ಯುಜಿಸಿ ಸ್ಕಾಲರ್‌ಶಿಪ್‌ಗಳಿಗೆ ಅರ್ಜಿ ಆಹ್ವಾನ, ಯಾವ ವಿದ್ಯಾರ್ಥಿಗಳು ಅರ್ಹ?
*ಪಿಜಿ ವಿದ್ಯಾರ್ಥಿ ವೇತನಗಳಿಗಾಗಿ ಯುಜಿಸಿ ಅರ್ಜಿಗಳನ್ನು ಆಹ್ವಾನಿಸಿದೆ
*ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಸಬೇಕು
*ಎಲ್ಲ ಪರಿಶೀಲನೆ ಬಳಿಕ ನವೆಂಬರ್ 15ರೊಳಗೇ ಸ್ಕಾಲರ್‌ಶಿಪ್ ಪ್ರಕಟಗೊಳ್ಳಲಿದೆ
ವಿಶ್ವವಿದ್ಯಾಲಯ ಧನಸಹಾಯ ಆಯೋಗ (University Grant Commission - UGC), ಪೋಸ್ಟ್ ಗ್ರ್ಯಾಜುವೇಟ್ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಘೋಷಿಸಲು ಮುಂದಾಗಿದೆ. ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಜಿಗಳನ್ನು ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗವು ಆಹ್ವಾನಿಸಿದೆ. ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಯುಜಿಸಿ ನೀಡುತ್ತಿರುವ ವಿಧ್ಯಾರ್ಥಿ ವೇತನಗಳ (Scholarships) ಸದುಪಯೋಗ ಪಡೆಯಬಹುದು. ಯುಜಿಸಿ ವಿಶ್ವವಿದ್ಯಾಲಯದ ಶ್ರೇಣಿ ಹೊಂದಿರುವವರಿಗೆ ಪೋಸ್ಟ್ ಗ್ರ್ಯಾಜುವೇಷನ್ ವಿದ್ಯಾರ್ಥಿವೇತನ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಪಿಜಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಯುಜಿಸಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ವಿವರವನ್ನು ಪಡೆದು ಬಳಿಕ ಅರ್ಜಿ ಸಲ್ಲಿಸಬಹುದು. ಯುಜಿಸಿ ಒದಗಿಸುತ್ತಿರುವ ಈ ಸ್ಕಾಲರ್‌ಶಿಪ್ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಈ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ ಎಂದು ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗವು ತಿಳಿಸಿದೆ.
ಇಶಾನ್ ಉದಯ್ (Ishan Uday), ಪಿಜಿ ಇಂದಿರಾ ಗಾಂಧಿ (PG Indira Gandhi), ಪಿಜಿ ಸ್ಕಾಲರ್‌ಶಿಪ್ (PG Scholarship) ಯೋಜನೆಗಳಡಿ ವಿವಿಧ ವರ್ಗದ ವಿದ್ಯಾರ್ಥಿವೇತನ ಯೋಜನೆಗಳನ್ನ ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗವು ಘೋಷಣೆ ಮಾಡಿದೆ. ಇಶಾನ್ ಉದಯ್ ವಿದ್ಯಾರ್ಥಿ ವೇತನ, ಈಶಾನ್ಯ ಪ್ರದೇಶಕ್ಕಾಗಿ ವಿಶೇಷ ವಿದ್ಯಾರ್ಥಿವೇತನ ಯೋಜನೆಯಾಗಿದೆ. ಇನ್ನು ಪಿಜಿ ಇಂದಿರಾ ಗಾಂಧಿ ಸ್ಕಾಲರ್‌ಶಿಪ್ ಒಂಟಿ ಹೆಣ್ಣು ಮಗುವಿಗೆ ಲಭ್ಯವಾಗಲಿದೆ. ವಿಶ್ವವಿದ್ಯಾನಿಲಯ ಶ್ರೇಣಿ ಹೊಂದಿರುವವರಿಗೆ ಪಿಜಿ ವಿದ್ಯಾರ್ಥಿವೇತನ (Ist ಮತ್ತು II ನೇ ಶ್ರೇಣಿ ಹೊಂದಿರುವವರು) ಪಡೆಯಬಹುದು. ಇನ್ನು ವೃತ್ತಿಪರ ಕೋರ್ಸ್‌ಗಳನ್ನು ಮುಂದುವರಿಸಲು ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಪಿಜಿ ಸ್ಕಾಲರ್‌ಶಿಪ್ ಯೋಜನೆಯ ಲಾಭ ಪಡೆಯಬಹುದು.
ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್‌ಗಳನ್ನು ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿವೇತನದ ಅಡಿಯಲ್ಲಿ, ಎಂಇ ಮತ್ತು ಎಂಟೆಕ್ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ತಿಂಗಳಿಗೆ 7,800 ರೂಪಾಯಿ ಮತ್ತು ಇತರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 4,500 ರೂ. ನೀಡಲಾಗುತ್ತದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಐಎಎಸ್ ಟಾಪರ್ ಸೃಷ್ಟಿ ದೇಶಮುಖ್ ಮಾರ್ಕ್ಸ್ ಕಾರ್ಡ್ ವೈರಲ್!
ಇನ್ನು ವಿಶ್ವವಿದ್ಯಾನಿಲಯ ರ್ಯಾಂಕ್ ಪಡೆದವರಿಗೆ ಪಿಜಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಪದವಿ ಹಂತದಲ್ಲಿ ಮೊದಲ ಮತ್ತು ಎರಡನೇ ರ್ಯಾಂಕ್ ಹೊಂದಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿಗಳು ಕಡ್ಡಾಯವಾಗಿ ಯಾವುದೇ ಸ್ನಾತಕೋತ್ತರ ಕೋರ್ಸ್‌ನಲ್ಲಿ ಪ್ರವೇಶ ಪಡೆದವರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಪದವಿ ಹಂತದಲ್ಲಿ ಮೊದಲ ಮತ್ತು ಎರಡನೇ ರ್ಯಾಂಕ್‌ಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಪಿಜಿ ಕೋರ್ಸ್‌ಗಳಿಗೆ ಪ್ರವೇಶ ಪಡೆದವರು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಅವಧಿಗೆ, ಅಂದರೆ ಪಿಜಿ ಕೋರ್ಸ್‌ನ ಪೂರ್ಣ ಅವಧಿಗೆ ತಿಂಗಳಿಗೆ ಒಟ್ಟು 3,100 ರೂ.ಗಳನ್ನು ನೀಡಲಾಗುತ್ತದೆ. ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ನವೆಂಬರ್ 15ರೊಳಗೆ ಅರ್ಜಿಗಳನ್ನ ಪರಿಶೀಲನೆ ನಡೆಸಿ ಯುಜಿಸಿ ವಿದ್ಯಾರ್ಥಿವೇತನದ ಆಯ್ಕೆ ಪಟ್ಟಿ ಪ್ರಕಟಿಸಲಿದೆ.
ಕೆಮಿಕಲ್ ಇಂಜಿನಿಯರಿಂಗ್ ಓದಿ, ಉದ್ಯೋಗದ ಸುಲಭ ಹಾದಿ