Asianet Suvarna News Asianet Suvarna News

ಯುಜಿಸಿ ನೆಟ್‌ ಫೇಸ್‌ 2 ಪರೀಕ್ಷೆ ಮುಂದೂಡಿಕೆ: ಪರಿಷ್ಕೃತ ಪರೀಕ್ಷಾ ದಿನಾಂಕ ಪ್ರಕಟ

ಯುಜಿಸಿ ನೆಟ್‌ನ ಫೇಸ್‌ - 2 ಪರೀಕ್ಷೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಯುಜಿಸಿ ಮುಖ್ಯಸ್ಥ ಎಂ. ಜಗದೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. 

ugc net phase 2 postponed to held on september 20 to 30 ash
Author
Bangalore, First Published Aug 8, 2022, 7:44 PM IST

ರಾಷ್ಟ್ರೀಯ ಅಹತಾ ಪರೀಕ್ಷೆಯ  (National Eligibility Test) ಫೇಸ್‌ 2 ಎಕ್ಸಾಂ ಮುಂದೂಡಿಕೆಯಾಗಿದೆ. ಈ ಸಂಬಂಧ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) (University Grants Commission) ಸೋಮವಾರ ಮಾಹಿತಿ ನೀಡಿದೆ. ಆಗಸ್ಟ್‌ 12 ರಿಂದ 14 ರವರೆಗೆ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಯುಜಿಸಿ ಮುಖ್ಯಸ್ಥ ಎಂ. ಜಗದೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. 

ರಾಷ್ಟ್ರೀಯ ಅಹತಾ ಪರೀಕ್ಷೆಯ ಫೇಸ್‌ 2 ಎಕ್ಸಾಂ ಆಗಸ್ಟ್‌ 12 ರಿಂದ 14 ರ ಬದಲಾಗಿ ಸೆಪ್ಟೆಂಬರ್ 12 ರಿಂದ 20 ರವರೆಗೆ ನಡೆಯಲಿದೆ ಎಂದು ಜಗದೀಶ್‌ ಕುಮಾರ್‌ ದೆಹಲಿಯಲ್ಲಿ ತಿಳಿಸಿದ್ದಾರೆ. "ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) (National Testing Agency) ಯುಜಿಸಿ-ನೆಟ್ ಡಿಸೆಂಬರ್ 2021 ಮತ್ತು ಜೂನ್ 2022 ಪರೀಕ್ಷೆಯನ್ನು ಜುಲೈ 9, 11 ಮತ್ತು 12, 2022 ರಂದು 33 ವಿಷಯಗಳಿಗೆ 310 ಪರೀಕ್ಷಾ ಕೇಂದ್ರಗಳಲ್ಲಿ ದೇಶಾದ್ಯಂತ 225 ನಗರಗಳಲ್ಲಿ ನಡೆಸಿತ್ತು’’ ಎಂದೂ ಅವರು ಹೇಳಿದ್ದಾರೆ.

23,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳು ಇಂದಿನಿಂದ ಉಚಿತವಾಗಿ ಲಭ್ಯ: UGC

ಇನ್ನು, "ಎರಡನೇ ಹಂತದ ಪರೀಕ್ಷೆಯನ್ನು ಈ ಹಿಂದೆ 12, 13 ಮತ್ತು 14 ಆಗಸ್ಟ್ 2022 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ UGC-NET ಡಿಸೆಂಬರ್ 2021 ಮತ್ತು ಜೂನ್ 2022 ಅಂತಿಮ ಹಂತದ ಪರೀಕ್ಷೆಯನ್ನು 20 ಮತ್ತು 30 ಸೆಪ್ಟೆಂಬರ್ 2022 ರ ನಡುವೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ, ಈ ಪರೀಕ್ಷೆ 64 ವಿಷಯಗಳನ್ನು ಒಳಗೊಂಡಿರುತ್ತದೆ" ಎಂದೂ ವಿಶ್ವವಿದ್ಯಾಲಯದ ಅನುದಾನ ಆಯೋಗದ ಮುಖ್ಯಸ್ಥ ಎಂ. ಜಗದೀಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.  

ಇನ್ನು, ಯುಜಿಸಿ ನೆಟ್‌ (UGC NET) 2022 ಪರೀಕ್ಷೆಯ  ಪ್ರವೇಶ ಪತ್ರವನ್ನು (Admit Card) ವಿದ್ಯಾರ್ಥಿಗಳು ಆನ್‌ಲೈನ್ ಮೋಡ್‌ನಲ್ಲಿ ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. NTA UGC NET ಪ್ರವೇಶ ಕಾರ್ಡ್ 2022 ಅನ್ನು ಡೌನ್‌ಲೋಡ್ ಮಾಡಲು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಲಾಗಿನ್ ಪೋರ್ಟಲ್‌ನಲ್ಲಿ ಎಂಟರ್‌ ಮಾಡಬೇಕಾಗುತ್ತದೆ. 

UGC NET 2022 Exam ಜೂನ್ ನಲ್ಲಿ ನಡೆಯಲಿದೆ ಯುಜಿಸಿ ನೆಟ್ ಪರೀಕ್ಷೆ

UGC NET ಪ್ರವೇಶ ಕಾರ್ಡ್ 2022 ಹಂತ 2 ಅನ್ನು ಡೌನ್‌ಲೋಡ್ ಮಾಡಲು ಕ್ರಮಗಳು ಹೀಗಿವೆ..
- UGC NET ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - ugcnet.nta.nic.in.
- ಮುಖಪುಟದ ಕೆಳಭಾಗದಲ್ಲಿರುವ "ಅಭ್ಯರ್ಥಿಗಳ ಚಟುವಟಿಕೆಗಳು" (Candidates Activities) ವಿಭಾಗದಲ್ಲಿ ಲಭ್ಯವಿರುವ UGC NET ಪ್ರವೇಶ ಕಾರ್ಡ್ ಲಿಂಕ್ ಅನ್ನು ಆಯ್ಕೆ ಮಾಡಿ.
- ಲಾಗಿನ್ ರುಜುವಾತುಗಳನ್ನು ಹಾಕಿ – UGC NET ಅಪ್ಲಿಕೇಶನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಹಾಗೂ ಅಲ್ಲಿ ಇರುವ ಭದ್ರತಾ ಪಿನ್ ಅನ್ನು ನಮೂದಿಸಿ.
- ಸೈನ್ ಇನ್ ಬಟನ್ ಆಯ್ಕೆಮಾಡಿ.
- UGC NET ಪ್ರವೇಶ ಕಾರ್ಡ್ 2022 ನಿಮ್ಮ ಪರದೆಯ ಮೇಲೆ ಲಭ್ಯವಿರುತ್ತದೆ.
- ನಿಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಿ
- ಹೆಚ್ಚಿನ ಬಳಕೆಗಾಗಿ UGC NET 2022 ಹಾಲ್ ಟಿಕೆಟ್‌ನ ಪ್ರಿಂಟೌಟ್ ಅನ್ನು ಇರಿಸಿಕೊಳ್ಳಿ.

Follow Us:
Download App:
  • android
  • ios