಾರ್ಗದರ್ಶನ ಮಾಡಬಲ್ಲದು: ಸಚಿವ ಬಿ.ಸಿ.ನಾಗೇಶ್‌

ಕಾರ್ಯಕ್ರಮದಲ್ಲಿ ಡಿಡಿಪಿಐ ರವಿಶಂಕರರೆಡ್ಡಿ, ಬಿಇಓ ಎಲ್‌.ಜಯಪ್ಪ, ಗ್ರಾಪಂ ಅಧ್ಯಕ್ಷ ಗೋವಿಂದರಾಜು, ಎಸ್‌ಡಿಎಂಸಿ ಅಧ್ಯಕ್ಷ ಅಂಜನಪ್ಪ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಂಬುಕೇಶವ್‌, ಗ್ರಾಪಂ ಸದಸ್ಯರಾದ ಕಾವ್ಯ, ಮಮತಾ ಮತ್ತಿತರರು ಹಾಜರಿದ್ದರು. ಪ್ರಾರಂಭದಲ್ಲಿ ಶಾಲಾ ಮಕ್ಕಳು ಗಣ್ಯರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಇದೇ ವೇಳೆ ಗುರುವಂದನಾ ಕಾರ್ಯಕ್ರಮ ನಡೆಸಲಾಯಿತು.

 ಮೆಕಾಲೆ ಶಿಕ್ಷಣದಲ್ಲಿ ಸೇವಾಭಾವನೆ ಇಲ್ಲ: ಇಂದು ಶಿಕ್ಷಣದಲ್ಲಿ ಅನೇಕ ಬದಲಾವಣೆಯನ್ನು ತರುತ್ತಿದ್ದೇವೆ. ಮೆಕಾಲೆ ಶಿಕ್ಷಣದಲ್ಲಿ 75 ವರ್ಷಗಳನ್ನು ಕಳೆದಿದ್ದೇವೆ. ಮೆಕಾಲೆ ಶಿಕ್ಷಣದಲ್ಲಿ ಸೇವಾ ಮನೋಭಾವನೆ ಇರಲಿಲ್ಲ. ಓದಿದವ ರೆಲ್ಲಾ ಹೊರದೇಶಕ್ಕಾಗಿ ಹೋಗಬೇಕು. ಪಟ್ಟಣದಲ್ಲಿ ಉದ್ಯೋಗ ಮಾಡಬೇಕು ಎಂಬುದಾಗಿತ್ತು. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಸೇವಾ ಮನೋಭಾವನೆ, ನೆಮ್ಮದಿಯ ಬದುಕು ನೀಡುವುದು ಉದ್ದೇಶವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ಮಕ್ಕಳು ಜ್ಞಾನ ಪಡೆದು ವೃತ್ತಿಯನ್ನು ರೂಪಿಸಿಕೊಳ್ಳಿ: ಸಚಿವ ಬಿ.ಸಿ.ನಾಗೇಶ್‌
ಶಿಕ್ಷಣ ಪಡೆದವರಿಗೆಲ್ಲಾ ಉದ್ಯೋಗ ನೀಡುವುದಾಗಿ ನಾವು ಎಲ್ಲೂ ಹೇಳಿಲ್ಲ. ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್‌ ಕೋರ್ಸ್‌ಗಳಿಗೂ ಬೆಲೆ ಇಲ್ಲದಂತಾಗುತ್ತದೆ. ಮಕ್ಕಳು ಜ್ಞಾನ ಪಡೆದು ಅದರ ಮೂಲಕ ತಮ್ಮ ವೃತ್ತಿಯನ್ನು ರೂಪಿಸಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸುವುದು ಉದ್ಯೋಗ ನೀಡುವುದಕ್ಕಾಗಿ ಅಲ್ಲ ಕೇವಲ ಜ್ಞಾನಾರ್ಜನೆಗಾಗಿ ಮಾತ್ರ ಎಂದರು.

Udupi : ಸಾಧಕ ಶಾಲೆ - ಸಾಧಕ ಶಿಕ್ಷಕ ಪ್ರಶಸ್ತಿ ಪ್ರಧಾನ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಕೇವಲ ಜ್ಞಾನ ನೀಡುವುದು ಮುಖ್ಯವಾಗಿದೆ. ಮೊದಲ ಮೂರು ವರ್ಷ ಮಕ್ಕಳಿಗೆ ಯಾವುದೇ ಪಠ್ಯ ಪುಸ್ತಕವಿರಲ್ಲ, ಒಂದನೇ ತರಗತಿಯ ನಂತರ ಮಕ್ಕಳಿಗೆ ಬೇಸಿಕ್‌ ಅಕ್ಷರಗಳನ್ನು ಕಲಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತರಿಗೂ ತರಬೇತಿ ನೀಡಲಾಗುವುದು. ಮುಂದೆ ಇಂಥದೇ ಶಿಕ್ಷಣ ಪಡೆಯಬೇಕು ಎಂಬುದು ಹೋಗುತ್ತ ದೆ. ಎರಡು ವರ್ಷ ಇಂಜಿನಿಯರಿಂಗ್‌ ಓದಿದ ವಿದ್ಯಾರ್ಥಿ ನಂತರ ಅರ್ಥಶಾಸ್ತ್ರ ಓದಲು ಬರಬಹುದು ಎಂದರು. ಈ ವೇಳೆ ಶಾಸಕ ಗೂಳೀಹಟ್ಟಿಶೇಖರ್‌ ಹಾಜರಿದ್ದರು.

 

Follow Us:
Download App:
  • android
  • ios