ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಡಿ. 9ರಂದು ವಿಶ್ವವಿದ್ಯಾಲಯದ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ಇದೇ ವೇಳೆ ಮೂವರು ಸಾಧಕರಿಗೆ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಸಿದ್ದು ಪಿ. ಅಲಗೂರು ತಿಳಿಸಿದರು.

ಬಳ್ಳಾರಿ (ಡಿ.9) : ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಡಿ. 9ರಂದು ವಿಶ್ವವಿದ್ಯಾಲಯದ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು, ಇದೇ ವೇಳೆ ಮೂವರು ಸಾಧಕರಿಗೆ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಸಿದ್ದು ಪಿ. ಅಲಗೂರು ತಿಳಿಸಿದರು.

ವಿವಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಘಟಿಕೋತ್ಸವ ಕುರಿತು ಮಾಹಿತಿ ನೀಡಿದ ಅವರು, ಸಾವಯವ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಚಿತ್ರದುರ್ಗ ಜಿಲ್ಲೆ ಬಿ.ಜಿ. ಕೆರೆಯ ಎಸ್‌.ಸಿ. ವೀರಭದ್ರಪ್ಪ, ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಪ್ರಸ್ತುತ ಕೆಎಲ್‌ಇ ಸೊಸೈಟಿಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಲ್ಲಿಕಾರ್ಜುನ ವಿ. ಜಾಲಿ ಹಾಗೂ ಬಳ್ಳಾರಿಯ ಮುನ್ಸಿಪಲ್‌ ಹೈಸ್ಕೂಲ್‌ನ ನಿವೃತ್ತ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ, ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ದಿವಂಗತ ಬಹದ್ದೂರ್‌ ಎಸ್‌. ಶೇಷಗಿರಿ ರಾವ್‌ ಅವರಿಗೆ ಈ ಬಾರಿ ಶುಕ್ರವಾರ ವಿವಿಯಲ್ಲಿ ಜರುಗುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪದವಿ ನೀಡಲಾಗುತ್ತಿದೆ ಎಂದು ತಿಳಿಸಿದರು.

Kannada University ಘಟಿಕೋತ್ಸವ: ಭಾರತ ಜ್ಞಾನದ ವಿಶ್ವಗುರು ಆಗಲಿ: ರಾಜ್ಯಪಾಲ

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ಕುಮಾರ್‌ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್‌್ಥ ನಾರಾಯಣ ಉಪಸ್ಥಿತರಿರುವರು ಎಂದರು.

ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿವಿಧ ವಿಭಾಗಗಳ 60 ಚಿನ್ನದ ಪದಕಗಳ ಪೈಕಿ 48 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ವಿವಿಧ ವಿಭಾಗಗಳ ಒಟ್ಟು 17 ಸಂಶೋಧನಾರ್ಥಿಗಳು ಡಾಕ್ಟರೆಟ್‌ ಪದವಿ ಪಡೆಯಲಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಪದವಿಯ 63 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 73 ಸೇರಿದಂತೆ ಒಟ್ಟು 136 ವಿದ್ಯಾರ್ಥಿಗಳು ರಾರ‍ಯಂಕ್‌ ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಅಕ್ಷಿತಾ ಕುಮಾರಿ ಅವರು 4 ಚಿನ್ನದ ಪದಕಗಳನ್ನು ಪಡೆದಿದ್ದು, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಖನಿಜ ಸಂಸ್ಕರಣ ವಿಭಾಗದ ಟಿ.ಎಲ್‌. ಹೇಮಂತ್‌ ಹಾಗೂ ಬಳ್ಳಾರಿ ವಿವಿಯ ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಆರ್‌. ಪ್ರೀತಿ ಅವರು ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಹಫ್ಸಾ ನೂರೈನ್‌, ರಸಾಯನಶಾಸ್ತ್ರ ವಿಭಾಗದ ಶಮಾಪರ್ವಿನ್‌ ಹುಲಿಗಿ, ಭೌತಶಾಸ್ತ್ರ ವಿಭಾಗದ ಎಸ್‌.ಎಂ. ಅರುಣ್‌ಕುಮಾರ್‌, ಇತಿಹಾಸ ವಿಭಾಗದ ಮೌಲಮ್ಮ ಹಾಗೂ ಸಮಾಜಕಾರ್ಯ ವಿಭಾಗದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿನಿ ಆರ್‌. ಸುಚಿತ್ರಾ ಅವರು ತಲಾ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು. ಕುಲಸಚಿವರಾದ ರಮೇಶ ಓಲೇಕಾರ ಹಾಗೂ ಎಸ್‌.ಸಿ. ಪಾಟೀಲ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಗೌಡಾ ಪದವಿಗೆ ಆರು ಅರ್ಜಿಗಳು ಸಲ್ಲಿಕೆ

ಬಳ್ಳಾರಿ ವಿವಿಯಿಂದ ನೀಡುವ ಗೌರವ ಡಾಕ್ಟರೆಟ್‌ ಪದವಿಗೆ ಜಿಲ್ಲೆಯಿಂದ 6 ಅರ್ಜಿಗಳು ಬಂದಿದ್ದವು. ಈ ಪೈಕಿ ಸಾಮಾಜಿಕ ಕ್ಷೇತ್ರದಿಂದ ಡಾ. ಹಿರೇಹಾಳ್‌ ಇಬ್ರಾಹಿಂಸಾಬ್‌, ಕಲಾ ಕ್ಷೇತ್ರದಿಂದ ಕೆ.ವಿ. ಕಾಳೆ, ಸಾಹಿತ್ಯ ವಲಯದಿಂದ ರಾಜಗುರು ಗುರುಸ್ವಾಮಿ ಕಲಕೇರಿ ಹಾಗೂ ಇದೀಗ ಗೌರವ ಡಾಕ್ಟರೆಟ್‌ ಗೌರವಕ್ಕೆ ಭಾಜನರಾಗಿರುವ ಮೂವರ ಅರ್ಜಿಗಳಿದ್ದವು. ಆರು ಅರ್ಜಿಗಳ ಪೈಕಿ ರಾಜ್ಯಪಾಲರು ಮೂವರನ್ನು ಆಯ್ಕೆ ಮಾಡಿದ್ದಾರೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಪಾತ್ರ ಏನೂ ಇರುವುದಿಲ್ಲ. ರಾಜ್ಯಪಾಲರೇ ನಿರ್ಧರಿಸುತ್ತಾರೆ ಎಂದು ತಿಳಿಸಿದರು.

ಮೂವರಿಗೆ ಹಂಪಿ ಕನ್ನಡ ವಿವಿ ನಾಡೋಜ ಪದವಿ, ಡಿ. 8ರಂದು ವಿವಿಯ ಘಟಿಕೋತ್ಸವ

ಲೈಂಗಿಕ ಕಿರುಕುಳ ಆರೋಪ; ಕ್ರಮವಾಗಲಿದೆ; ವಿಸಿ

ಬಳ್ಳಾರಿ ವಿವಿಯ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಆದಷ್ಟುಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಸಿದ್ದು ಪಿ. ಅಲಗೂರು ತಿಳಿಸಿದರು. ವಿಚಾರಣೆ ನಡೆಸಿ, ನಿಯಮಾನುಸಾರ ಕ್ರಮ ಜರುಗಿಸುತ್ತೇವೆ. ನಿಯಮ ಬಿಟ್ಟು ಏನೂ ಮಾಡಲು ಬರುವುದಿಲ್ಲ. ತಪ್ಪಾಗಿದ್ದರೆ ಖಂಡಿತ ಕ್ರಮವಾಗಲಿದೆ. ಈ ಪ್ರಕರಣದಲ್ಲಿ ಯಾವುದೇ ಒಳ ರಾಜಿಯಾಗಿಲ್ಲ. ನಿಯಮ ಪಾಲಿಸಿ ಕ್ರಮ ವಹಿಸಬೇಕಾಗುತ್ತದೆ ಎಂದರು.