ಬೆಂಗಳೂರು: ಶಿಕ್ಷಣ ಇಲಾಖೆ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು, ಸರ್ಕಾರದ ವಿರುದ್ಧ ಆಕ್ರೋಶ
NEP- 20 ರ ಅಡಿಯಲ್ಲಿ ಯಾವೆಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಸೇರಿದ್ರು, ಅವರೆಲ್ಲರಿಗೂ ಕಾಲೇಜಿಗೆ ಸೇರಿದಾಗಿನಿಂದ ಒಂದಲ್ಲ ಒಂದು ತೊಂದರೆಯಾಗುತ್ತಿದೆ. ಡಿಗ್ರಿಗೆ ಸೇರಿ ಒಂದು ವರ್ಷ ಕಳೆದ್ರೂ ಇನ್ನು ಸಮರ್ಪಕವಾದ ಪಠ್ಯ ಪುಸ್ತಕ ಬಂದಿಲ್ಲ: ಅಭಯ ದಿವಾಕರ್
ಬೆಂಗಳೂರು(ಡಿ.09): ಶಿಕ್ಷಣ ಇಲಾಖೆ ವಿರುದ್ಧ ಪದವಿ ವಿದ್ಯಾರ್ಥಿಗಳು ರಸ್ತೆಗಿಳಿದಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪದವಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಎಐಡಿಎಸ್ಒ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಇದೇ ವೇಳೆ ಮಾತನಾಡಿದ ಎಐಡಿಸಿಒ ಬೆಂಗಳೂರು ಅಧ್ಯಕ್ಷೆ ಅಭಯ ದಿವಾಕರ್ ಅವರು, NEP- 20 ರ ಅಡಿಯಲ್ಲಿ ಯಾವೆಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಸೇರಿದ್ರು, ಅವರೆಲ್ಲರಿಗೂ ಕಾಲೇಜಿಗೆ ಸೇರಿದಾಗಿನಿಂದ ಒಂದಲ್ಲ ಒಂದು ತೊಂದರೆಯಾಗುತ್ತಿದೆ. ಡಿಗ್ರಿಗೆ ಸೇರಿ ಒಂದು ವರ್ಷ ಕಳೆದ್ರೂ ಇನ್ನು ಸಮರ್ಪಕವಾದ ಪಠ್ಯ ಪುಸ್ತಕ ಬಂದಿಲ್ಲ. ಹೊಸ ಶಿಕ್ಷಣ ನೀತಿ ಜಾರಿಗೆ ತಂದು ಸರ್ಕಾರಿ ಶಾಲೆಗಳಲ್ಲೂ ಪ್ರವೇಶ ಶುಲ್ಕ ಹೆಚ್ಚಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳೆಲ್ಲ ಬಡ ಮಕ್ಕಳು, ನೀವು ಅವರ ಬಳಿ 10 ಸಾವಿರ ಶುಲ್ಕ ತೆಗೆದುಕೊಳ್ಳುತ್ತಿದ್ದೀರಾ?, ಬಡ ಮಕ್ಕಳು ಎಲ್ಲಿಂದ ಹಣ ತರುತ್ತಾರೆ ಅಂತ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.
Mandya: ಮೂಲ ಸೌಲಭ್ಯವಿಲ್ಲದ ಮಂಡ್ಯ ವಿಶ್ವವಿದ್ಯಾನಿಲಯ
ಸ್ಕಾಲರ್‌ಶಿಪ್‌ಗೆ ಅಪ್ಲೈ ಮಾಡಲು ಕೂಡ ಆಗುತ್ತಿಲ್ಲ. ಮೊದಲನೇ ಹಾಗೂ ಎರಡನೇ ಸೆಮ್ ಇನ್ನೂ ಕೂಡ ಬಿಡುಗಡೆ ಮಾಡಿಲ್ಲ. ಇದ್ರಿಂದ ಅವರು ಸ್ಕಾಲರ್‌ಶಿಪ್ ಕೂಡ ಅಪ್ಲೈ ಮಾಡಲು ಸಾಧ್ಯವಾಗುತ್ತಿಲ್ಲ. ಬೇಡಿಕೆ ಇರುವಷ್ಟು ಹಾಸ್ಟೆಲ್‌ಗಳ ಸಂಖ್ಯೆ ಹಾಗೂ ದಾಖಲಾತಿಯನ್ನು ಹೆಚ್ಚಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.