Asianet Suvarna News Asianet Suvarna News

ಚಿಕ್ಕಮಗಳೂರು: ಬೈಕ್‌ಗಳ ಕರ್ಕಶ ಶಬ್ಧ, ಪ್ರವಾಸಿಗರಿಂದ ಸ್ಥಳೀಯರಿಗೆ ಕಿರಿ ಕಿರಿ..!

ಗಿರಿ ಪ್ರದೇಶಕ್ಕೆ ಭೇಟಿ ನೀಡುವ ನೆಪದಲ್ಲಿ ಕೆಲ ಪ್ರವಾಸಿಗರು ಸ್ಥಳೀಯರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ. ನೂರಾರು ಬೈಕ್ ಗಳಲ್ಲಿ ಒಟ್ಟಿಗೆ ಬರುವ ಪ್ರವಾಸಿಗರು ಕರ್ಕಶವಾದ ಸದ್ದು ಮಾಡುತ್ತ ಶಬ್ಧ ಮಾಲಿನ್ಯ ಉಂಟು ಮಾಡಿ ಸ್ಥಳೀಯರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. 

Locals Tired of the Noise of Tourists Bikes in Chikkamagaluru grg
Author
First Published Jul 4, 2023, 9:45 PM IST | Last Updated Jul 4, 2023, 9:45 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಜು.04):  ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿತ್ಯವೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿಕೊಡುತ್ತಾರೆ. ಗಿರಿ ಪ್ರದೇಶಕ್ಕೆ ಭೇಟಿ ನೀಡುವ ನೆಪದಲ್ಲಿ ಕೆಲ ಪ್ರವಾಸಿಗರು ಸ್ಥಳೀಯರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ. ನೂರಾರು ಬೈಕ್ ಗಳಲ್ಲಿ ಒಟ್ಟಿಗೆ ಬರುವ ಪ್ರವಾಸಿಗರು ಕರ್ಕಶವಾದ ಸದ್ದು ಮಾಡುತ್ತ ಶಬ್ಧ ಮಾಲಿನ್ಯ ಉಂಟು ಮಾಡಿ ಸ್ಥಳೀಯರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. 

ಬೈಕ್ ಶಬ್ಧದಿಂದ ಸ್ಥಳೀಯರಿಗೆ ಕಿರಿ ಕಿರಿ 

ಗಿರಿಭಾಗದ ಪ್ರವಾಸಿ ತಾಣಗಳಲ್ಲಿ ದ್ವಿಚಕ್ರ ವಾಹನಗಳ ಸೈಲೆನ್ಸರ್ಗಳನ್ನು ಮಾರ್ಪಡಿಸಿ ಕರ್ಕಶವಾದ ಸದ್ದು ಮಾಡುತ್ತ ಶಬ್ಧ ಮಾಲಿನ್ಯ ಉಂಟುಮಾಡುತ್ತಿರುವ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಹೊರಗಿನಿಂದ ಬುಲೆಟ್ ಇನ್ನಿತರೆ ಬೈಕ್‌ಗಲ್ಲಿ ಬರುವ ಕೆಲವು ಪ್ರವಾಸಿ ಯುವಕರಿಂದ ಇಂತಹ ಕುಚೇಷ್ಟೆಗಳು ಹೆಚ್ಚುತ್ತಿದ್ದು, ಪ್ರಶಾಂತವಾದ ಗಿರಿ ಪ್ರದೇಶದಲ್ಲಿ ಶಬ್ಧಮಾಲಿನ್ಯದ ಕಿರಿ ಕಿರಿಗೆ ಕಾರಣವಾಗುತಿದೆ ಅಲ್ಲದೆ ಇತರೆ ವಾಹನಗಳ ಚಾಲಕರು ಮತ್ತು ಸವಾರರಗಿಗೂ ಇದರಿಂದ ಸಮಸ್ಯೆ ಆಗುತ್ತಿದೆ. ಮುಂಗಾರು ಆರಂಭವಾಗುತ್ತಿರುವುದರಿಂದ ಗಿರಿ ಭಾಗ ಸೇರಿದಂತೆ ಜಿಲ್ಲೆಯ ಹೆಚ್ಚು ಮಳೆ ಸುರಿಯುವ ಹಾಗೂ ನೀರಿನ ಝರಿ, ಜಲಪಾತಗಳು ಹೆಚ್ಚಿರುವ ಪ್ರದೇಶದಲ್ಲಿ ಕಳೆದ ವಾರಾಂತ್ಯದ ಶನಿವಾರ ಮತ್ತು ಭಾನುವಾರ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಗಿರಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಇವರ ನಡುವೆ ಹೊರಗಿನಿಂದ ಬೈಕ್ಗಳಲ್ಲಿ ತಂಡೋಪ ತಂಡವಾಗಿ ಆಗಮಿಸಿದ್ದ ಕೆಲವು ಯುವಕರು ಬೈಕ್ನ ಸೈಲೆನ್ಸ್ಗಳನ್ನು ಅತೀ ಹೆಚ್ಚು ಶಬ್ಧ ಬರುವಂತೆ ಮಾರ್ಪಡಿಸಿಕೊಂಡು ದಾರಿಯುದ್ಧಕ್ಕೂ ಕರ್ಕಶ ಸದ್ದು ಮಾಡಿದ್ದಾರೆ.ಇದರಿಂದ ಕೆಲವು ಕಾರು ಮತ್ತಿತರೆ ವಾಹನಗಳ ಚಾಲಕರು ಗಲಿಬಿಲಿಗೊಂಡು ಚಾಲನೆಯ ಏಕಾಗ್ರತೆಕಳೆದುಕೊಂಡ ಪ್ರಸಂಗವೂ ನಡೆದಿದೆ. 

CHIKKAMAGALURU: ಜೋಡಿಲಿಂಗದಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ: ಗ್ರಾಮಸ್ಥರಲ್ಲಿ ಆತಂಕ

ಗಿರಿ ತಪ್ಪಲಿನ ಪ್ರಾಣಿ, ಪಕ್ಷಿಗಳ ಸ್ವಚ್ಛಂದತೆ, ಏಕತಾನತೆಗೂ ಧಕ್ಕೆ : 

ಗಿರಿಯಲ್ಲಿ ಅತ್ಯಂತ ಕಡಿದಾದ ರಸ್ತೆಗಳು, ಸಾವಿರಾರು ಅಡಿ ಆಳದ ಪ್ರಪಾತಗಳು ಇರುವುದರಿಂದ ಏಕಾ ಏಕಿ ಈರೀತಿ ಸದ್ದು ಮಾಡುವುದರಿಂದ ನಿಯಂತ್ರಣ ತಪ್ಪಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ ಎನ್ನುವ ಆತಂಕವನ್ನೂ ಹಲವರು ವ್ಯಕ್ತಪಡಿಸಿದ್ದಾರೆ.ಈ ಬೈಕ್ಗಳು ಕೆಲವೊಮ್ಮೆ ನಿರಂತರವಾಗಿ ಕರ್ಕಶ ಸದ್ದು ಮಾಡಿದರೆ, ಮತ್ತೆ ಕೆಲವೊಮ್ಮೆ ಎದೆನಡುಗಿಸುವ ಪಟಾಕಿಯಂತಹ ಭಾರೀ ಸದ್ದು ಕೇಳಿಬರುತ್ತಿದೆ. ಇದು ಇತರೆ ವಾಹನ ಸವಾರರು, ಸ್ಥಳೀಯ ಜನತೆಗಷ್ಟೇ ಅಲ್ಲದೆ, ಗಿರಿ ತಪ್ಪಲಿನ ಪ್ರಾಣಿ, ಪಕ್ಷಿಗಳ ಸ್ವಚ್ಛಂದತೆ, ಏಕತಾನತೆಗೂ ಧಕ್ಕೆ ತರುತ್ತಿದೆ ಎಂದು ಆರೋಪಿಸಲಾಗಿದೆ.ಗಿರಿಭಾಗದಲ್ಲಿ ಈ ರೀತಿ ಉಪಟಳ ಸೃಷ್ಟಿಸುವ ಪುಂಡರು ಹೊರ ಜಿಲ್ಲೆಯಿಂದ ಬರುವಾಗ ದಾರಿಯುದ್ದಕ್ಕೂ ಇದೇ ರೀತಿ ಅನುಚಿತ ವರ್ತನೆಯನ್ನು ತೋರ್ಪಡಿಸಿ ಹಿಡಿಶಾಪಕ್ಕೆ ಗುರಿಯಾಗಿದ್ದಾರೆ.ಈ ರೀತಿ ದುರ್ವರ್ತನೆ ತೋರುವ ಪುಂಡರನ್ನು ಗಿರಿ ಪ್ರವೇಶಿಸುವ ಮೊದಲೇ ಪೊಲೀಸರು ನಗರ ಪ್ರದೇಶದಲ್ಲೇ ಹಿಡಿದು ಕಾನೂನಿನ ಬಿಸಿ ಮುಟ್ಟಿಸಬೇಕು ಎಂದು ಒತ್ತಾಯಿಸಲಾಗಿದೆ.

ಕೆಲವರು ಬೈಕ್‌ನ ಸೈಲೆನ್ಸರ್‌ ಮಫ್ಲರ್ ತೆಗೆದು ಹೆಚ್ಚು ಶಬ್ಧ ಬರುವಂತೆ ಮಾರ್ಪಡಿಸಿ ಶಬ್ಧ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಕೈಮರ ಚೆಕ್ ಪೋಸ್ಟ್‌ನಲ್ಲಿ ಪೊಲೀಸರನ್ನು ನಿಯೋಜಿಸಿ ಬೈಕ್‌ಗನ್ನು ಪರಿಶೀಲಿಸಿ ಬಿಡುವುದರಿಂದ ಇದನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಚಂದ್ರದ್ರೋಣ ತಪ್ಪಲು ಹಿತರಕ್ಷಣಾ ಸಮಿತಿ ಸಂಚಾಲಕ ಗುರುವೇಶ್ ಅಭಿಪ್ರಾಯಪಟ್ಟಿದ್ದಾರೆ. 

Latest Videos
Follow Us:
Download App:
  • android
  • ios