23,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳು ಇಂದಿನಿಂದ ಉಚಿತವಾಗಿ ಲಭ್ಯ: UGC
ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ ಮತ್ತು ಬಾಲ್ಯದ ಆರೈಕೆಯ ಕಾರ್ಯಕ್ರಮಗಳು ಸೇರಿದಂತೆ 23,000 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳು ಶುಕ್ರವಾರದಿಂದ ಹೊಸ ವೆಬ್ ಪೋರ್ಟಲ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ.
ದೇಶದಲ್ಲಿ ಶಿಕ್ಷಣ ತುಂಬಾ ದುಬಾರಿಯಾಗುತ್ತಿದೆ ಎಂಬ ಸಾಮಾನ್ಯ ಜನರು ನೋವು ತೋಡಿಕೊಳ್ಳುವುದು ಹೆಚ್ಚಾಗುತ್ತಲೇ ಇದೆ. ಶಿಕ್ಷಣ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದಂತೆ ಶಿಕ್ಷಣ ದುಬಾರಿಯಾಗುತ್ತಿದೆ, ಬಡ ಹಾಗೂ ಮಧ್ಯಮ ವರ್ಗದವರ ಜನಕ್ಕೆ ಎಟುಕುತ್ತಿಲ್ಲ ಎಂಬ ದೂರುಗಳು ಸಹ ಸಾಮಾನ್ಯ. ಆದರೆ, ಇಲ್ಲಿದೆ ಒಂದು ಸಿಹಿ ಸುದ್ದಿ. ಏಕೆಂದರೆ, ಇಂದಿನಿಂದ 23,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಯಡಿ ಉಚಿತವಾಗಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದೆ.
ಕೃತಕ ಬುದ್ಧಿಮತ್ತೆ (AI), ಸೈಬರ್ ಭದ್ರತೆ ಮತ್ತು ಬಾಲ್ಯದ ಆರೈಕೆಯ ಕಾರ್ಯಕ್ರಮಗಳು ಸೇರಿದಂತೆ 23,000 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಕೋರ್ಸ್‌ಗಳು ಶುಕ್ರವಾರದಿಂದ ಹೊಸ ವೆಬ್ ಪೋರ್ಟಲ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ. ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ಮತ್ತು ದೇಶದ ದೂರದ ಭಾಗಗಳಲ್ಲಿ ಉನ್ನತ ಶಿಕ್ಷಣದ ಪ್ರವೇಶವನ್ನು ಹೆಚ್ಚಿಸುವ ಗುರಿಯನ್ನು ಈ ನೂತನ ಪೋರ್ಟಲ್ ಹೊಂದಿದೆ ಎಂದೂ ಹೇಳಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಜುಲೈ 29, 2022ರಂದು ಇದನ್ನು ಪ್ರಾರಂಭಿಸಲಾಗುವುದು ಎಂದೂ ಮಾಹಿತಿ ನೀಡಲಾಗಿದೆ.
ವೃತ್ತಿಪರರಿಗೆ ಪಾರ್ಟ್‌ಟೈಮ್ ಪಿಎಚ್‌ಡಿ ಮಾಡಲಿನ್ನು ಅವಕಾಶ
2022-23 ರ ಮುಂಬರುವ ಶೈಕ್ಷಣಿಕ ಅವಧಿಯಿಂದ ಈ ಕೋರ್ಸ್‌ಗಳನ್ನು ಉಚಿತವಾಗಿ ನೀಡಲು ತಮ್ಮ 7.5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು (CSC) ಮತ್ತು ವಿಶೇಷ ಉದ್ದೇಶದ ವೆಹಿಕಲ್ (SPV) ಕೇಂದ್ರಗಳೊಂದಿಗೆ ಇ-ಸಂಪನ್ಮೂಲಗಳನ್ನು ಸಂಯೋಜಿಸಲು UGC ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. "ಉನ್ನತ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನದ ಭಾಗವಾಗಿ, ಯುಜಿಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಗುರುವಾರ ಹೇಳಿದರು.
ಡಿಜಿಟಲ್ ಪ್ರವೇಶವನ್ನು ಒದಗಿಸುವುದು ಮತ್ತು ಇ-ಆಡಳಿತ ಸೇವೆಗಳನ್ನು ನಾಗರಿಕರಿಗೆ ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ವಾಸಿಸುವವರಿಗೆ ಅವರ ಮನೆ ಬಾಗಿಲಿಗೆ ಲಭ್ಯವಾಗುವಂತೆ ಮಾಡುವುದು ಈ ಸಾಮಾನ್ಯ ಸೇವಾ ಕೇಂದ್ರಗಳು (CSC) ಗುರಿಯಾಗಿದೆ. ಇನ್ನು, ದೇಶಾದ್ಯಂತ ಗ್ರಾಮ ಪಂಚಾಯತ್‌ಗಳಲ್ಲಿ ಸುಮಾರು 2.5 ಲಕ್ಷ CSCಗಳು ಮತ್ತು SPVಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ 5 ಲಕ್ಷಕ್ಕೂ ಹೆಚ್ಚು CSC/SPV ಕೇಂದ್ರಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ ಎಂದೂ ತಿಳಿದುಬಂದಿದೆ.
ಇಂಗ್ಲೀಷ್ ಜ್ಞಾನದ ಬಗ್ಗೆ ಟೀಕೆಗೊಳಗಾಗುತ್ತಿದ್ದ ಯುವತಿ ಈಗ ಐಎಎಸ್ ಅಧಿಕಾರಿ..!
"CSC ಗಳು ಮತ್ತು SPV ಗಳನ್ನು ಸ್ಥಳೀಯ ಸಮುದಾಯಕ್ಕೆ ಸೇರಿದ ಮತ್ತು ಗ್ರಾಮ ಮಟ್ಟದ ಉದ್ಯಮಿಗಳು (VLE ಗಳು) ಎಂದು ಕರೆಯಲ್ಪಡುವ ಉದ್ಯಮಿಗಳು ನಿರ್ವಹಿಸುತ್ತಿದ್ದಾರೆ. ಆನ್‌ಲೈನ್ ಸೇವೆಗಳನ್ನು ನೀಡುವ ಮೂಲಕ ಗ್ರಾಮ ಮಟ್ಟದ ಉದ್ಯಮಿಗಳು ತಮ್ಮ ಜೀವನವನ್ನು ಗಳಿಸಲು ಕೇಂದ್ರಗಳನ್ನು ನಿರ್ವಹಿಸುತ್ತವೆ. ಈ ಕೇಂದ್ರಗಳು ಕಂಪ್ಯೂಟರ್‌ಗಳು ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ’ ಎಂದೂ ಜಗದೀಶ್ ಕುಮಾರ್ ಹೇಳಿದರು.
23,000 ಸ್ನಾತಕೋತ್ತರ ಕೋರ್ಸ್‌ಗಳು, ಉದಯೋನ್ಮುಖ ಪ್ರದೇಶಗಳಲ್ಲಿ 137 ಸ್ವಯಂ MOOC ಕೋರ್ಸ್‌ಗಳು ಮತ್ತು 25 ಇಂಜಿನಿಯರಿಂಗ್ ಅಲ್ಲದ SWAYAM ಸೇರಿ 23 ಸಾವಿರಕ್ಕೂ ಅಧಿಕ ಕೋರ್ಸ್‌ಗಳನ್ನು ಈ ಪೋರ್ಟಲ್ ಒಳಗೊಂಡಿದೆ. ಹಾಗೂ, ಯುಜಿಸಿ ಪೋರ್ಟಲ್‌ನಲ್ಲಿ ಈ ಕೋರ್ಸ್ ಅನ್ನು ಅಧ್ಯಯನ ಮಾಡಲು ಯಾವುದೇ ಶುಲ್ಕಗಳಿಲ್ಲ. ಅಂದರೆ ಉಚಿತವಾಗಿ ಅಧ್ಯಯನ ಮಾಡಬಹುದಾಗಿದೆ.
"ಎಲ್ಲಾ ಕೋರ್ಸ್‌ಗಳು ಉಚಿತ. ಆದರೂ, ಸಿಎಸ್‌ಸಿ/ಎಸ್‌ವಿಪಿಯ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಪಡೆಯಲು, ವಿಎಲ್‌ಇಗಳ ಪ್ರಯತ್ನ ಮತ್ತು ಮೂಲಸೌಕರ್ಯದ ವೆಚ್ಚವನ್ನು ಮರುಪಾವತಿಸಲು ಬಳಕೆದಾರರು ದಿನಕ್ಕೆ ರೂ. 20 ಅಥವಾ ತಿಂಗಳಿಗೆ ರೂ. 500 ಶುಲ್ಕವನ್ನು ಪಾವತಿಸಬೇಕಾಗುತ್ತದೆ" ಎಂದು ಸಹ ಜಗದೀಶ್ ಕುಮಾರ್ ಹೇಳಿದರು.
"ಇದು ಆಯುಷ್ಮಾನ್ ಭಾರತ್ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಇ-ಶ್ರಮ್, ಪ್ಯಾನ್ ಕಾರ್ಡ್, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾಂಧನ್ ಯೋಜನೆ (ಪಿಎಂಎಸ್‌ವೈಎಂ) ಮತ್ತು ಇತರ ಅನೇಕ ಸರ್ಕಾರಿ ಯೋಜನೆಗಳನ್ನು ಹೋಲುತ್ತದೆ ಎಂದು ಅವರು ಹೇಳಿದರು.