ಚಿಕ್ಕಮಗಳೂರು: ನಿವೃತ್ತ ಶಿಕ್ಷಕನಿಗೆ ಊರ ತುಂಬ ಮೆರವಣಿಗೆ ಮಾಡಿ ಬೀಳ್ಕೊಡುಗೆ
ಹಳಿಯೂರು ಗ್ರಾಮದ ಪ್ರೈಮರಿ ಸ್ಕೂಲ್ ನಲ್ಲಿ ಶಿಕ್ಷಕ ಏನ್.ವಿ.ಲಕ್ಷ್ಮಣ್ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. 29 ವರ್ಷಗಳ ಸರ್ಕಾರಿ ಸೇವೆಯಲ್ಲಿದ್ದ ಲಕ್ಷ್ಮಣ್ ಆರಂಭದ 5 ವರ್ಷ ಬೇರೆ ಕಡೆ ಸೇವೆ ಸಲ್ಲಿಸಿ ತದನಂತರ ತರೀಕೆರೆಗೆ ಬಂದಿದ್ದರು. ಹಳಿಯೂರು ಶಾಲೆ ಸೇರಿದ ಮೇಲೆ 23 ವರ್ಷ ಅದೇಶಾಲೆಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.04): 29 ವರ್ಷಗಳ ಸರ್ಕಾರಿ ಸೇವೆಯಲ್ಲಿ 23 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕನಿಗೆ ಊರಿನ ಜನ ಊರಿನ ತುಂಬ ಮೆರವಣಿಗೆ ಮಾಡಿ ಬೀಳ್ಕೊಡುಗೆ ಕೊಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.
ಹಳಿಯೂರು ಗ್ರಾಮದ ಪ್ರೈಮರಿ ಸ್ಕೂಲ್ ನಲ್ಲಿ ಶಿಕ್ಷಕ ಏನ್.ವಿ.ಲಕ್ಷ್ಮಣ್ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸಿದ್ದರು. 29 ವರ್ಷಗಳ ಸರ್ಕಾರಿ ಸೇವೆಯಲ್ಲಿದ್ದ ಲಕ್ಷ್ಮಣ್ ಆರಂಭದ 5 ವರ್ಷ ಬೇರೆ ಕಡೆ ಸೇವೆ ಸಲ್ಲಿಸಿ ತದನಂತರ ತರೀಕೆರೆಗೆ ಬಂದಿದ್ದರು. ಹಳಿಯೂರು ಶಾಲೆ ಸೇರಿದ ಮೇಲೆ 23 ವರ್ಷ ಅದೇಶಾಲೆಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ.
ಚಿಕ್ಕಮಗಳೂರು: ಬೈಕ್‌ಗಳ ಕರ್ಕಶ ಶಬ್ಧ, ಪ್ರವಾಸಿಗರಿಂದ ಸ್ಥಳೀಯರಿಗೆ ಕಿರಿ ಕಿರಿ..!
ಇಡೀ ಊರಿನ ತುಂಬಾ ಅವರು ಎನ್.ವಿ.ಎಲ್. ಎಂದೇ ಖ್ಯಾತಿಯಾಗಿದ್ದರು. ಇದೇ ಜೂನ್ 30ರಂದು ಸೇವೆಯಿಂದ ನಿವೃತ್ತಿಗೊಂಡರು. ಹಾಗಾಗಿ, ಜುಲೈ ಮೂರರಂದು ಊರಿನ ಜನ ಅವರಿಗೆ ಸುರಿಯೋ ಮಳೆ ಮಧ್ಯೆಯೂ ಇಡೀ ಊರಿನ ತುಂಬಾ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಡ್ರಮ್ ಸೆಟ್ನಲ್ಲಿ ವಾದ್ಯಗಳನ್ನು ಮೊಳಗಿಸುತ್ತಾ ಶಿಕ್ಷಕನಿಗೆ ಶಾಲೆಗೆ ಸ್ವಾಗತ ಕೋರಿದ್ದಾರೆ.
ಹೈಸ್ಕೂಲಿನ ಹೆಣ್ಣು ಮಕ್ಕಳು ವೀರಗಾಸೆಯ ಮುಖಾಂತರ ಶಿಕ್ಷಕರನ್ನ ಶಾಲೆಗೆ ಕರೆದೊಯ್ದರು. ಶಾಲೆಯ ಆವರಣಕ್ಕೆ ಬರುತ್ತಿದ್ದಂತೆ ಮಕ್ಕಳು ಶಿಕ್ಷಕನ ಮೇಲೆ ಹೂಮಳೆ ಸುರಿಸಿ ಅವರು ನಡೆಯುವ ದಾರಿಯಲ್ಲಿ ಹೂಗಳನ್ನ ಹಾಕಿ ಶಾಲೆಗೆ ಕರೆತಂದರು. ಊರಿನ ಜನ ಹಾಗೂ ಶಾಲಾ ಮಕ್ಕಳು ಎಲ್ಲರೂ ಸೇರಿ ಶಿಕ್ಷಕರ ದಂಪತಿಗೆ ಸನ್ಮಾನ ಮಾಡಿ ಇಡೀ ಊರಿನಲ್ಲಿ ಹಬ್ಬದ ವಾತಾವರಣದಂತೆ ಶಿಕ್ಷಕರನ್ನ ಬೀಳ್ಕೊಡುಗೆ ಕೊಟ್ಟಿದ್ದಾರೆ.