ಕೊರೋನಾ ಭಯ: ವಿದೇಶದಲ್ಲಿ ಶಾಲೆ ತೆರೆದರೂ ಮಕ್ಕಳು ಬರ್ತಿಲ್ಲ, ಎಡ್ಮಿಶನ್‌ನಲ್ಲಿ ಭಾರೀ ಕುಸಿತ
ಕೋವಿಡ್ ಸೋಂಕಿನಿಂದಾಗಿ ವಿದೇಶಗಳ ಕಾಲೇಜುಗಳ ಪ್ರವೇಶಾತಿಯಲ್ಲಿ ಭಾರಿ ಕುಸಿತವಾಗಿದೆ. ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿ ಇಲ್ಲದ್ದರಿಂದ ವಿವಿಗಳ ಹಣಕಾಸು ಸ್ಥಿತಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ವಿದೇಶಕ್ಕೆ ಅಧ್ಯಯನಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳಲ್ಲಿ ಭಾರಿ ಇಳಿಕೆಯಾಗುತ್ತಿದೆ. ಕೋವಿಡ್ -19 ಸೋಂಕಿನ ಪರಿಣಾಮ ಬಹಳಷ್ಟು ವಿದ್ಯಾರ್ಥಿಗಳು ವಿದೇಶದಲ್ಲಿ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದಾರೆಂಬ ಮಾಹಿತಿ ಸಮೀಕ್ಷೆಯೊಂದರಲ್ಲಿ ವ್ಯಕ್ತವಾಗಿದೆ.
ಆನ್‌ಲೈನ್ ಮೂಲಕ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಇಚ್ಛಿಸುವವರ ಪ್ರಮಾಣದಲ್ಲಿ ಶೇ.43ರಷ್ಟು ಕುಸಿತವಾಗಿದೆ ಎಂದು ಸಮೀಕ್ಷೆ ಹೇಳಿದೆ. ಈ ಸಮೀಕ್ಷೆಯಲ್ಲಿ 700ಕ್ಕೂ ಹೆಚ್ಚು ಸ್ಕೂಲ್‌ಗಳು ಪಾಲ್ಗೊಂಡಿವೆ.
ಇದು ಇನ್ಸ್‌ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಎಜುಕೇಷನ್ ದಾಖಲಿಸಿದ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಈ ಸಂಸ್ಥೆಯು 1954ರಿಂದಲೂ ಅಂತಾರಾಷ್ಟ್ರೀಯವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವವರ ಬಗ್ಗೆ ಅಧ್ಯಯನವನ್ನು ಕೈಗೊಳ್ಳುತ್ತಾ ಬಂದಿದೆ. ಹೊಸ ಮತ್ತು ಹಳೆಯ ಇಬ್ಬರೂ ವಿದ್ಯಾರ್ಥಿಗಳ ಸೇರಿ ಒಟ್ಟಾರೆ ಇಂಟರ್‌ನ್ಯಾಷನಲ್ ಪ್ರವೇಶಾತಿಯಲ್ಲಿ ಶೇ.16ರಷ್ಟು ಕುಸಿತವಾಗಿದೆ ಎನ್ನುತ್ತದೆ ವರದಿ.
ಬೆಂಗಳೂರು, ಹೈದ್ರಾಬಾದ್‌ನಲ್ಲಿ ಗುತ್ತಿಗೆ ಉದ್ಯೋಗಗಳು ಹೆಚ್ಚು?
ಅಮೆರಿಕದ ಕಾಲೇಜುಗಳಲ್ಲಿ ಪ್ರವೇಶ ಪಡೆದ ಪ್ರತಿ ಐದು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿಯು ಆನ್‌ಲೈನ್ ಮೂಲಕವೇ ವಿದೇಶಿದಿಂದ ಶಿಕ್ಷಣ ಪಡೆಯುತ್ತಿದ್ದಾನೆ. ಕೆಲವು ರಾಷ್ಟ್ರಗಳ ಬೃಹತ್ ವಿವಿಗಳು ದೊಡ್ಡ ಪ್ರಮಾಣದ ನಷ್ಟವನ್ನೇ ಅನುಭವಿಸುತ್ತಿವೆ. ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಅಂಡರ್‌ಗ್ರಾಜ್ಯುಯೇಟ್ ಮತ್ತು ಗ್ರಾಜುಯೇಟ್ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಶೇ.20ರಷ್ಟು ಕಡಿಮೆಯಾಗಿದ್ದರೆ, ಯುನಿವರ್ಸಿಟಿ ಆಪ್ ಟೆಕ್ಸಾಸ್‌ನಲ್ಲಿ ಶೇ.17, ಅರಿಜೋನಾ ಸ್ಟೇಟ್ ಯುನಿರ್ವಸಿಟಿ ಮತ್ತು ಒಹಿಯೋ ಸ್ಟೇಟ್ ಯುನಿರ್ವಸಿಟಿಯಲ್ಲಿ ತಲಾ ಶೇ.15ರಷ್ಟು ಕುಸಿತವಾಗಿದೆ ಎಂದು ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಕೋವಿಡ್ ಸೋಂಕು ಕಾರಣ
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಕುಸಿತ ಕಾಣಲು ಕೋವಿಡ್-19 ಸೋಂಕು ಕಾರಣವಾಗಿದೆ ಎಂಬುದನ್ನು ವಿಶ್ವವಿದ್ಯಾಲಯಗಳ ಆಡಳಿತಗಾರರು ಒಪ್ಪಿಕೊಳ್ಳುತ್ತಾರೆ. ಸೋಂಕಿನ ಜೊತೆಗೆ ಉದ್ಯೋಗ ನಷ್ಟದಿಂದ ಉಂಟಾಗುವ ಹಣಕಾಸಿನ ಒತ್ತಡದಿಂದ ಹಿಡಿದು ಟ್ರಂಪ್ ಆಡಳಿತದ ಪ್ರಸ್ತಾವನೆಯ ಬಗ್ಗೆ ಉಂಟಾಗಿರುವ ಆತಂಕಗಳು, ತಮ್ಮ ಶಾಲೆಗಳು ಆನ್‌ಲೈನ್-ಓನ್ಲೀ ತರಗತಿಗಳನ್ನು ನಡೆಸುತ್ತಿರುವುದರಿಂದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿವೆ ಎನ್ನುತ್ತದೆ ವರದಿ.
ಅನೇಕ ರಾಷ್ಟ್ರಗಳಲ್ಲಿ ಅಮೆರಿಕನ್ ಕಾನ್ಸೂಲೇಟ್ ಕಚೇರಿಗಳು ಮುಚ್ಚಿದ್ದರಿಂದಾಗಿ ಪ್ರಥಮ ಬಾರಿಗೆ ಅಮೆರಿಕ ವೀಸಾ ಪಡೆಯಲು ಮುಂದಾಗಿರುವ ಹೊಸ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗಿದೆ. ಮತ್ತೊಂದೆಡೆ, ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಹೇರಲಾಗಿರುವ ನಿರ್ಬಂಧಗಳು ಮತ್ತು ವಿಮಾನಗಳು ರದ್ದುಗೊಂಡಿದ್ದರಿಂದ ಹಲವರು ತಾವಿರುವಲ್ಲೇ ಸಿಲುಕಿಕೊಂಡಿದ್ದಾರೆ. ಹಾಗಾಗಿ, ಬಹಳಷ್ಟು ತಂದೆ ತಾಯಿಗಳು ವಿಶ್ವವಿದ್ಯಾಲಯಗಳಲ್ಲಿ ತಮ್ಮ ಮಕ್ಕಳ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ.
ಇಂಟಿರೀಯರ್ ಡಿಸೈನ್ ಕೋರ್ಸು ಕಲಿತರೆ ಕೆಲಸ ಗ್ಯಾರಂಟಿ
ಈ ದಶಕದಲ್ಲೇ ಅಂತಾರಾಷ್ಟ್ರೀಯ ಉತನ್ನ ಶಿಕ್ಷಣವು ಅತ್ಯಂತ ಒತ್ತಡವನ್ನು ಎದುರಿಸುತ್ತಿದೆ. ದಿಢೀರ್‌ನೇ ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಕುಸಿತವಾಗಿತ್ತಿರುವುದರಿಂದ ವಿಶ್ವವಿದ್ಯಾಲಯಗಳ ಹಣಕಾಸು ಸ್ಥಿತಿಯ ಮೇಲೂ ಪರಿಣಾಮ ಬಿರಲಿದೆ. ಯಾಕೆಂದರೆ, ವಿದೇಶದಿಂದ ಬರುವ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಶುಲ್ಕವನ್ನ ಭರಿಸುತ್ತಾರೆ. ಯುನಿರ್ವಸಿಟಿ ಆಫ್ ಇಲಿನೋಯಿಸ್ ಒಂದೇ ಅಂದಾಜು 2.6 ಕೋಟಿ ಡಾಲರ್ ನಷ್ಟ ಎದುರಿಸುವ ಸಾಧ್ಯತೆ ಇದೆಯಂತೆ. ಇದು ಕೇವಲ ಹಣಕಾಸು ಪರಿಣಾಮ ಮಾತ್ರವಲ್ಲದೇ ಅದಾರಚೆಗೂ ಅನೇಕ ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ. ಅಮೆರಿಕಕ್ಕೆ ತರಬೇತಿಗೆಂದು ಬರುವ ವಿದೇಶಿಗರ ಮೇಲೆ ಹೈಟೆಕ್ ಕಂಪನಿಗಳು ಹೆಚ್ಚಿನ ಅವಲಂಬನೆಯನ್ನು ಹೊಂದಿರುತ್ತವೆ. ಈಗ ನಡೆಯುತ್ತಿರುವ ಬೆಳವಣಿಗೆಯೂ ಇದರ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎನ್ನುತ್ತಾರೆ ತಜ್ಞರು.
ಅಮೆಜಾನ್‌ನಿಂದ ನೆರವು, ಬಡ ಮಕ್ಕಳ ಮುಖದಲ್ಲಿ ಮಂದಹಾಸ
ಇನ್ನೊಂದೆಡೆ ಆಶಾಭಾವನೆಯೂ ವ್ಯಕ್ತವಾಗುತ್ತಿದೆ. ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರು ವಲಸಿಗರ ವಿರುದ್ಧ ಟ್ರಂಪ್ ಆಡಳಿತ ಅನುಸರಿಸುತ್ತಿದ್ದ ಎಲ್ಲ ನೀತಿಗಳನ್ನು ಬದಲಿಸಿ, ಅವರಿಗೆ ನೆರವಾಗುವಂಥ ನೀತಿಗಳನ್ನು ರೂಪಿಸಲಿದೆ ಎಂಬ ಭರವಸೆ ಇದೆ. ಒಂದೊಮ್ಮೆ ಇದು ನಿಜವಾದರೆ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಪಡೆಯುವುದು ಮತ್ತು ಉನ್ನತ ಕೌಶಗಳನ್ನು ಹೊಂದಿರುವವರು ನೌಕರರು ಅಮೆರಿಕದ ನಾಗರಿಕತ್ವ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ಈಗ ಉಂಟಾಗಿರುವ ಒತ್ತಡ ಪರಿಸ್ಥಿತಿಯನ್ನು ಸ್ವಲ್ಪವಾದರೂ ನಿವಾರಿಸಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.