UGC NET 2022 Exam ಜೂನ್ ನಲ್ಲಿ ನಡೆಯಲಿದೆ ಯುಜಿಸಿ ನೆಟ್ ಪರೀಕ್ಷೆ

UGC ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿರ್ಧರಿಸಿದೆ.

University Grants Commission NET 2022 exam in June gow

ನವದೆಹಲಿ (ಏ.11): ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (University Grants Commission -UGC) ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು  (National Eligibility Test -NET) ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ( National Testing Agency-NTA) ತೀರ್ಮಾನಿಸಿದೆ ಎಂದು ಯುಜಿಸಿ  ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಭಾನುವಾರ ತಿಳಿಸಿದ್ದಾರೆ.  ವೇಳಾಪಟ್ಟಿ  ಮತ್ತು ಇತರ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್ ಆದ ugcnet.nta.nic.in ನಲ್ಲಿ  ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

 ಆದರೆ UGC-NET ಪರೀಕ್ಷೆಯ ದಿನಾಂಕವನ್ನು (ಡಿಸೆಂಬರ್ 2021 ಮತ್ತು ಜೂನ್ 2022 ವಿಲೀನ) ಇನ್ನೂ ಪ್ರಕಟಿಸಲಾಗಿಲ್ಲ.  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರೀಕ್ಷಾ ದಿನಾಂಕವನ್ನು ಅಂತಿಮಗೊಳಿಸಿದ ನಂತರ ಈ ಬಗ್ಗೆ ತಿಳಿಯಲಿದೆ. 

ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಯುಜಿಸಿ  ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್‌, "ಡಿಸೆಂಬರ್ 2021 ಮತ್ತು ಜೂನ್ 2022 ರ ವಿಲೀನ ಪರೀಕ್ಷೆಗಳಿಗೆ ಮುಂದಿನ UGC-NET ಅನ್ನು ಜೂನ್ 2022 ರ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸಲಾಗುವುದು. NTA ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ನಿಖರವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.

ZERODHA BMI CHALLENGE ಈ ಕಂಪನಿಯಲ್ಲಿ ಬೋನಸ್ ಬೇಕಾದರೆ ದೇಹದ ತೂಕ ಇಳಿಸಿಕೊಳ್ಳಬೇಕು!

 

ಯುಜಿಸಿ ನೆಟ್ ಬರೆಯಲು ಯಾರು ಅರ್ಹರು: ರಾಷ್ಟ್ರೀಯ ಮಟ್ಟದ ಈ ಪರೀಕ್ಷೆಯು ಕಂಪ್ಯೂಟರ್ ಮಾದರಿಯ ಪರೀಕ್ಷೆಯಾಗಿದೆ. ಯಾರು ಸ್ನಾತಕೋತ್ತರ ಪದವಿಯಲ್ಲಿ ಶೇ.55 ಅಂಕ ಗಳಿಸಿರುತ್ತೀರೋ ಅವರು ಯುಜಿಸಿ ನೆಟ್ ಪರೀಕ್ಷೆ ಬರೆಯಲು ಅರ್ಹರು. ಇನ್ನು ಸ್ನಾತಕೋತ್ತರ ಪರೀಕ್ಷೆಯಲ್ಲಿ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಶೇ.50 ಅಂಕ ಗಳಿಸಿದ್ದರೆ ಸಾಕು ಯುಜಿಸಿ ನೆಟ್ ಪರೀಕ್ಷೆ ಬರೆಯಲು ಅರ್ಹತೆ ಪಡೆದುಕೊಳ್ಳುತ್ತಾರೆ.

ಈ ಪರೀಕ್ಷೆಯನ್ನು ವಿವಿಧ ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ, ಜೂನಿಯರ್ ರಿಸರ್ಚ್ ಫೆಲೋಶಿಪ್ ಅಥವಾ ಎರಡರ ಅರ್ಹತೆಗಾಗಿ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ನಡೆಸಲಾಗುತ್ತದೆ.

Udupi Anganwadi Recruitment 2022: ಅಂಗನವಾಡಿ ಕೇಂದ್ರದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ

ಕೊವಿಡ್​ನಿಂದ ಪರೀಕ್ಷೆ ವಿಲೀನ: UGC-NET ಪರೀಕ್ಷೆಯನ್ನು ಪ್ರತಿ ವರ್ಷ ಎರಡು ಬಾರಿ ನಡೆಸಲಾಗುತ್ತದೆ. ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ UGC ಪರೀಕ್ಷೆಯ ವರ್ಷದ ಎರಡು ಅವಧಿಗಳನ್ನು ವಿಲೀನಗೊಳಿಸಲು ಮತ್ತು ವರ್ಷಕ್ಕೊಮ್ಮೆ ನಡೆಸಲು ನಿರ್ಧರಿಸಿದೆ.

 

ಯುಜಿಸಿ ಟ್ವಿಟರ್ ಖಾತೆ ಹ್ಯಾಕ್! ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಟ್ವಿಟರ್ ಖಾತೆಯು ಶನಿವಾರ ತಡರಾತ್ರಿ ಹ್ಯಾಕ್  ಮಾಡಲಾಗಿತ್ತು. ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು ಏಪ್ರಿಲ್ 9 ರಿಂದ ಬೆಳಕಿಗೆ ಬಂದಿತ್ತು.  ಹ್ಯಾಕರ್‌ಗಳು ಖಾತೆಯನ್ನು ಹ್ಯಾಕ್ ಮಾಡಿದ್ದು ಮಾತ್ರವಲ್ಲದೆ ಖಾತೆಯಿಂದ ಎನ್‌ಎಫ್‌ಟಿಗೆ ಸಂಬಂಧಿಸಿದ ಹಲವಾರು ಟ್ವೀಟ್‌ಗಳನ್ನು ಸಹ ಮಾಡಿದ್ದರು.  ಎಪ್ರಿಲ್ 10 ರಂದು ಹ್ಯಾಕ್ ಮಾಡಿರುವ ಖಾತೆಯನ್ನು ಸರಿ ಪಡಿಸಲಾಗಿದ್ದು, ಈ ಬಗ್ಗೆ UGC India ಟ್ವೀಟ್ ಮಾಡಿ ತಿಳಿಸಿದೆ.

Latest Videos
Follow Us:
Download App:
  • android
  • ios