Asianet Suvarna News Asianet Suvarna News

Udupi : ಸಾಧಕ ಶಾಲೆ - ಸಾಧಕ ಶಿಕ್ಷಕ ಪ್ರಶಸ್ತಿ ಪ್ರಧಾನ

2022ನೇ ಸಾಲಿನ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಗುಣಮಟ್ಟದ ಸಾಧನೆಯನ್ನು ಮಾಡಿರುವ ಶಾಲೆ ಕಾಲೇಜುಗಳನ್ನು ಗುರುತಿಸಿ ಗೌರವಿಸುವ "ಸಾಧಕ ಶಾಲೆ - ಸಾಧಕ ಶಿಕ್ಷಕ ಪ್ರಶಸ್ತಿ" ಯನ್ನು ಪ್ರದಾನ ಮಾಡಲಾಯ್ತು.

District level Sadhaka School  and Sadhaka Teacher Award  ceremony in udupi gow
Author
First Published Dec 11, 2022, 8:08 PM IST

ವರದಿ: ಶಶಿಧರ್ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್

ಉಡುಪಿ (ಡಿ.11): 2022ನೇ ಸಾಲಿನ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಗುಣಮಟ್ಟದ ಸಾಧನೆಯನ್ನು ಮಾಡಿರುವ ಶಾಲೆ ಕಾಲೇಜುಗಳನ್ನು ಗುರುತಿಸಿ ಗೌರವಿಸುವ "ಸಾಧಕ ಶಾಲೆ - ಸಾಧಕ ಶಿಕ್ಷಕ ಪ್ರಶಸ್ತಿ" ಯನ್ನು ಇಂದು ದಿನಾಂಕ 11-12-2022 ರಂದು ಶ್ರೀ ಕೃಷ್ಣ ಮಠದ ರಾಜ್ಯಾಂಗಣದಲ್ಲಿ ನಡೆದ ಕಿಶೋರ ಯಕ್ಷ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು,  ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಇವರು ಅನುಗ್ರಹ ಸಂದೇಶ ನೀಡಿದರು. ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವಿ ಸುನಿಲ್ ಕುಮಾರ್ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರು "ಸಾಧಕ ಶಿಕ್ಷಕ ಪ್ರಶಸ್ತಿ" ಪ್ರಧಾನ ಮಾಡಿದರು. ಡಾ. ನಿ. ಬಿ. ವಿಜಯ ಬಲ್ಲಾಳ್ ಧರ್ಮದರ್ಶಿಗಳು ಅಂಬಲಪಾಡಿ ದೇವಸ್ಥಾನ ಶುಭಾಶಂಸನೆ ಗೈದರು.

2022 ನೇ ಸಾಲಿನಲ್ಲಿ ದೈಹಿಕ ಶಿಕ್ಷಣ ವಿಭಾಗದಲ್ಲಿ ಸಾಧಕ ಶಿಕ್ಷಕ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಿರುವಂತೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ, ಕ್ರೀಡಾಕೂಟಗಳ ಆಯೋಜನೆ ಮತ್ತು ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಜಗದೀಶ ಕೆ. ಇವರಿಗೆ ಸಾಧಕ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಸಾಧಕ ಶಾಲೆ ಪ್ರಶಸ್ತಿ - 2022 - ಪದವಿ ಪೂರ್ವ ಕಾಲೇಜು ವಿಭಾಗ:
ಕಲಾ ವಿಭಾಗದಲ್ಲಿ ಚಿನ್ನ : ಸರ್ಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ, ಬೆಳ್ಳಿ : ಸರ್ಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ.
ವಾಣಿಜ್ಯ ವಿಭಾಗದಲ್ಲಿ ಚಿನ್ನ : ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಕ್ಕರ್ಣೆ, ಬೆಳ್ಳಿ : ಸರ್ಕಾರಿ ಪದವಿ ಪೂರ್ವ ಕಾಲೇಜು ಕರ್ಜೆ.
ವಿಜ್ಞಾನ ವಿಭಾಗದಲ್ಲಿ ಚಿನ್ನ : ಸರ್ಕಾರಿ ಪದವಿ ಪೂರ್ವ ಕಾಲೇಜು ಮಲ್ಪೆ, ಬೆಳ್ಳಿ : ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಡುಪಿ.

ಸಾಧಕ ಶಾಲೆ ಪ್ರಶಸ್ತಿ - 2022 ಪ್ರೌಢಶಾಲಾ ವಿಭಾಗ 
ಸರಕಾರಿ ವಿಭಾಗದಲ್ಲಿ ಚಿನ್ನ : ಸರ್ಕಾರಿ ಪದವಿ ಪೂರ್ವ ಕಾಲೇಜು,  (ಪ್ರೌಢಶಾಲಾ ವಿಭಾಗ) ಬ್ರಹ್ಮಾವರ. ಬೆಳ್ಳಿ : ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಉಡುಪಿ. ಅನುದಾನಿತ ವಿಭಾಗದಲ್ಲಿ ಚಿನ್ನ : ಸೆಂಟ್ ಸಿಸಿಲಿ ಪ್ರೌಢಶಾಲೆ ಉಡುಪಿ, ಬೆಳ್ಳಿ : ಶಾರದಾ ಪ್ರೌಢಶಾಲೆ ಚೇರ್ಕಾಡಿ.
ಅನುದಾನರಹಿತ ವಿಭಾಗದಲ್ಲಿ : ಚಿನ್ನ : ಮಿಲಾಗ್ರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಲ್ಯಾಣಪುರ ಬೆಳ್ಳಿ : ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಲ್ಪೆ

ಸಾಧಕ ಶಿಕ್ಷಕ ಪ್ರಶಸ್ತಿ - 2022 ಪ್ರೌಢಶಾಲಾ ವಿಭಾಗ, ಕನ್ನಡ ಮಾಧ್ಯಮ
ಕನ್ನಡ- ಪ್ರಥಮ ಭಾಷೆ : ಶಾಲಿನಿ ಸಿ. ಶೆಟ್ಟಿ, ಶಾರದ ಪ್ರೌಢಶಾಲೆ ಚೇರ್ಕಾಡಿ ಸಂಸ್ಕೃತ - ಪ್ರಥಮ ಭಾಷೆ : ಎಚ್. ಎನ್. ಶೃಂಗೇಶ್ವರ ನಿಟ್ಟೂರು ಪ್ರೌಢಶಾಲೆ ಕುಂಜಿಬೆಟ್ಟು ಉಡುಪಿ. ಇಂಗ್ಲೀಷ್ - ದ್ವಿತೀಯ ಭಾಷೆ : ರಿಚ್ಚಾರ್ಡ್ ಸಲ್ದಾನ್ಹಾ ಮಿಲಾಗ್ರೀಸ್ ಪ್ರೌಢಶಾಲೆ ಕಲ್ಯಾಣಪುರ ಉಡುಪಿ. ಹಿಂದಿ - ತೃತೀಯ ಭಾಷೆ : ರಮೇಶ ಶೆಟ್ಟಿ, ಶಾರದಾ ಪ್ರೌಢಶಾಲೆ ಚೇರ್ಕಾಡಿ ಉಡುಪಿ.
ಗಣಿತ : ಲೋಲಿಫಾ ಲಿಝಿ ನೊರೋನ್ಹಾ, ಸೆಂಟ್ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲೆ ಉದ್ಯಾವರ ವಿಜ್ಞಾನ : ಕಿರಣ ಕಾಮತ್ ಮತ್ತು ಜ್ಯೋತಿ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಡುಪಿ. ಸಮಾಜ ವಿಜ್ಞಾನ : ರೇವತಿ ಎಸ್. ಉಪ್ಪೂರ್  ಶಾರದಾ ಪ್ರೌಢಶಾಲೆ ಚೇರ್ಕಾಡಿ ಉಡುಪಿ.

ಬೆಳಗಾವಿ ಅಧಿವೇಶನ ವೇಳೆ ಅನುದಾನರಹಿತ ಶಿಕ್ಷಕರ ಉಪವಾಸ ಸತ್ಯಾಗ್ರಹ

ಸಾಧಕ ಶಿಕ್ಷಕ ಪ್ರಶಸ್ತಿ - 2022 ಪ್ರೌಢಶಾಲಾ ವಿಭಾಗ, ಆಂಗ್ಲ ಮಾಧ್ಯಮ
ಕನ್ನಡ ಪ್ರಥಮ ಮತ್ತು ತೃತೀಯ ಭಾಷೆ : ಜಯಮಾಲಾ ನಾಯ್ಕ, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಡುಪಿ.
ಸಂಸ್ಕೃತ ಪ್ರಥಮ ಭಾಷೆ : ಸುನೀತಾ, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಡುಪಿ. ಇಂಗ್ಲಿಷ್ - ದ್ವಿತೀಯ ಭಾಷೆ : ಪ್ರಶಾಂತ್ ಲೋಪೆಜ್, ಮಿಲಾಗ್ರೀಸ್ ಪ್ರೌಢಶಾಲೆ ಕಲ್ಯಾಣಪುರ, ಉಡುಪಿ. ಹಿಂದಿ ತೃತೀಯ ಭಾಷೆ : ಮೀನಾ ಫೆರ್ನಾಂಡಿಸ್ ಮೌಂಟ್ ರೋಸರಿ ಇಂಗ್ಲಿಷ್ ಪ್ರೌಢಶಾಲೆ ಕಲ್ಯಾಣಪುರ. ಗಣಿತ : ಶುಭ ಆಚಾರ್ಯ.
ವಿಜ್ಞಾನ : ರಜನಿ ಉಡುಪ ಮತ್ತು ದೀಪ ಜಿ ಟಿ
ಸಮಾಜ ವಿಜ್ಞಾನ : ಎಮ್ ಪ್ರೀತಿ, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಡುಪಿ

ಕೊಡಗು ಸೈನಿಕ ಶಾಲೆಯಲ್ಲಿ ಅಂತರ ನಿಲಯ ಗುಡ್ಡಗಾಡು ಓಟದ ಸ್ಪರ್ಧೆ

ಈ ಸಂದರ್ಭದಲ್ಲಿ ಪಣಂಬೂರ್ ವಾಸುದೇವ ಐತಾಳ್, ಪುತ್ತೂರು ಪ್ರವೀಣ್ ಶೆಟ್ಟಿ, ಡಯಟ್ ಪ್ರಾಂಶುಪಾಲರಾದ ಅಶೋಕ್ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ.ಹೆಚ್. ಚಂದ್ರೇಗೌಡ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಂಗನಾಥ್ ಕೆ, ಶಿಕ್ಷಣಾಧಿಕಾರಿಗಳಾದ ಜಾಹ್ನವಿ, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ ಗಂಗಾಧರ ರಾವ್, ಯಕ್ಷ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಟ್ರಸ್ಟಿಗಳಾದ ಮೀನಾ ಲಕ್ಷ್ಮಣಿ ಅಡ್ಯಂತಾಯ ಉಪಸ್ಥಿತರಿದ್ದರು.

Follow Us:
Download App:
  • android
  • ios