Asianet Suvarna News Asianet Suvarna News

Education: ಬೆಂಗಳೂರು ಕೃಷಿ ವಿವಿಗೆ ದೇಶದಲ್ಲೇ 3ನೇ ಸ್ಥಾನ

*   ಶಿಕ್ಷಣ, ಸಂಶೋಧನೆ, ಕ್ರೀಡೆ, ಸಾಂಸ್ಕೃತಿಕ ಸಾಧನೆ ಪರಿಗಣಿಸಿ Rank
*   ದಕ್ಷಿಣ ಭಾರತ, ಕರ್ನಾಟಕದ ಕೃಷಿ ವಿವಿಗಳಲ್ಲಿ ಪ್ರಥಮ ಸ್ಥಾನ
*   ವಿವಿಗಳೂ ಗುಣಮಟ್ಟ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪೂರಕ 
 

University of Agricultural Sciences Bangalore is 3rd in the Country grg
Author
Bengaluru, First Published Dec 9, 2021, 11:57 AM IST

ಬೆಂಗಳೂರು(ಡಿ.09):  ಶಿಕ್ಷಣ, ಸಂಶೋಧನೆ ಸೇರಿದಂತೆ ಒಟ್ಟಾರೆ ಚಟುವಟಿಕೆಗಳಲ್ಲಿ ಮಾಡಿರುವ ಸಾಧನೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ(University of Agricultural Sciences, Bangalore) 2020-21ನೇ ಸಾಲಿನಲ್ಲಿ ಇಡೀ ದೇಶದ ಕೃಷಿ ವಿವಿಗಳಲ್ಲಿ ತೃತೀಯ ಸ್ಥಾನ ಗಳಿಸಿದ್ದು, ದಕ್ಷಿಣ ಭಾರತ(South India) ಹಾಗೂ ಕರ್ನಾಟಕದ ಕೃಷಿ ವಿವಿಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ದೇಶದ 67 ಕೃಷಿ ವಿಶ್ವವಿದ್ಯಾಲಯಗಳ ಕೃಷಿ ವಿವಿಗಳ ಶಿಕ್ಷಣ, ಸಂಶೋಧನೆ, ವಿಸ್ತರಣೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧಿಸಿದ ಗಣನೀಯ ಸಾಧನೆ ಪರಿಗಣಿಸಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಮೌಲ್ಯಮಾಪನ ಮಾಡಿ ಈ ಶ್ರೇಣಿ ನೀಡಿದೆ.

ರಾಷ್ಟ್ರ ಮಟ್ಟದಲ್ಲಿ ಕೃಷಿ ಮತ್ತು ಸಂಬಂಧಿಸಿದ ವಿಶವ್ವಿದ್ಯಾನಿಲಯಗಳ ಗುಣಮಟ್ಟ ಹೆಚ್ಚಿಸಲು ಹಾಗೂ ಜಾಗತಿಕ ಮಟ್ಟದಲ್ಲಿ(Global Level) ಉತ್ತಮ ಶ್ರೇಯಾಂಕ ಪಡೆಯುವ ನಿಟ್ಟಿನಲ್ಲಿ ಛಾಪನ್ನು ಮೂಡಿಸಲು ಇದು ಸಹಾಯಕವಾಗಿದೆ. ಶ್ರೇಯಾಂಕ ನೀಡುವುದರಿಂದ ವಿದ್ಯಾರ್ಥಿಗಳು(Students) ಅತ್ಯುತ್ತಮ ವಿವಿ ಆಯ್ಕೆ ಮಾಡಿಕೊಳ್ಳಬಹುದು. ವಿವಿಗಳೂ ಗುಣಮಟ್ಟ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪೂರಕವಾಗಿದೆ. ವಿವಿಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಿಸಿ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿಯೂ ಮಹತ್ತರ ಪಾತ್ರ ವಹಿಸುತ್ತದೆ.

Inauguration of RV University: ವಿವಿಗಳು ಸಂಶೋಧನೆಗೆ ಆದ್ಯತೆ ನೀಡಬೇಕು: ಸಿಎಂ ಬೊಮ್ಮಾಯಿ

ಕಳೆದ ವರ್ಷ ಬೆಂಗಳೂರು ಕೃಷಿ ವಿವಿಯು ಸಂಶೋಧನಾ ಶ್ರೇಷ್ಠತೆ, ವಿದ್ಯಾರ್ಥಿ ವೇತನ, ಪ್ರವೇಶ, ಸ್ನಾತಕೋತ್ತರ ವಿದ್ಯಾರ್ಥಿಗಳ ಸಾಧನೆ ಹಾಗೂ ನೀಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಶೇಕಡವಾರು ವಿದ್ಯಾರ್ಥಿಗಳ ಮಾನದಂಡಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಇತ್ತೀಚೆಗೆ ಕೃಷಿಯಲ್ಲಿ 5 ನೂತನ ತಳಿ ಮತ್ತು 10 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿತ್ತು.

ದಕ್ಷಿಣ ಭಾರತದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರು ಕೃಷಿ ವಿವಿ ಪ್ರಥಮ ಸ್ಥಾನ ಪಡೆದಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಇದು ವಿವಿಯ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಸಾಧನೆಗೆ ಕಾರಣೀಭೂತರಾದ ಎಲ್ಲರನ್ನೂ ಅಭಿನಂದಿಸುತ್ತೇನೆ. ಇದರ ಶ್ರೇಯಸ್ಸು ಪ್ರಮುಖವಾಗಿ ರೈತ ಬಾಂಧವರು, ಅಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸಲ್ಲುತ್ತದೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ತಿಳಿಸಿದ್ದಾರೆ.  

ಬೆಂಗಳೂರು ನಗರ ವಿವಿಯಲ್ಲಿ ಇಂಡೋ ಫ್ರೆಂಚ್‌ ಕ್ಯಾಂಪಸ್‌

ಫ್ರಾನ್ಸ್‌ ಸರ್ಕಾರ(France Government) ರಾಜ್ಯದಲ್ಲಿ(Karnataka) ಇಂಡೋ-ಫ್ರೆಂಚ್‌ ಶಿಕ್ಷಣ ಸಂಸ್ಥೆ(Indo-French Institute of Education) ಪ್ರಾರಂಭಿಸಲು ಉತ್ಸುಕವಾಗಿದ್ದು ಆರೋಗ್ಯ, ಇಂಡಸ್ಟ್ರಿ 4.0 ಮತ್ತು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಅವಳಿ ಪದವಿ ನೀಡಲಿದೆ. ಈ ಕ್ಯಾಂಪಸ್‌ ಆರಂಭಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯ(Bengaluru City University) ಸೂಕ್ತವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ(CN Ashwath Narayan) ತಿಳಿಸಿದರು.

4,600 ಕೋಟಿ ವೆಚ್ಚದಲ್ಲಿ 150 ITI ಮೇಲ್ದರ್ಜೆಗೆ: ಅಶ್ವತ್ಥನಾರಾಯಣ

ಭಾರತದಲ್ಲಿನ(India) ಫ್ರಾನ್ಸ್‌ ದೇಶದ ನೂತನ ಕಾನ್ಸುಲ್‌ ಜನರಲ್‌ ಆಗಿ ನೇಮಕಗೊಂಡಿರುವ ಥಿಯರಿ ಬರ್ತೆಲೋಟ್‌ ಅವರು ಬುಧವಾರ ವಿಕಾಸಸೌಧದಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಔಷಧ ಸೇರಿದಂತೆ ಆರೋಗ್ಯ ಉತ್ಪನ್ನ, ಔಷಧ ವಿಜ್ಞಾನ ನಿರ್ವಹಣೆ, ಸುಧಾರಿತ ಫಾರ್ಮಸ್ಫುಟಿಕಲ್‌ ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ, ಇಂಡಸ್ಟ್ರಿ 4.0 ಅಡಿಯಲ್ಲಿ ಸೈಬರ್‌ ಸೆಕ್ಯುರಿಟಿ, ಡೇಟಾ ಅನಲಿಟಿಕ್ಸ್‌, ಮಶೀನ್‌ ಲರ್ನಿಂಗ್‌ ಮುಂತಾದ ವಿಭಾಗಗಳಲ್ಲಿ ಮತ್ತು ಪರಿಸರ ಶಾಸ್ತ್ರದಲ್ಲಿ ಜೀವವೈವಿಧ್ಯ, ಹವಾಮಾನ ಬದಲಾವಣೆ, ಪರಿಸರಸ್ನೇಹಿ ಆರ್ಥಿಕತೆ ವಿಭಾಗಗಳಲ್ಲಿ ಉದ್ದೇಶಿತ ಕ್ಯಾಂಪಸ್‌ನಲ್ಲಿ ಅವಳಿ ಪದವಿ(Indo-French Degree)ಗಳನ್ನು ನೀಡಲಾಗುವುದು ಎಂದು ವಿವರಿಸಿದರು.
 

Follow Us:
Download App:
  • android
  • ios